ಚೋಪ್ರಾ ಅವರ ಪತಿ ನಿಕ್ ಜೋನಸ್ ಮ್ಯೂಸಿಕ್ ಕಾನ್ಸರ್ಟ್‍ನಲ್ಲಿ ಮಹಿಳಾ ಅಭಿಮಾನಿಯೊಬ್ಬರು ಒಳುಉಡುಪನ್ನು ಎಸೆದಿದ್ದಾರೆ. ಬಳಿಕ ಅಲ್ಲಿಯೇ ಇದ್ದ ಪ್ರಿಯಾಂಕಾ ಚೋಪ್ರಾ ಖುಷಿಯಿಂದ ಅದನ್ನು ಎತ್ತಿಕೊಂಡು ಹೋಗಿರುವ ವಿಡಿಯೋ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ನಿಕ್ ಜೋನಸ್ ತನ್ನ ಸಹೋದರರ ಜೊತೆ ವೇದಿಕೆ ಮೇಲೆ ನಿಂತುಕೊಂಡಿದ್ದಾರೆ. ಪ್ರಿಯಾಂಕಾ, ನಿಕ್ ಅಭಿಮಾನಿಯಾಗಿ ಕಾನ್ಸರ್ಟ್ ಎಂಜಾಯ್ ಮಾಡುತ್ತಿದ್ದರು ಈ ಕಾನ್ಸರ್ಟ್ ಕೊನೆಯಲ್ಲಿ ನಿಕ್ ಜೋನಸ್ ಮೇಲೆ ಅವರ ಮಹಿಳಾ ಅಭಿಮಾನಿ ಒಳಉಡುಪನ್ನು ಎಸೆದಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ಇಷ್ಟು ಜನಪ್ರಿಯರಾಗಿದ್ದಾರೆ ಎಂದು ಆ ಒಳಉಡುಪನ್ನು ಖುಷಿಯಿಂದ ಎತ್ತಿಕೊಂಡು ಅಲ್ಲಿಂದ ಹೋಗಿದ್ದಾರೆ. ಅಲ್ಲದೆ ಆ ವಿಡಿಯೋವನ್ನು ಅವರು ತಮ್ಮ ಇನ್‍ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದರು.
ಪ್ರಿಯಾಂಕ ಹಾಗೂ ನಿಕ್ ಜೋಧಪುರದ ಉಮೈದ್ ಭವನದಲ್ಲಿ 2018 ಡಿಸೆಂಬರ್ 1 ಹಾಗೂ 2ರಂದು ಕ್ರಿಶ್ಚಿಯನ್ ಹಾಗೂ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದರು. ಪ್ರಿಯಾಂಕ ಹಾಗೂ ನಿಕ್ ಒಟ್ಟು ಮೂರು ಆರತಕ್ಷತೆ ಮಾಡಿಕೊಂಡಿದ್ದಾರೆ. ಅಲ್ಲದೇ ತಮ್ಮ ನಾಲ್ಕನೇ ಆರತಕ್ಷತೆಯನ್ನು ಅವರು ಅಮೆರಿಕಾದಲ್ಲಿ ಮಾಡಿಕೊಂಡಿದ್ದರು.
Comments are closed.