ಮನೋರಂಜನೆ

ನಟ ದುನಿಯಾ ವಿಜಯ್ ಗೆ ಜಿಮ್ ಹೇಳಿಕೊಡಿ ಎಂದ ನಟ ಸುದೀಪ್

Pinterest LinkedIn Tumblr


ಬೆಂಗಳೂರು: ನಟ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸುತ್ತಿರುವ ‘ಸಲಗ’ ಚಿತ್ರ ದಿನದಿಂದ ದಿನಕ್ಕೆ ಭಾರಿ ಕುತೂಹಲ ಮೂಡಿಸುತ್ತಿದೆ. ಇದೀಗ, ಬ್ಲಾಕ್ ಕೋಬ್ರಾನ ಸಲಗಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾಥ್ ನೀಡಿದ್ದಾರೆ.

ಸಲಗ ಸಿನಿಮಾದ ಮುಹೂರ್ತ ಬೆಂಗಳೂರಿನ ಬಂಡಿಮಹಾಂಕಾಳಿ ದೇವಲಯದಲ್ಲಿ ನಡೆಯುತ್ತಿದ್ದು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕಿಚ್ಚ ಸುದೀಪ್ ಆಗಮಿಸುವ ಮೂಲಕ ಕರಿಚಿರತೆಯ ಹೊಸ ಜರ್ನಿಗೆ ಜೊತೆಯಾಗಿದ್ದಾರೆ.

ಸಲಗ ಚಿತ್ರಕ್ಕೆ ಕ್ಲಾಪ್ ಮಾಡಿದ ಬಳಿಕ ಸುದೀಪ್ ಮಾತನಾಡಿದ್ದು, ಇವರೆಲ್ಲ ಸಖತ್ ಸ್ಟ್ರಗಲ್ ಮಾಡಿ ಬಂದವರು. ಇವತ್ತು ಸರಿಯಾದ ಕೆಲಸ ಮಾಡ್ತಿದ್ದಾರೆ. ನನ್ನ ಸ್ನೇಹಿತ ನಿರ್ದೇಶಕನಾಗುತ್ತಿದ್ದಾನೆ ಅನ್ನೋ ಕಾರಣಕ್ಕೆ ನಾನು ಇವತ್ತಿನ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಡೈರೆಕ್ಟರ್ ಕ್ಯಾಪ್ ತೊಟ್ಟಿರುವುದಕ್ಕೆ ಸಂತೋಷವಾಗುತ್ತಿದೆ. ನನಗೆ ಬಂದು ಜಿಮ್ ಹೇಳಿಕೊಡಿ ವಿಜಿ ಎಂದು ಇದೇ ಸಂದರ್ಭದಲ್ಲಿ ಸುದೀಪ್ ಹೇಳಿದರು.

ಸದ್ಯ ‘ಸಲಗ’ ಚಿತ್ರದ ಪೋಸ್ಟರ್ ಮತ್ತು ಟೀಸರ್ ಮಾಡುವ ಉದ್ದೇಶದಿಂದ ಫೋಟೋಶೂಟ್ ನಡೆಯುತ್ತಿದ್ದು, ಕೆಲವು ಮೇಕಿಂಗ್ ಚಿತ್ರಗಳು ಸದ್ದು ಮಾಡುತ್ತಿದೆ. ಡಾಲಿ ಧನಂಜಯ್ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚುತ್ತಿದ್ದು, ವಿಜಿಗೆ ಟಕ್ಕರ್ ಕೊಡಲಿದ್ದಾರೆ. ವಿಜಿ ಪಾತ್ರದ ಬಗ್ಗೆ ಬಿಟ್ಟುಕೊಟ್ಟಿಲ್ಲವಾದರೂ ಅವರ ಲುಕ್ ಗಮನ ಸೆಳೆಯುತ್ತಿದೆ.

ಇನ್ನು ಚಿತ್ರಕ್ಕೆ ಸಂಸದ ಡಿ .ಕೆ ಸುರೇಶ್ ಶುಭಾಶಯ ತಿಳಿಸಿದ್ದು, ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್​ ಕುಮಾರ್ ಕೂಡ ಉಪಸ್ಥಿತರಿದ್ದರು.

Comments are closed.