ಪ್ರೀತಿಯ ಪಾರಿವಾಳಗಳ ಮಧ್ಯೆ ಲಾಂಗು- ಮಚ್ಚುಗಳ ಮೊರೆತ ಸಖತ್ ಸೌಂಡ್ ಮಾಡಿತ್ತು. ಅದೇ ಬಜಾರ್ನಿಂದ ಸ್ಯಾಂಡಲ್ವುಡ್ಗೆ ಮತ್ತೊಂದು ಆರಡಿ ಕಟೌಟ್ ಕೂಡ ಇಂಟ್ರಡ್ಯೂಸ್ ಆಗಿತ್ತು. ಡಿ ಬಾಸ್ ದರ್ಶನ್ ಶಿಷ್ಯನಾಗಿ ರಂಗೇರಿದ್ದ ಧನ್ವೀರ್, ಇದೀಗ ಸ್ಟೈಲಿಶ್ ಲುಕ್ನಲ್ಲಿ ಸ್ಟೈಲಿಶ್ ಸ್ಟಾರ್ ರೀತಿ ಎಂಟ್ರಿ ಕೊಡೋಕ್ಕೆ ಸಜ್ಜಾಗ್ತಿದ್ದಾರೆ.
ಯಾವಾಗ ಬಜಾರ್ ಸಿನಿಮಾ ಹಿಟ್ ಆಯ್ತೋ, ಅಂದೇ ಆರಡಿ ಕಟೌಟ್ಗೆ ಆಟೋ ಮೇಲೆ ಫೋಟೋ, ಮೈಮೇಲೆ ಟ್ಯಾಟ್ಟು ಬೀಳೋಕ್ಕೆ ಶುರುವಾಗಿತ್ತು. ಬಜಾರ್ ಹುಡ್ಗ ಧನ್ವೀರ್, ದರ್ಶನ್ ಶಿಷ್ಯ ಬಳಗ ಅನ್ನೋದಕ್ಕಿಂತ ಹೆಚ್ಚಾಗಿ, ಸ್ಟಾರ್ ನಟನಾಗೋ ಕಿಚ್ಚು ಮತ್ತು ಆತನ ಸಿನಿಮೋತ್ಸಾಹ ಒಳ್ಳೆ ನೇಮು- ಫೇಮು ತಂದುಕೊಡ್ತು. ಧನ್ವೀರ್ ಒಬ್ಬ ಇಂಟೆನ್ಸ್ ಆ್ಯಕ್ಟರ್ ಅನ್ನೋದು ಬಜಾರ್ ಕೂಗಿ ಹೇಳಿತ್ತು.
ಅಂದಹಾಗೆ ಗಾಂಧಿನಗರದ ಬಜಾರ್ನಲ್ಲಿ ಸದ್ಯ ಧನ್ವೀರ್ ಎರಡನೇ ಸಿನಿಮಾ ಸಖತ್ ಸದ್ದು ಮಾಡ್ತಿದೆ. ಅಲ್ಲಿಗೆ ಡೈರೆಕ್ಟರ್ ಯಾರು..? ಪ್ರೊಡ್ಯೂಸರ್ ಯಾರು..? ಸಿನಿಮಾ ಯಾವುದು ಅನ್ನೋ ಪ್ರಶ್ನೆಗಳು ಮೂಡೋದು ಸಹಜ. ಆದ್ರೆ ಸಿನಿಮಾಗಿಂತ ಹೀರೋ ಲುಕ್ಸ್ ಕುರಿತೇ ಟಾಕ್ಸ್ ಹೆಚ್ಚಿದೆ. ಹೌದು.. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ರೀತಿ ಧನ್ವೀರ್ ಕಾಣಲಿದ್ದಾರೆ ಎನ್ನಲಾಗ್ತಿದೆ.
ಸುನಿ ಜೊತೆ ಬಜಾರ್ಗೆ ಇಳಿದ ಧನುಗೆ, ಸಿನಿಮಾದ ಜೊತೆ ಜೊತೆಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಗೆಳೆಯರ ಬಳಗವೂ ಹೆಚ್ಚಾಯ್ತು. ಭರ್ಜರಿ ಚೇತನ್ ಕುಮಾರ್, ಭರಾಟೆ ಸುಪ್ರೀತ್, ಅಯೋಗ್ಯ ಮಹೇಶ್ ಸೇರಿದಂತೆ ದೊಡ್ಡ ದೊಡ್ಡ ನಿರ್ದೇಶಕ, ನಿರ್ಮಾಪಕರೆಲ್ಲಾ ಗೆಳೆಯರಾದ್ರು. ಹಾಗಾಗಿ ಸದ್ಯ ಧನ್ವೀರ್ ಹೊಸ ಚಿತ್ರಕ್ಕೆ ಬಹದ್ದೂರ್ ಚೇತನ್ ಕಥೆ, ಚಿತ್ರಕಥೆ ಮತ್ತು ಡೈಲಾಗ್ಸ್ ಬರೀತಿದ್ದಾರಂತೆ. ಇನ್ನು ಭರಾಟೆ ಖ್ಯಾತಿಯ ಸುಪ್ರೀತ್ ನಿರ್ಮಾಣ ಮಾಡೋಕ್ಕೆ ಮುಂದಾಗಿರೋದು ವಿಶೇಷ.
ಡೈರೆಕ್ಟರ್ ಯಾರಾಗ್ತಾರೆ ಅನ್ನೋದು ಸಸ್ಪೆನ್ಸ್ ಆಗಿ ಇಟ್ಟಿರೋ ಟೀಂ, ಸದ್ಯದಲ್ಲೇ ಅದನ್ನ ರಿವೀಲ್ ಮಾಡಲಿದೆಯಂತೆ. ಇನ್ನು ಅಲ್ಲು ಅರ್ಜುನ್ ಲುಕ್ಸ್ಗಾಗಿ ಮತ್ತಷ್ಟು ದೇಹವನ್ನ ಹುರಿಗಟ್ಟಿಸ್ತಿರೋ ಧನ್ವೀರ್, ಫ್ರೆಶ್ & ಸ್ಟೈಲಿಶ್ ಲುಕ್ಸ್ನಲ್ಲಿ ಬೌನ್ಸ್ ಬ್ಯಾಕ್ ಆಗ್ತಾರೆ ಎನ್ನಲಾಗ್ತಿದೆ.
Comments are closed.