‘ಗರ ‘ ಸೆಟ್ಟೇರಿದ ದಿನದಿಂದಲೂ ಸಖತ್ ಸುದ್ದಿ ಮಾಡುತ್ತಿರುವ ಸಿನಿಮಾ. ಸತತ ಎರಡು ವರ್ಷಗಳ ಪರಿಶ್ರಮ ಈಗ ಬೆಳ್ಳಿ ತೆರೆ ಮೇಲೆ ಬರೋಕೆ ಸಿದ್ದವಾಗಿದ್ದು ಶುಕ್ರವಾರ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗ್ತಿದೆ.
ಗರ ಟೈಟಲ್ ಎಷ್ಟು ಕ್ಯೂರಿಯಾಸಿಟಿ ಹುಟ್ಟಿಸಿತ್ತೋ ಸಿನಿಮಾ ಕೂಡ ಅಷ್ಟೇ ಕ್ಯೂರಿಯಾಸಿಟಿ ಬಿಲ್ಡ್ ಮಾಡಿ ಪ್ರೇಕ್ಷಕರನ್ನು ಹಿಡಿದಿಡುತ್ತೆ ಅನ್ನೋದು ಚಿತ್ರತಂಡಕ್ಕಿರೋ ಕಾನ್ಫಿಡೆನ್ಸ್ . ಚಿತ್ರ ಮೈನ್ ಹೈಲೈಟ್ ದೊಡ್ಡ ತಾರಬಳಗ . ಮೊದಲ ಬಾರಿಗೆ ಬಾಲಿವುಡ್ನ ಖ್ಯಾತ ಕಾಮಿಡಿಯನ್ ಜಾನಿ ಲಿವರ್ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಬಂದಿರೋದು ವಿಶೇಷ. ಸಾಧು ಕೋಕಿಲ ಹಾಗೂ ಜಾನಿ ಲಿವರ್ ಜುಗಲ್ಬಂದಿ ಚಿತ್ರದಲ್ಲಿದ್ದು ಇದು ಪ್ರೇಕ್ಷಕರಿಗೆ ಡಬಲ್ ಧಮಾಕ ನೀಡಲಿದೆ.
ಸಸ್ಪೆನ್ಸ್ ಎಂಡ್ ರೋಮ್ಯಾಂಟಿಂಕ್ ಕಹಾನಿ ಒಳಗೊಂಡ ಗರ ಈಗಾಗಲೇ ಟ್ರೇಲರ್ ಹಾಗೂ ಹಾಡುಗಳ ಮೂಲಕ ಸಖತ್ ಸೌಂಡ್ ಮಾಡುವುದರ ಜೊತೆ ನಿರೀಕ್ಷೆ ಹೆಚ್ಚಿಸಿದೆ.
ಮೊದಲ ಬಾರಿ ಬಿಗ್ಬಾಸ್ ಖ್ಯಾತಿಯ ರಹಮಾನ್ ಹಾಸನ್ ಫುಲ್ ಫ್ಲೆಡ್ಜ್ ಹೀರೋ ಆಗಿ ಅಭಿನಯಿಸಿದ್ದಾರೆ. ಮೂರು ಶೇಡ್ನಲ್ಲಿ ರೆಹಮಾನ್ ಇಲ್ಲಿ ಕಾಣಸಿಗಲಿದ್ದು ಚಿತ್ರದ ಮೇಲೆ ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇಂಡಿಯನ್ ರಿಯಾಲಿಟಿ ಶೋ ಖ್ಯಾತಿಯ ಪ್ರದೀಪ್ ಆರ್ಯನ್ ಚಿತ್ರದ ಮತ್ತೊಬ್ಬ ನಾಯಕ. ನೇಹಾ ಪಾಟೀಲ್, ಆವಂತಿಕ ಚಿತ್ರದ ನಾಯಕಿಯರು.
ಹೀಗೆ ಹತ್ತು ಹಲವು ವಿಶೇಷ ಹೊಂದಿರೋ ಗರ, ಆರ್ ಕೆ ನಾರಾಯಣ್ ಅವರ ಕಿರುಕಥೆಯನ್ನು ಆಧರಿಸಿದ ಸಿನಿಮಾ. ಅಪ್ಪಟ ಪ್ರಾಮಾಣಿಕ ಮೋಸಗಾರರ ಆಟ ಅನ್ನೋ ಟ್ಯಾಗ್ಲೈನ್ ಇರೋ ಈ ಚಿತ್ರವನ್ನು ಮುರುಳಿಕೃಷ್ಣ ನಿರ್ದೇಶನ ಮಾಡಿದ್ದಾರೆ. ಅಲ್ಲದೇ ರಮೇಶ್ ಭಟ್ ,ಪದ್ಮಜಾ ರಾವ್, ರಾಮಕೃಷ್ಣ, ಮಿಮಿಕ್ರಿ ದಯಾನಂದ್, ಸಾಧು ಸೇರಿದಂತೆ ದೊಡ್ಡ ಕಲಾವಿದರ ದಂಡನ್ನೆ ತೆರೆ ಮೇಲೆ ತಂದಿದ್ದಾರೆ ನಿರ್ದೇಶಕರು.
ಗಾಯಕಿ ಮಂಜುಳ ಗುರುರಾಜ್ ಮಗ ಸಾಗರ್ ಚಿತ್ರಕ್ಕೆ ಮೊದಲ ಬಾರಿ ಮ್ಯುಸಿಕ್ ಕಂಪೋಸ್ ಮಾಡಿದ್ದಾರೆ. ಬಾಲಿವುಡ್ ಖ್ಯಾತ ಕೊರಿಯೋಗ್ರಾಫರ್ ಸರೋಜ್ ಖಾನ್ ಗರ ಚಿತ್ರದ ಹಾಡೊಂದಕ್ಕೆ ಕೊರಿಯೋಗ್ರಫಿ ಮಾಡಿರೋದು. ಚಿತ್ರದ ಮತ್ತೊಂದು ಸ್ಪೆಷಾಲಿಟಿ. ವೇಣು ಕ್ಯಾಮೆರ ವರ್ಕ್ ಚಿತ್ರಕ್ಕಿದ್ದು ಮಲೆನಾಡು ಹಾಗೂ ಕಾಶ್ಮೀರ ಲೋಕೆಷನ್ಗಳನ್ನು ಬ್ಯೂಟಿಫುಲ್ ಆಗಿ ಸೆರೆ ಹಿಡಿದಿದ್ದಾರೆ.
ಹತ್ತು ಹಲವು ವಿಶೇಷತೆಗಳಿಂದ ಸೌಂಡ್ ಮಾಡ್ತಿರೋ ಗರ ಶುಕ್ರವಾರ ಪ್ರೇಕ್ಷಕರ ಮುಂದೆ ಬರ್ತಿದ್ದು, ಹೇಗೆ ಸದ್ದು ಮಾಡುತ್ತೋ ನೋಡ್ಬೇಕು.
Comments are closed.