ಚಿತ್ರದುರ್ಗ: ಕೋಟೆ ನಗರಿ ಚಿತ್ರದುರ್ಗದ ಉರಿ ಬಿಸಿಲಿಗೆ ಬೆದರಿದ ನಟ ಉಪೇಂದ್ರ ಅವರು ಒಂದು ನಿಮಿಷದಲ್ಲೇ ರೋಡ್ ಶೋ ಮುಗಿಸಿ ತೆರಳಿದ್ದಾರೆ.
ಉಪೇಂದ್ರ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ನಡೆಸಬೇಕಿತ್ತು. ಪಟ್ಟಣದ ಶ್ರೀ ವೀರಭದ್ರಸ್ವಾಮಿ ದೇವಾಲಯದಿಂದ ರೋಡ್ ಶೋ ಬೆಳಗ್ಗೆ 9 ಗಂಟೆಗೆ ಅರಂಭವಾಗಬೇಕಿತ್ತು. ಆದರೆ ಅವರು ಅರ್ಧ ಗಂಟೆ ತಡವಾಗಿ ಆಗಮಿಸಿದ್ದರು. ಬಳಿಕ ದೇವಾಲಯಕ್ಕೆ ಭೇಟಿ ನೀಡಿದ ಅವರು ರೋಡ್ ಶೋ ಆರಂಭಿಸಿದ್ದರು.
ಉರಿ ಬಿಸಿಲನ ತಾಪ ತಾಳಲಾರದೇ ಕೇವಲ ಒಂದು ನಿಮಿಷದಲ್ಲಿ ಭಾಷಣ ಮುಗಿಸಿದ ಉಪೇಂದ್ರ ರೋಡ್ ಶೋ ಮೊಟಕುಗೊಳಿಸಿ ಕಾರು ಹತ್ತಿ ಸ್ಥಳದಿಂದ ತೆರಳಿದ್ದಾರೆ.
Comments are closed.