ಮನೋರಂಜನೆ

ನಿಜವಾದ ಹೀರೋ ಅಭಿನಂದನ್, ಅವರ ಮುಂದೆ ನಾವೆಲ್ಲಾ ಡಮ್ಮಿ: ನಟ ದರ್ಶನ್

Pinterest LinkedIn Tumblr

ಮೈಸೂರು: ಭಾರತೀಯ ವಾಯುಪಡೆ ಪೈಲಟ್ ಅಭಿನಂದನ್ ವರ್ತಮಾನ್ ಪಾಕಿಸ್ತಾನದ ವಶದಿಂದ ಬಿಡುಗಡೆಯಾಗಿ ಭಾರತಕ್ಕೆ ಆಗಮಿಸುತ್ತಿದ್ದಾರೆ. ಈ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಂದನ್ ಅವರೇ ನಿಜವಾದ ಹೀರೋ, ಅವರ ಮುಂದೆ ನಾವೆಲ್ಲಾ ಡಮ್ಮಿ ಎಂದು ಹೇಳುವ ಮೂಲಕ ಸೇನೆ ಹಾಗೂ ಸೈನಿಕರ ಬಗ್ಗೆ ತಮಗಿರುವ ಗೌರವವನ್ನು ಪ್ರಕಟಿಸಿದ್ದಾರೆ.

ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ರಾಯಭಾರಿಯಾಗಿರುವ ದರ್ಶನ್ ಮೈಸೂರಿನಲ್ಲಿ ತಾವೇ ತೆಗೆದಿರುವ ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ.

“ವಿಂಗ್ ಕಮಾಂಡರ್ ಅಭಿನಂದನ್ ಅವರೇ ನಿಜವಾದ ಹೀರೋ, ಅವರ ಮುಂದೆ ನಾವು ಡಮ್ಮಿ. ಇನ್ನೊಬ್ಬರ ನೆಲದಲ್ಲಿ ನಿಂತು ಇಷ್ಟು ಧೈರ್ಯವಾಗಿರುವ ಅವರ ಆತ್ಮಸ್ಥೈರ್ಯಕ್ಕೆ ಮೆಚ್ಚಲೇ ಬೇಕು. ಅವರಿಗೆ ಹ್ಯಾಟ್ಸ್ ಆಫ್ ಹೇಳುತ್ತೇನೆ” ದರ್ಶನ್ ಹೇಳಿದ್ದಾರೆ.

ಛಾಯಾಚಿತ್ರ ಪ್ರದರ್ಶನ ಕುರಿತು ವಿವರಿಸಿದ ನಟ “ಒಳ್ಳೆ ಉದ್ದೇಶದೊಡನೆ ಈ ಪ್ರದರ್ಶನ ಆಯೋಜನೆಯಾಗಿದೆ. ಇದರಿಂದ ಸಂಗ್ರಹವಾದ ಹಣವನ್ನು ವನ್ಯಜೀವಿ ಸಂರಕ್ಷಣೆಗಾಗಿ ಖರ್ಚು ಮಾಡಲಾಗುವುದು.” ಎಂದಿದ್ದಾರೆ.

ವಿಶ್ವ ವನ್ಯಜೀವಿ ದಿನವಾದ ಇಂದು (ಮಾರ್ಚ್ 1)ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ದರ್ಶನ್ ಅವರ ಛಾಯಾಚಿತ್ರ ಪ್ರದರ್ಶನ ಆಯೋಜನೆಯಾಗಿದೆ. ಮೂರು ದಿನಗಳ ಕಾಲ ನಡೆಯುವ ಈ ಪ್ರದರ್ಶನದಲ್ಲಿ ಛ್ಯಾಚಿತ್ರ ಖರೀದಿಗೆ ಸಹ ಅವಕಾಶವಿದೆ. ದರ್ಶನ್ ಅವರ ಆಟೋಗ್ರಾಫ್ ಜತೆಗೆ ಅವರು ತೆಗೆದ ಛಾಯಾಚಿತ್ರಗಳನ್ನು ಖರೀದಿಸಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದೆಲ್ಲದರ ನಡುವೆ ಇಂದು ದರ್ಶನ್ ಅಭಿನಯದ “ಯಜಮಾನ” ಚಿತ್ರ ಬಿಡುಗಡೆಯಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿದೆ.

Comments are closed.