ಮನೋರಂಜನೆ

ಸನ್ನಿ ಲಿಯೋನ್‌ ಇಲ್ಲಿಗೆ ಹೋಗಿದ್ದು ಯಾಕೆ ಗೊತ್ತಾ!?

Pinterest LinkedIn Tumblr


ನವದೆಹಲಿ: ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಅವರು ಭಿನ್ನ ಸಾಮರ್ಥ್ಯದ ಮಕ್ಕಳ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳೊಂದಿಗೆ ಅಮೂಲ್ಯ ಸಮಯವನ್ನು ಕಳೆದರು. ಬಾಲಿವುಡ್‌ ನಟಿಯೊಬ್ಬರು ತಮ್ಮಲ್ಲಿಗೆ ಭೇಟಿನೀಡಿದ್ದು ಮತ್ತು ತಮ್ಮೊಂದಿಗೆ ಖುಷಿಖುಷಿಯಾಗಿ ಸಮಯ ಕಳೆದಿದ್ದು ಅಲ್ಲಿದ್ದ ವಿಶಿಷ್ಟ ಸಾಮರ್ಥ್ಯದ ಮಕ್ಕಳ ಮುಖದಲ್ಲಿ ಸಂತೋಷವನ್ನುಂಟುಮಾಡಿತ್ತು.

ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಮತ್ತು ಹಿರಿಯ ನಾಗರಿಕರಿಗೆ ಜಲ ಥೆರಪಿಯ ಅಗತ್ಯತೆಯನ್ನು ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಮತ್ತು ಆ ಮೂಲಕ ಜಲ ಥೆರಪಿಯ ಕುರಿತಾದ ಅರಿವಿನ ಜಾಗೃತಿಯ ಉದ್ದೇಶದಿಂದ ಸನ್ನಿಯ ಈ ಭೇಟಿ ನಿಗದಿಯಾಗಿತ್ತು. ಈ ಕುರಿತಾಗಿ ತನ್ನ ಇನ್‌ ಸ್ಟ್ರಾ ಗ್ರಾಂ ಖಾತೆಯಲ್ಲಿ ನಟಿ ಸನ್ನಿ ಲಿಯೋನ್‌ ಬರೆದುಕೊಂಡಿದ್ದಾರೆ ಮತ್ತು ಅಲ್ಲಿ ತಾನು ಮಕ್ಕಳೊಂದಿಗೆ ಕಳೆದ ಖುಷಿಯ ಕ್ಷಣಗಳ ಚಿತ್ರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ‘ನನ್ನ ಹೃದಯವನ್ನು ಕದ್ದ ನಿಜವಾದ ಯುವರಾಣಿಯರು’ ಎಂಬ ಶೀರ್ಷಿಕೆಯನ್ನು ನೀಡಿ ಚಿತ್ರಗಳನ್ನು ಮತ್ತು ಕಾರ್ಯಕ್ರಮದ ಉದ್ದೇಶಗಳನ್ನು ಪೋಸ್ಟ್‌ ಮಾಡಿದ್ದಾರೆ.

ಬಾಲಿವುಡ್‌ ಮಾತ್ರವಲ್ಲದೇ ಕನ್ನಡ ಚಿತ್ರಗಳಲ್ಲಿಯೂ ನಟಿಸಿರುವ ಸನ್ನಿ ಲಿಯೋನ್‌ ಹಲವಾರು ಸಾಮಾಜಿಕ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೀಗ ಮಲಯಾಳಂ ಚಿತ್ರವೊಂದರಲ್ಲಿ ನಡಿಸುವ ಮೂಲಕ ಸನ್ನಿ ಲಿಯೋನ್‌ ಅವರು ಮಾಲಿವುಡ್‌ ಗೂ ಎಂಟ್ರಿ ಕೊಟ್ಟಂತಾಗಿದೆ. ಸಂತೋಷ್‌ ನಾಯರ್‌ ಅವರ ‘ರಂಗೀಲಾ’ ಎಂಬ ಹೊಸ ಮಲಯಾಳಂ ಚಿತ್ರದಲ್ಲಿ ಸನ್ನಿ ಲಿಯೋನ್‌ ಅವರು ನಟಿಸುತ್ತಿದ್ದಾರೆ.

Comments are closed.