ಮನೋರಂಜನೆ

ಯಾರು ಹುಟ್ಟಿನಿಂದ ತಿಳಿದುಕೊಂಡು ಬರುವುದಿಲ್ಲ, ಅಂಬೆಗಾಲು ಇಟ್ಟುಕೊಂಡೆ ಬರುವುದು: ನಟ ಯಶ್​

Pinterest LinkedIn Tumblr


ಮಂಡ್ಯ: ಹ್ಯಾಪಿ ಬರ್ತ್ ಡೇ ಟೂ ಯು ಅಂಬರೀಶ್ ಅಣ್ಣ ಎಂದು ಮಾತು ಶುರುಮಾಡಿದ ಅವರು, ಫಾರ್ ಎವರ್ ಮಂಡ್ಯದ ಗಂಡು ಅಂಬರೀಶ್ ಅಣ್ಣ. ಅವರಿಗೆ ಹೇಗೆ ಧನ್ಯವಾದ ಹೇಳ್ಬೇಕು. ಹೇಗೆ ಕೃತಜ್ಞತೆ ಹೇಳ್ಬೇಕು ಗೊತ್ತಾಗ್ತಿಲ್ಲ ಎಂದು ನಟ ಯಶ್ ಹೇಳಿದರು.

ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್​​ನಲ್ಲಿಂದು ನಡೆದ ಕೃತಜ್ಞತಾ ಸಮಾವೇಶವನ್ನುದ್ದೇಶಿಸಿದ ಮಾತನಾಡಿದ ಅವರು, ಜನ ಕೊಟ್ಟಿರೋ ಕೊಡುಗೆ ಎಲ್ಲರಲ್ಲೂ ಕೃತಜ್ಞತೆ ಮೂಡಿಸಿದೆ. ಸುಮಲತಾ ಅವರದ್ದು ದೊಡ್ಡ ಹೋರಾಟ. ಅವರು ನಂಬಿದ್ದು ಮಂಡ್ಯ ಜನತೆಯನ್ನು ನಾವು ಓಡಾಡಿರೋವುದಕ್ಕಿಂತ ಜನರ ನಾಡಿಮಿಡಿತ ಅರಿತು ಪ್ರಚಾರ ಮಾಡಿದ್ವಿ ಎಂದು ನಟ ಯಶ್​ ತಿಳಿಸಿದರು.

ಇನ್ನು ಯಾರು ಹುಟ್ತಾನೆ ತಿಳಿದುಕೊಂಡು ಬರಲ್ಲ, ಅಂಬೆಗಾಲು ಇಟ್ಟುಕೊಂಡೇ ಬರೋದು. ಇಲ್ಲೇನು ಗಳಿಸಬೇಕಿಲ್ಲ. ಜನ ಹೇಳಿ ಕೊಡುತ್ತಾರೆ, ಮಾಡಕೊಂಡು ಬೇಕು ಎಂದು ಅವರು ನುಡಿದರು.

ಇನ್ನು ನಮ್ಮನ್ನ ವಿರೋಧಿ ಅಂತ ಮಾತಾನಾಡುತ್ತಾರೆ. ಅವರು ನಮ್ಮ ವಿರೋಧಿಗಳಲ್ಲ, ಪ್ರತಿಸ್ಪರ್ಧಿಗಳು. ಸುಮಲತಾ ಅವರದ್ದು ತಪ್ಪಿದ್ರೆ ತಿದ್ದಿ. ಸುಮಲತಾ ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡ್ತಾರೆ ಎಂದು ನಟ ಯಶ್​ ಮಾತನಾಡಿದರು.

Comments are closed.