ಬೆಂಗಳೂರು: ದಶಕದ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ಟಾಪ್ ನಾಯಕಿಯಾಗಿದ್ದ ನಟಿ ವಿಜಯಲಕ್ಷ್ಮಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ತೀವ್ರವಾದ ಸುಸ್ತು ಮತ್ತು ಹೈ ಬಿಪಿಯಿಂದ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಚಿತ್ರರಂಗದ ಸಹಾಯ ಹಸ್ತಕ್ಕಾಗಿ ಕಾಯುತ್ತಿದ್ದಾರೆ.
ಕಳೆದ ವಾರ ತಾಯಿಗೆ ಹೆಲ್ತ್ ಪ್ರಾಬ್ಲಂ ಆಗಿತ್ತು. ಈಗ ಸಡನ್ ಆಗಿ ನನ್ನ ತಂಗಿ ವಿಜಯಲಕ್ಷ್ಮಿ ಆನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ. ಇದ್ದ ಹಣವೆಲ್ಲ ತಾಯಿಯ ಚಿಕಿತ್ಸೆಗೆ ಖರ್ಚು ಮಾಡಿದ್ದೀವಿ. ಈಗ ನಮಗೆ ಕನ್ನಡ ಚಿತ್ರರಂಗ ಧನ ಸಹಾಯ ಮಾಡಬೇಕಿದೆ ಎಂದು ವಿಜಯಲಕ್ಷ್ಮಿ ಅವರ ಸಹೋದರಿ ಉಷಾದೇವಿ ಮನವಿ ಮಾಡಿದ್ದಾರೆ.
ಜೋಡಿಹಕ್ಕಿಯಲ್ಲಿ ನಟ ಶಿವರಾಜ್ ಕುಮಾರ್ ಹಾಗೂ ನಾಗಮಂಡಲ ಸಿನಿಮಾದಲ್ಲಿ ಪ್ರಕಾಶ್ ರೈ ಹಾಗೂ ಸೂರ್ಯವಂಶ ಸಿನಿಮಾದಲ್ಲಿ ದಿವಂಗತ ವಿಷ್ಣುವರ್ದನ್ ಜೊತೆ ನಟಿಸಿದ್ದರು.
Comments are closed.