ಮನೋರಂಜನೆ

ಶತಕವೀರ ರಾಹುಲ್ ಹಿಂದೆ ಬಿದ್ದ ಈ ಬಾಲಿವುಡ್ ಬೆಡಗಿ?

Pinterest LinkedIn Tumblr


ಮುಂಬೈ: ವಿಶ್ವಕಪ್ ತಂಡದಲ್ಲಿರುವ ಕನ್ನಡಿಗ ಕೆ.ಎಲ್.​ ರಾಹುಲ್​ ಅವರನ್ನು ಹುರಿದುಂಬಿಸಲು ಗೆಳತಿಯೊಬ್ಬರು ಸಿಕ್ಕಿದ್ದಾರೆ. ಐಪಿಎಲ್​ ಹವಾ ಮೇಲೆ ಬಂದ ಮೇಲೆ ಈ ವಿಚಾರಕ್ಕೆ ಮತ್ತಷ್ಟು ಬಣ್ಣ ತುಂಬುತ್ತಿದೆ.

ಬಾಲಿವುಡ್ ತಾರೆ ಆಲಿಯಾ ಭಟ್ ಆಪ್ತ ಗೆಳತಿ ಆಕಾಂಕ್ಷಾ ರಂಜನ್​ ಮತ್ತು ಕೆಎಲ್ ರಾಹುಲ್ ನಡುವೆ ಏನೋ ನಡೆಯುತ್ತಿದೆ ಎಂಬ ಗುಸುಗುಸು ಕೇಳಿಬಂದಿದೆ. ವೇಗಿ ಜಹೀರ್​ ಖಾನ್ ಚೆಕ್​ ದೇ ಇಂಡಿಯಾ ಖ್ಯಾತಿಯ ಸಾಗರಿಕಾ ಘಟ್ಗೆ ಅವರನ್ನು, ಹರ್ಭಜನ್​ಸಿಂಗ್​ ಗೀತಾ ಬಸ್ರಾ ಅವರನ್ನು, 2011ರ ವಿಶ್ವಕಪ್ ಹೀರೋ ಯುವರಾಜ್​ ಸಿಂಗ್​ ಬ್ರಿಟನ್​ ಮೂಲದ ನಟಿ ಹೇಜಲ್​ ಕೀಚ್​ರನ್ನು ಮದುವೆಯಾಗಿದ್ದಾರೆ. ಇದೆಲ್ಲದಕ್ಕಿಂತಲೂ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿ ಮನೆ ಮಾತಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಆಗುತ್ತಿವೆ. ರಾಹುಲ್ ಹಂಚಿಕೊಂಡಿದ್ದ ಫೋಟೋ ಸಹ ಇದೀಗ ವೈರಲ್ ಆಗುತ್ತಿದೆ.

Comments are closed.