ಪೋಸ್ಟರ್ ಹಾಗೂ ಟ್ಯಾಗ್ಲೈನ್ನಿಂದಲ್ಲೇ ಗಾಂಧಿನಗರದಲ್ಲಿ ಟಾಕ್ ಕ್ರಿಯೇಟ್ ಮಾಡಿದ್ದ ಸಿನಿಮಾ ಬ್ರಹ್ಮಚಾರಿ. ಈ ಬ್ರಹ್ಮಚಾರಿ ಟೀಸರ್ ಲಾಂಚ್ ವೇಳೆ ಆ ನಟಿ ಸ್ಟೆಜ್ನಲ್ಲಿ ಕಣ್ಣೀರು ಹಾಕಿ ಹೈಡ್ರಾಮ್ ಮಾಡಿದ್ದಾರೆ. ಅಷ್ಟಕ್ಕೂ ಅಲ್ಲಿ ಏನಾಯ್ತು..? ಆ ನಟಿ ಕಣ್ಣೀರು ಹಾಕಿದಾದ್ರೂ ಏಕೆ.? ಇಲ್ಲಿದೆ ನೋಡಿ ಉತ್ತರ.
ತಮ್ಮ ಸಿನಿಮಾ ರಿಲೀಸ್ ಆಗ್ತಿದೆ… ಆಡಿಯೋ ಲಾಂಚ್ ಕಾರ್ಯಕ್ರಮ ಇದೆ. ಇಲ್ಲ ಟೀಸರ್ ಲಾಂಚ್ ಕಾರ್ಯಕ್ರಮ ಅಂದ್ರೆ ಸಿನಿಮಾ ತಂಡಕ್ಕೆ ಸಖತ್ ಥ್ರಿಲ್ ಇರುತ್ತೇ. ಅದಕ್ಕಿಂತ ಹೆಚ್ಚಾಗಿ ಡಬಲ್ ಖುಷಿ ಇರುತ್ತೆ.. ಆದ್ರೆ ಅದ್ಯಾಕೋ ಆ ಖುಷಿ ಈ ನಟಿಯ ಮುಖದಲ್ಲಿ ಕಾಣಲಿಲ್ಲ. ಬದಲಾಗಿ ಸ್ಟೆಜ್ ಮೇಲೆಯೇ ಕಣ್ಣೀರು ಹಾಕಿದ್ರು.
ಕಿರುತೆರೆಯಿಂದ ಬೆಳ್ಳಿತೆರೆಗೆ ಜಿಗಿದಿರೋ ಅದಿತಿ ಪ್ರಭುದೇವ್ ಸ್ಯಾಂಡಲ್ವುಡ್ನ ಹೊ ಹೀರೋಯಿನ್. ಧೈರ್ಯ ಸಿನಿಮಾದ ಮೂಲಕ ಅಜಯ್ ರಾವ್ ಜೊತೆ ಡ್ಯುಯೇಟ್ ಆಡಿದ ಅದಿತಿ ಬಳಿಕ ಸಿಂಪಲ್ ಸುನಿಯ ಬಜಾರ್ನಲ್ಲಿ ಪಳಗಿದ ಪ್ರತಿಭೆ.
ಸದ್ಯ ಚಿರು ಜೊತೆ ಶಾನೆ ಟಾಪ್ ಇರೋ ಈ ಚೆಲುವೆ ಸತೀಶ್ ಜೊತೆ ಸೇರಿ ಬ್ರಹ್ಮಚಾರಿ ಸಿನಿಮಾದಲ್ಲಿ ಅಭಿನಯಿಸಿದ್ದಾಳೆ. ಸದ್ಯ ಬ್ರಹ್ಮಚಾರಿ ಟೀಸರ್ ರಿಲೀಸ್ ಆಗಿ ಯೂಟ್ಯೂಬ್ನಲ್ಲಿ ದಾಖಲೆ ಬರೆಯುತ್ತಿದೆ. ಆದ್ರೆ ವಿಷ್ಯ ಏನಪ್ಪ ಅಂದ್ರೆ ಟೀಸರ್ ಲಾಂಚ್ ವೇಳೆ ಬಜಾರ್ ಬೆಡಗಿ ಅದಿತಿ ಕಣ್ಣೀರು ಹಾಕಿ ಡ್ರಾಮ್ ಮಾಡಿದ್ದಾಳೆ. ಅಷ್ಟಕ್ಕೂ ಕಣ್ಣೀರು ಹಾಕಿದ್ದು ಯಾಕೆ ಅಂದ್ರಾ ಆಕೆ ಸಿನಿಮಾ ತಂಡವನ್ನು ಹಾಗೂ ಶೂಟಿಂಗ್ನ್ನು ತುಂಬಾ ಮಿಸ್ ಮಾಡ್ಕೋತಾರಂತೆ. ಇದೇ ಕಾರಣಕ್ಕೆ ಅದಿತಿ ಕಣ್ಣೀರು ಹಾಕಿದ್ದಾರೆ.
ಅಂದಹಾಗೆ ‘ಬ್ರಹ್ಮಚಾರಿ’ ಅಭಿನಯ ಚತುರ ನೀನಾಸಂ ಸತೀಶ್ ನಟನೆಯ ಸಿನಿಮಾ. ಸತೀಶ್ ಫ್ಯಾನ್ಸ್ ಎದುರು ನೋಡ್ತಿರೋ ಸಿನಿಮಾ ಬ್ರಹ್ಮಚಾರಿ. ಪಕ್ಕಾ ಕಾಮಿಡಿ ಸಿನಿಮಾ ಇದಾಗಿದ್ದು, ಡಬಲ್ ಇಂಜಿನ್ ಸಿನಿಮಾದಂತಹ ಕಾಮಿಡಿ ಕಥೆ ಹೇಳೀರೋ ಮೋಹನ್ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಸತೀಶ್ ಹುಟ್ಟುಹಬ್ಬಕ್ಕೆ ರಿಲೀಸ್ ಆಗಿರೋ ಬ್ರಹ್ಮಚಾರಿ ಟೀಸರ್ಗೆ ಬೇಜಾನ್ ರೆಸ್ಪಾನ್ಸ್ ಸಿಕ್ತಿದೆ. ಸಿಕ್ಕಾಪಟ್ಟೆ ಹ್ಯೂಮರ್ಸ್ ಆಗಿರೋ ಟೀಸರ್ ನೋಡಿ ಸಿನಿರಸಿಕರು ಕಳೆದು ಹೋಗಿದ್ದಾರೆ. ಯಾವಾಗಾಪ್ಪ ಸಿನಿಮಾ ನೋಡ್ತೀವಿ ಅಂತಾ ಚಿತ್ರದ ರಿಲೀಸ್ ಡೇಟ್ಗೆ ಎದುರು ನೋಡ್ತಿದ್ದಾರೆ. ಟೀಸರ್ನಿಂದಲ್ಲೇ ಕಾಮಿಡಿ ಕಳಗುಳಿ ಹಿಡ್ತಿರೋ ಬ್ರಹ್ಮಚಾರಿ ಚಿತ್ರದ ಟ್ರೇಲರ್ ಸದ್ಯದಲ್ಲಿಯೇ ರಿಲೀಸ್ ಆಗಲಿದೆ. ಎನೀ ವೇ ಅಲ್ಲಿವರೆಗೂ ಟೀಸರ್ ನೋಡ್ತಾ ಎಂಜಾಯ್ ಮಾಡಿ.
Comments are closed.