ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ಗಾಂವ್ಕರ್ ಮಧ್ಯರಾತ್ರಿ ಸಿಕ್ಕ ತಮ್ಮ ರಿಯಲ್ ಲೈಫ್ ಹೀರೋನನ್ನು ಪರಿಚಯಿಸಿದ್ದಾರೆ. ಮೇಘನಾ ಆ ವ್ಯಕ್ತಿಯ ಫೋಟೋವನ್ನು ತಮ್ಮ ಫೇಸ್‍ಬುಕ್‍ನಲ್ಲಿ ಹಂಚಿಕೊಂಡು ನಿಜ ಜೀವನದ ಹೀರೋ ಎಂದು ಬರೆದುಕೊಂಡಿದ್ದಾರೆ.
ಪೋಸ್ಟ್ ನಲ್ಲಿ ಏನಿದೆ?
ಅಣ್ಣನನ್ನು ಮೀಟ್ ಮಾಡಿ. (ಇದು ಅವರ ನಿಜವಾದ ಹೆಸರು). ಅಣ್ಣ ನಿಜ ಜೀವನದ ಹೀರೋ.
ಒಂದು ರಾತ್ರಿ ನಾನು ನನ್ನ ಕಾರನ್ನು ಪಾರ್ಕ್ ಮಾಡಿ ಚಿತ್ರ ನೋಡಲು ಥಿಯೇಟರ್ ಗೆ ಹೋಗಿದೆ. ನಾನು ಹಿಂತಿರುಗಿ ಬಂದಾಗ ತುಂಬ ಕತ್ತಲಾಗಿತ್ತು. ಅಲ್ಲದೆ ಅಣ್ಣ ನನ್ನ ಕಾರಿನ ಬಳಿ ನನಗಾಗಿ ಕಾಯುತ್ತಿದ್ದರು. ನಾನು ಪಾರ್ಕಿಂಗ್ ಶುಲ್ಕ ಕಟ್ಟಿದ್ದೇನೆ ಆದರೂ ಇವರು ಯಾಕೆ ಇಲ್ಲಿ ನಿಂತಿದ್ದಾರೆ ಎಂದು ಯೋಚಿಸುತ್ತಿದ್ದೆ. ಬಳಿಕ ನಾನು ನನ್ನ ಕಾರಿನ ಕಿಟಕಿಯನ್ನು ಅರ್ಧ ತೆರೆದಿರುವುದನ್ನು ಗಮನಿಸಿದೆ. ನಾನು ಕಾರಿನ ಕಿಟಕಿ ಅರ್ಧ ತೆರೆದಿದ್ದಾಗ ಕೆಲವರು ಆ ಸಮಯವನ್ನು ಯಾರೂ ಲಾಭ ಪಡೆಯಬಾರದು ಎಂದು ಈ ವ್ಯಕ್ತಿ ನನಗಾಗಿ ನನ್ನ ಕಾರಿನ ಬಳಿ ಸುಮಾರು 3-4 ಗಂಟೆಯವರೆಗೂ ಕಾಯುತ್ತಿದ್ದರು.
ನಾನು ಈ ವ್ಯಕ್ತಿಗೆ ಧನ್ಯವಾದ ತಿಳಿಸಿ ಅವರು ಮಾಡಿದ ಕೆಲಸಕ್ಕೆ ಹಣ ನೀಡಲು ಮುಂದಾದೆ. ಆದರೆ ಅವರು ಹಣ ತೆಗೆದುಕೊಳ್ಳಲು ನಿರಾಕರಿಸಿದರು. ನನ್ನ ದೇಶ ಇಂತಹ ವ್ಯಕ್ತಿಗಳಿಂದ ಕೂಡಿದೆ. ಇವರಲ್ಲಿ ಮಾನವಿಯತೆ, ಘನತೆ ಹಾಗೂ ಒಳ್ಳೆತನ ಇದೆ. ಈ ಘಟನೆ ನಡೆದು ಈಗ ಮೂರು ವರ್ಷವಾಗಿದೆ. ನಾನು ಈಗಲೂ ಆ ಸ್ಥಳಕ್ಕೆ ಹೋದಾಗ ಅದೇ ಜಾಗದಲ್ಲೇ ಕಾರು ಪಾರ್ಕ್ ಮಾಡುತ್ತೇನೆ. ಕಾರು ಪಾರ್ಕ್ ಮಾಡಿದ್ದಾಗ ಕಿಟಕಿ ಕ್ಲೋಸ್ ಇದೆಯಾ ಎಂಬುದನ್ನು ಚೆಕ್ ಮಾಡುತ್ತೇನೆ.
ಇದು ಸಣ್ಣ ವಿಷಯ ಎಂದು ಎಲ್ಲರಿಗೂ ಅನಿಸುತ್ತದೆ. ಆದರೆ ಈ ವ್ಯಕ್ತಿಯ ಒಳ್ಳೆಯ ಹೃದಯ ನೋಡಿದರೆ, ಈ ಜಗತ್ತಿನಲ್ಲಿ ಏನೂ ಬಯಸದೇ ಒಳ್ಳೆಯ ಜನರು ಇದ್ದಾರೆ ಎಂದು ಅನಿಸುತ್ತದೆ. ನಾವಿಬ್ಬರು ಈಗ ಸ್ನೇಹಿತರಾಗಿದ್ದೇವೆ. ಇಬ್ಬರು ಚಹಾ ಕುಡಿಯಲು ಹೋಗುತ್ತೇವೆ ಹಾಗೂ ಪಾರ್ಕಿಂಗ್‍ಗಾಗಿ ಅಲ್ಲಿ ನಿಗದಿ ಪಡಿಸಿದ ಬೆಲೆಯನ್ನು ನಾನು ನೀಡುತ್ತೇನೆ. ನನಗೆ ಈ ವ್ಯಕ್ತಿ ಪರಿಚಯವಿದೆ ಎಂಬುದು ನನಗೆ ಹೆಮ್ಮೆ ವಿಷಯ.
ಕಳೆದ ವಾರ ಆ ವ್ಯಕ್ತಿ ಜೊತೆ ಫೋಟೋ ತೆಗೆದುಕೊಳ್ಳೋಣ ಎಂದು ಕೇಳಿದೆ. ಆಗ ಅವರು ಸರಿ ಎಂದು ಹೇಳಿದರು. ನಾನು ಮೊದಲ ಬಾರಿಗೆ ಒಬ್ಬ ವ್ಯಕ್ತಿ ಜೊತೆ ಫೋಟೋ ಕೇಳಿದರೆ ಅದು ಇವರ ಜೊತೆಗೆ ಎಂದು ಮೇಘನಾ ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.
Comments are closed.