ಮುಂಬೈ: ಉರಿ ಸರ್ಜಿಕಲ್ ಸ್ಟ್ರೈಕ್ ಚಿತ್ರ ಭರ್ಜರಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಇದೀಗ ದೇಶಭಕ್ತಿ ಸಾರುವಂತ ಅಭಿನಂದನ್, ಬಾಲಾಕೋಟ್ ಮತ್ತು ಪುಲ್ವಾಮಾ ಶೀರ್ಷಿಕೆಗಾಗಿ ಬಾಲಿವುಡ್ ನಿರ್ಮಾಪಕರ ಫೈಟ್ ಮಾಡುತ್ತಿದ್ದಾರೆ.
ಪುಲ್ವಾಮಾ: ದಿ ಡೆಡ್ಲಿ ಅಟ್ಯಾಕ್, ಸರ್ಜಿಕಲ್ ಸ್ಟ್ರೈಕ್ 2.0, ಪುಲ್ವಾಮಾ, ಬಾಲಾಕೋಟ್ ಶೀರ್ಷಿಕೆಗಳಿಗಾಗಿ ಬಾಲಿವುಡ್ ನಿರ್ಮಾಪಕರು ಫೈಟ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ವೀರಯೋಧ ಅಭಿನಂದನ್ ವರ್ತಮಾನ್ ಕುರಿತ ಚಿತ್ರ. ಪಾಕಿಸ್ತಾನ ನೆಲಕ್ಕೆ ನುಗ್ಗಿ ಭಾರತೀಯ ವಾಯುಸೇನೆ ನಡೆಸಿದ್ದ ವಿಚಾರವಾಗಿ ಸರ್ಜಿಕಲ್ ಸ್ಟ್ರೈಕ್ 2.0 ಅಥವಾ ಬಾಲಾಕೋಟ್ ದಾಳಿ ಹೀಗೆ ಒಂದೊಂದು ಶೀರ್ಷಿಕೆಗಾಗಿ ನಿರ್ಮಾಪಕರು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.
ಅಂಧೇರಿಯಲ್ಲಿನ ಇಂಡಿಯನ್ ಮೋಷನ್ ಪಿಕ್ಟರ್ಸ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್(ಐಎಂಎಂಪಿಎ) ಅವರು ದೇಶಭಕ್ತಿ ಸಾರುವ ಚಿತ್ರಗಳ ಶೀರ್ಷಿಕೆ ಪಡೆಯಲು ಐವರು ನಿರ್ಮಾಪಕರು ಪೈಪೋಟಿ ನಡೆಸಿದ್ದಾರೆ ಎಂದು ಹೇಳಿದ್ದಾರೆ.
Comments are closed.