ಹೈದರಾಬಾದ್: ಇತ್ತೀಚೆಗಷ್ಟೆ ನಟಿ ಸಾಯಿ ಪಲ್ಲವಿ ಅವರು ನಟಿ ಅಮಲಾ ಪೌಲ್ ಮಾಜಿ ಪತಿ ವಿಜಯ್ ಜೊತೆ ಡೇಟಿಂಗ್‍ನಲ್ಲಿ ಇದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೇ ಸಾಯಿ ಪಲ್ಲವಿ ಅವರು ಮದುಮಗಳಂತೆ ರೆಡಿಯಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ಸಾಯಿ ಪಲ್ಲವಿ ಅವರು ಕೇರಳ ಸಾಂಪ್ರದಾಯದ ರೀತಿ ರೇಷ್ಮೆ ಸೀರೆ ತೊಟ್ಟು ಮದುಮಗಳಂತೆ ಅಲಂಕಾರ ಮಾಡಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಇದೀ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸಾಯಿ ಪಲ್ಲವಿ ಅವರು “ಈ ವರ್ಷ ವಿಷು ಅಂದರೆ ಯುಗಾದಿ ಹಬ್ಬ ತುಂಬಾ ಬೇಗ ಬಂದಿದೆ” ಎಂದು ಟ್ವೀಟ್ ಮಾಡಿದ್ದಾರೆ. ಸೀರೆ ಬಿಳಿ ಬಣ್ಣ ಹಾಗೂ ಗೋಲ್ಡನ್ ಬಣ್ಣದ ಬಾರ್ಡರ್ ಇದ್ದು, ಕೇರಳ ಸಂಪ್ರದಾಯದ ರೇಷ್ಮೆ ಸೀರೆಯಾಗಿದೆ. ಫೋಟೋಗೆ ವಿವಿಧ ರೀತಿ ಪೋಸ್ ಕೊಟ್ಟಿದ್ದು, ಈ ಸೀರೆಯಲ್ಲಿ ಸಾಯಿ ಪಲ್ಲವಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.
ಸಾಯಿ ಪಲ್ಲವಿ ಅವರು ಈ ಫೋಟೋಗಳನ್ನು ಟ್ವೀಟ್ ಮಾಡಿದ ತಕ್ಷಣ ಅಭಿಮಾನಿಗಳು ಲೈಕ್ಸ್ ಮಾಡಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಟಿ ಸಾಯಿ ಪಲ್ಲವಿ ಅವರು ನಟಿ ಅಮಲಾ ಪೌಲ್ ಮಾಜಿ ಪತಿ ನಿರ್ದೇಶಕ ವಿಜಯ್ ಜೊತೆ ಡೇಟಿಂಗ್‍ನಲ್ಲಿದ್ದು, ಮದುವೆಯಾಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ವಿಜಯ್ ಅವರು, “ನನಗೆ ಸಾಯಿ ಪಲ್ಲವಿ ಅವರು ಕೇವಲ ಸ್ನೇಹಿತೆಯಷ್ಟೇ, ಜೊತೆಗೆ ಸದ್ಯಕ್ಕೆ ನಾನು ಯಾವ ಹುಡುಗಿಯನ್ನು ವಿವಾಹವಾಗುವ ಆಲೋಚನೆ ಇಲ್ಲ” ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
Comments are closed.