ಡಾ. ರಾಜ್ ಕುಟುಂಬ ಹಾಗೂ ಚಿರಂಜೀವಿ ಕುಟುಂಬದ ನಡುವೆ ಮೊದಲಿನಿಂದಲೂ ಆತ್ಮೀಯತೆ ಇದೆ. ಇಬ್ಬರ ಕುಟುಂಬದಲ್ಲಿ ಯಾವುದೇ ಕಾರ್ಯಕ್ರಮವಾದರು ಒಬ್ಬರನ್ನೊಬ್ಬರು ಆಹ್ವಾನಿಸುತ್ತಾರೆ.
ಹಾಗೆಯೇ ಯುವರಾಜ್ ಕುಮಾರ್ ಮದುವೆಗೂ ಅಪ್ಪು, ವಿನಯ್ ಹಾಗೂ ಯುವರಾಜ್ ಖುದ್ದು ಚಿರಂಜೀವಿ ಮನೆಗೆ ಭೇಟಿ ನೀಡಿ ಆಮಂತ್ರಣ ನೀಡಿದರು. ಈ ಅಭಿಮಾನದ ಮೇಲೆ ಮೆಗಾ ಸ್ಟಾರ್ ಮತ್ತೆ ಬೆಂಗಳೂರಿಗೆ ಬಂದಿದ್ದಾರೆ. ಯುವರಾಜನ ಕಲ್ಯಾಣಕ್ಕೆ ದಂಪತಿ ಸಮೇತ ಬಂದು ಯುವಶ್ರೀಯನ್ನು ಹರಸಿದ್ದಾರೆ. ಚಿರಂಜೀವಿ ಆಗಮನದಿಂದ ಇಡೀ ಡಾ. ರಾಜ್ ಕುಟುಂಬ ಸಂತಸಗೊಂಡಿದೆ.
ಕ್ರೇಜಿಸ್ಟಾರ್ ಪುತ್ರಿಯ ಕಲ್ಯಾಣಕ್ಕೂ ಹಾಜರಾಗ್ತಾರೆ ಚಿರು..!
ಮೆಗಾಸ್ಟಾರ್ಗೆ ಮೊದಲಿನಿಂದಲೂ ಕನ್ನಡ ಚಿತ್ರರಂಗ ಹಾಗೂ ಬೆಂಗಳೂರಿನ ಮೇಲೆ ವಿಶೇಷ ಅಭಿಮಾನ ಇದೆ. ಡಾ ರಾಜ್, ಕ್ರೇಜಿಸ್ಟಾರ್ ರವಿಚಂದ್ರನ್, ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಜೊತೆ ಚಿರಂಜೀವಿ ಉತ್ತಮ ಒಡನಾಟ ಇಟ್ಟುಕೊಂಡಿದರು. ಈ ಹಿಂದೆ ಡಾ. ರಾಜ್ಕುಮಾರ್ ಸ್ಮಾರಕ ಉದ್ಘಾಟನೆಗೆ ಬಂದಿದ್ದ ಮೆಗಾ ಸ್ಟಾರ್ ನಂತರ ರೆಬೆಲ್ ಸ್ಟಾರ್ ಕೋರಿಕೆ ಮೇರೆಗೆ ಕಲಾವಿದರ ಸಂಘದ ಕಛೇರಿ ಉದ್ಘಾಟನೆಗೆ ಬಂದಿದರು.
ಇದೀಗ ರಾಜ್ ಮೊಮ್ಮಗನ ಆರತಕ್ಷತೆಗೆ ಬಂದು ಮತ್ತದೇ ಪ್ರೀತಿ ವಿಶ್ವಾಸ ಮೆರೆದಿದ್ದಾರೆ. ಅಷ್ಟೇ ಅಲ್ಲ ಇನ್ನು ಇದೇ ವಾರ ನಡೆಯಲಿರೋ ಕ್ರೇಜಿ ಸ್ಟಾರ್ ಮಗಳ ಮದುವೆಗೂ ಚಿರಂಜೀವಿ ಬರೋ ಸಾಧ್ಯತೆಗಳಿವೆ.
Comments are closed.