ಮನೋರಂಜನೆ

2ನೇ ಮದುವೆಗೆ ಸಿದ್ಧವಾದ ನಟಿ ಅಮಲಾ ಪೌಲ್ ಮಾಜಿ ಪತಿ..!

Pinterest LinkedIn Tumblr


ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರದ ನಾಯಕಿ ಅಮಲಾ ಪೌಲ್ ಅವರ ಮಾಜಿ ಪತಿ ನಿರ್ದೇಶಕ ಎ.ಎಲ್ ವಿಜಯ್ ಎರಡನೇ ಮದುವೆಯಾಗುತ್ತಿದ್ದು, ಈಗಾಗಲೇ ಎರಡು ಕುಟುಂಬದವರು ಮದುವೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಮಲಾರ್ ಬೆಡಗಿ ಸಾಯಿ ಪಲ್ಲವಿ ಜೊತೆ ವಿಜಯ್ ಲವ್ವಲ್ಲಿ ಇದ್ದಾರೆ ಇವರಿಬ್ಬರು ಮದುವೆಯಾಗಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಭಾರಿ ಸದ್ದು ಮಾಡಿತ್ತು. ಆದರೆ ಈ ಸುದ್ದಿಯನ್ನ ಸಾಯಿ ಪಲ್ಲವಿ ನಿರಾಕರಿಸಿದ್ದರು. ಈಗ ವಿಜಯ್ ಕೂಡ ಈ ವದಂತಿಗೆ ಸಂಪೂರ್ಣವಾಗಿ ಬ್ರೇಕ್ ಹಾಕಿದ್ದಾರೆ.

ನಿರ್ದೇಶಕ ವಿಜಯ್ ಎರಡನೇ ಮದುವೆ ದಿನಾಂಕ ಮತ್ತು ಹುಡುಗಿಯ ಪರಿಚಯ ಮಾಡುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ. ವಿಜಯ್ ಅವರು ಸಿನಿಮಾ ನಟಿ ಅಥವಾ ಸಿನಿಮಾರಂಗಕ್ಕೆ ಸಂಬಂಧಪಟ್ಟ ಯಾರನ್ನು ಮತ್ತೆ ಮದುವೆ ಆಗುತ್ತಿಲ್ಲ. ಬದಲಿಗೆ ಚೆನ್ನೈ ಮೂಲದ ಡಾಕ್ಟರ್ ಐಶ್ವರ್ಯ ಅವರ ಜೊತೆ ದಾಂಪತ್ಯ ಜೀವನ ಆರಂಭಿಸಲಿದ್ದಾರೆ. ಇವರಿಬ್ಬರ ಮದುವೆ ಜುಲೈ 11 ರಂದು ನಡೆಯಲಿದೆ. ಈ ಮದುವೆ ತೀರಾ ಖಾಸಗಿ ಕಾರ್ಯಕ್ರಮವಾಗಿರಲಿದ್ದು ಕುಟುಂಬದ ಆಪ್ತರನ್ನು ಮಾತ್ರ ಆಹ್ವಾನಿಸಲಾಗಿದೆ ಎಂದು ತಿಳಿದು ಬಂದಿದೆ.

Comments are closed.