ಮನೋರಂಜನೆ

ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಜೊತೆ ಕೊಹ್ಲಿ ತಿರುಗಾಟ

Pinterest LinkedIn Tumblr


ಮುಂಬೈ: ಬಾಲಿವುಡ್ ಬೆಡಗಿ ಸನ್ನಿ ಲಿಯೋನ್, ವಿರಾಟ್ ಕೊಹ್ಲಿ ಜೊತೆಯಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಈ ವಿಡಿಯೋ ನೋಡಿದ ಅಭಿಮಾನಿಗಳಲ್ಲಿ ಈಗ ಅನುಮಾನ ಮೂಡಿದೆ.

ಈ ವಿಡಿಯೋದಲ್ಲಿ ಸನ್ನಿ ಒಬ್ಬ ವ್ಯಕ್ತಿ ಜೊತೆ ವಿಮಾನ ನಿಲ್ದಾಣದಿಂದ ಹೊರಬಂದಿದ್ದಾರೆ. ಆ ವಿಡಿಯೋದಲ್ಲಿದ್ದ ವ್ಯಕ್ತಿಯನ್ನು ಭಾರತದ ಕ್ರಿಕೆಟ್ ತಂಡದ ಆಟಗಾರ ವಿರಾಟ್ ಕೊಹ್ಲಿಯಂತೆ ಕಾಣುತ್ತಾರೆ. ಆದರೆ ಅವರು ವಿರಾಟ್ ಕೊಹ್ಲಿ ಅಲ್ಲ.

ವಿಡಿಯೋಗ್ರಾಫರ್ ವಿರಲ್ ಭಯಾನಿ ಈ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಹಾಕಿ ಅವರು, “ಒಂದು ಸೆಕೆಂಡ್ ಈ ವಿಡಿಯೋ ನೋಡಿ ವಿರಾಟ್ ಕೊಹ್ಲಿ ಮೈದಾನದಲ್ಲಿ ಇರುವುದು ಬಿಟ್ಟು ಇಲ್ಲಿ ಏನೋ ಮಾಡುತ್ತಿದ್ದಾರೆ ಎಂದು ಅನಿಸಿತು” ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ 3 ಗಂಟೆಯಲ್ಲಿ 80 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. ಅಲ್ಲದೆ ಹಲವು ಮಂದಿ ಶೇರ್ ಮಾಡಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಐಪಿಎಲ್‍ನಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಈ ವಿಡಿಯೋದಲ್ಲಿರುವ ವ್ಯಕ್ತಿ ಯಾರು ಎಂದು ಜನರು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಪ್ರಶ್ನಿಸಿದ್ದಾರೆ. ವಿರಾಟ್ ಕೊಹ್ಲಿ ರೀತಿ ಕಾಣುವ ಈ ವ್ಯಕ್ತಿ ಯಾರು ಎಂದು ಪ್ರಶ್ನಿಸಿದ್ದಾರೆ. ಅಸಲಿಗೆ ಈ ವಿಡಿಯೋದಲ್ಲಿ ಇರುವುದು ವಿರಾಟ್ ಕೊಹ್ಲಿ ಅಲ್ಲ. ಬದಲಿಗೆ ಅವರಂತೆ ಕಾಣುವ ಸನ್ನಿ ಲಿಯೋನ್‍ನ ಮ್ಯಾನೇಜರ್ ಸನ್ನಿ ರಜನಿ. ಸನ್ನಿ ಲಿಯೋನ್ ಮ್ಯಾನೇಜರ್ ನೋಡಲು ವಿರಾಟ್ ಕೊಹ್ಲಿ ಅಂತೆ ಇದ್ದು, ಈಗ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿದೆ.

ಸದ್ಯ ಸನ್ನಿ ಲಿಯೋನ್ ಈಗ ‘ವೀರಮಾದೇವಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Comments are closed.