ಬೆಂಗಳೂರು: ನಾನು ಮಂಡ್ಯಕ್ಕೆ ಸುಮಲತಾ ಪರ ಪ್ರಚಾರಕ್ಕೆ ಹೋಗುತ್ತಿಲ್ಲ. ಸುಮಲತಾ ಕೂಡ ನನ್ನನ್ನು ಬೆಂಬಲ ಕೊರಿಲ್ಲ. ಸದ್ಯ ಅವರು ಕರೆದರೂ ಹೋಗಲ್ಲ. ದೇವರು ಬಡವ ನೀನು ಮಡಗಿದ ಹಾಗೆ ಹಾಗೆ ಇರು ಅಂತ ಹೇಳಿದ್ದಾನೆ. ರಾಜಕೀಯಕ್ಕೆ ಹೋಗಲು ತುಂಬಾ ಬುದ್ಧಿ ಬೇಕು. ನಾನು ಅಷ್ಟು ಬುದ್ದಿವಂತ ಅಲ್ಲ.ಸ್ವಲ್ಪ ಬುದ್ದಿ ಬಂದಿದೆ ಅದನ್ನು ಕಾಪಾಡಿಕೊಳ್ಳುತ್ತೇನೆ ಎಂದು ಹೇಳಿದ್ದು ನಟ ಶಿವರಾಜ್ ಕುಮಾರ್.
ರಾಜಕೀಯ ದಯವಿಟ್ಟು ಬೇಡ ಸಾರ್. ಕಾವೇರಿ ಗಲಾಟೆಯಲ್ಲೂ ಜನ ನಟರು ಬರಲಿಲ್ಲ ಎಂದು ಕೇಳುತ್ತಾರೆ. ಆದರೆ ಅಲ್ಲಿ ಬಂದು ಏನು ಮಾಡೋಣ ಹೇಳಿ. ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಬೇಕು. ನಮ್ಮನ್ನೂ ಕರೆಯಿರಿ, ಬಂದು ಅವರ ಮನೆ ಮುಂದೆ ಕೂರೋಣ. ಅಲ್ಲಿ ಬಂದರೆ ಜನ ಸೆಲ್ಫಿಗೆ ಮುಗಿ ಬೀಳ್ತಾರೆ. ಕೆಲವು ಬಾರಿ ಎಷ್ಟು ಬೈದರೂ, ಕೋಪ ಮಾಡಿಕೊಂಡರೂ ಅದು ನಿಲ್ಲಲ್ಲ. ಶಿವಮೊಗ್ಗಕ್ಕೂ ಪ್ರಚಾರಕ್ಕೆ ಹೋಗುವುದಿಲ್ಲ. ಅಂದು ನನ್ನ ಪತ್ನಿಗಾಗಿ ಪ್ರಚಾರಕ್ಕೆ ಹೋಗಿದ್ದೆ ಎಂದು ಹೇಳಿದರು.
ಈಗ ಗೀತಾ ಅವರು ಮಧು ಪರವಾಗಿ ಪ್ರಚಾರಕ್ಕೆ ಹೋಗಬಹುದು. ನಾನು ಬರಬೇಕು ಅಂತ ಮಧು ಬಂಗಾರಪ್ಪ ಸಹ ಭಾವಿಸುವುದಿಲ್ಲ ಎಂದು ಹೇಳಿದರು.
Comments are closed.