ಮನೋರಂಜನೆ

ಐ ಲವ್ ಯು ಚಿತ್ರ ಬಾಕ್ಸಾಫೀಸ್ ನಲ್ಲಿ ಎಷ್ಟು ಗಳಿಸಿದೆ ಗೊತ್ತಾ..?

Pinterest LinkedIn Tumblr


ಕಳೆದ ಎರಡ್ಮೂರು ವರ್ಷಗಳಿಂದ ರಿಯಲ್ ಸ್ಟಾರ್ ಉಪೇಂದ್ರ ಅವರ ಸಿನಿಮಾಗಳು ಬಾಕ್ಸಾಫೀಸ್​​ನಲ್ಲಿ ಮ್ಯಾಜಿಕ್ ಮಾಡೇ ಇರ್ಲಿಲ್ಲ. ಅವರು ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಐ ಲವ್ ಯು ಚಿತ್ರದ ಬಗ್ಗೆ ಭಾರಿ ಮುತುವರ್ಜಿ ವಹಿಸಿದರು. ಐ ಲವ್​ ಯೂ ಸಿನಿಮಾದ ಬಗ್ಗೆ ಭಾರಿ ನಂಬಿಕೆಯಿಂದ ಮಾತನಾಡುತ್ತಿದರು..ಈಗ ಆ ನಂಬಿಕೆ , ಆ ಕಾಳಜಿ , ಆಸಕ್ತಿ ಎಲ್ಲವೂ ವರ್ಕ್ ಆಗಿದೆ. ಮತ್ತೆ ಉಪ್ಪಿ ನಟನೆಯ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಜಾದು ಮಾಡುತ್ತಿದೆ.

ಕಳೆದ ಮೂರ್ನಾಲ್ಕು ವಾರಗಳಿಂದ ಆರ್​.ಚಂದ್ರು ಕಲ್ಪನೆಯ ಐಲವ್​​ಯು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬೇಜಾನ್ ಸೌಂಡ್ ಮಾಡ್ತಿದೆ. ಸಿನಿಮಾನ ನಂಬಿದ ಸರ್ವರಿಗೂ ಜೆಬ್​​ ತುಂಬ ಹಣವನ್ನು ತಂದುಕೊಡ್ತಿದೆ. ಇದನ್ನು ಚಿತ್ರತಂಡ ಚೈನ್ ಲಿಂಕ್ ಸಕ್ಸಸ್ ಎಂದು ಬಣ್ಣಿಸಿದೆ. ಸಿನಿಮಾ ಮಾಡಿದ ನಿರ್ಮಾಪಕರಿಗೂ , ವಿತರಕರಿಗೂ , ಪ್ರದರ್ಶಕರಿಗೂ , ಪಾಪ್​ಕಾರ್ನ್ ಮಾರುವವರಿಂದ ಹಿಡಿದು, ವೈಹಿಕಲ್ ಸ್ಟ್ಯಾಂಡ್ ನೋಡಿಕೊಳ್ಳೋರವರೆಗೂ ಪ್ರತಿಯೋಬ್ಬರಿಗೂ ಐ ಲವ್​ ಯೂ ಲಾಭ ತಂದುಕೊಟ್ಟಿದೆಯಂತೆ. ಈ ಸಂಭ್ರಮವನ್ನು ವಿತರಕರು , ಪ್ರದರ್ಶಕರು ಒಳಗೊಂಡು ಇಡೀ ಚಿತ್ರತಂಡ ಮಾಧ್ಯಮಗಳ ಮುಂದೆ ಹೇಳಿಕೊಂಡಿದೆ.

ರಿಯಲ್ ಸ್ಟಾರ್ ಉಪೇಂದ್ರ ಅವರ ಹವಾ ಕರ್ನಾಟಕದಲ್ಲಿ ಎಷ್ಟರ ಮಟ್ಟಿಗೆ ಇದಿಯೋ ಅಷ್ಟೇ ಕ್ರೇಜ್ ಪಕ್ಕ ಆಂಧ್ರಾ , ತೆಲಂಗಾಣದಲ್ಲಿ ಇದೆ. 90ರ ದಶಕದಿಂದಲೇ ತೆಲುಗು ಪ್ರೇಕ್ಷಕರಿಗೆ ಉಪ್ಪಿ ಸಿನಿಮಾದ ಗಮತ್ತು ಏನು ಅಂತ ಗೊತ್ತು, ಈಗ ಐ ಲವ್ ಯೂ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ತೆರೆಕಂಡಿರುವ ಕಾರಣ ಕರ್ನಾಟಕ ಸೇರಿದಂತೆ ಪಕ್ಕದ ಆಂಧ್ರಾ ಸೀಮೆಯಲ್ಲಿಯೂ ಸೌಂಡ್ ಮಾಡ್ತಿದೆ.

ಜೂನ್ 14ರಂದು ಕರ್ನಾಟಕದಲ್ಲಿ 325 ಚಿತ್ರಮಂದಿಗಳಲ್ಲಿ ಐಲವ್​ಯು ತೆರೆಕಂಡಿತ್ತು. ಈಗ ಸಿನಿಮಾ ರಿಲೀಸ್ ಆಗಿ 25ದಿನದ ಅಂಚಿನಲ್ಲಿದರು, ರಿಲೀಸ್ ಆದ ಅಷ್ಟು ಚಿತ್ರಮಂದಿಗಳಲ್ಲಿ ಐಲವ್​ಯೂ ಯಶಸ್ವಿ ತುಂಬಿದ ಪ್ರದರ್ಶನ ಕಾಣುತ್ತಿದೆ. ಆಂಧ್ರಾ ಸಿಮೇಯಲ್ಲಿ 225 ಚಿತ್ರ ಮಂದಿಗಳಲ್ಲಿ ತೆರೆಕಂಡಿತ್ತು ಐ ಲವ್ ಯೂ. ಅಲ್ಲಿಯೂ ಕೂಡ ಯಶಸ್ವಿ ಪ್ರದರ್ಶನ ಕಾಣುತ್ತಿದೆಯಂತೆ.

ಕನಕ ಸಿನಿಮಾ ಸೋತಾಗ ಆರ್​​.ಚಂದ್ರುಗೆ ಕೆಲ ಹಿತಶತ್ರುಗಳು ಚಂದ್ರು ಅಪ್​ಡೇಟ್ ಆಗಿಲ್ಲ ಎಂದು ಕಿಚಾಯಿಸಿದ್ರಂತೆ. ಅದಕ್ಕೆ ನಾವೊಂದು ಯಾಕೆ ಆಪ್​ಡೇಟ್ ವರ್ಶನ್ ಸಿನಿಮಾ ಮಾಡಬಾರದು ಎಂದು ಈ ಚಿತ್ರವನ್ನು ಮಾಡಿದೆ. ಅರ್ಜುನ್ ರೆಡ್ಡಿ ಸಿನಿಮಾ ಗೆದ್ದಿದನ್ನು ನೋಡಿ ಈ ಪ್ರಯತ್ನಕ್ಕೆ ಕೈ ಹಾಕಿದೆ ಎಂದರು ಚಂದ್ರು.

ಒಟ್ಟಾರೆಯಾಗಿ ಕನ್ನಡ ಚಿತ್ರರಂಗದಲ್ಲಿ ಒಂದೊಳೆ ಯಶಸ್ಸು ಐ ಲವ್ ಯೂ ಚಿತ್ರದಿಂದ ಸಿಕ್ಕಿರುವುದು ಸಂತಸದ ವಿಚಾರ.. ಅದ್ರಲೂ ಉಪ್ಪಿ ಅಭಿಮಾನಿ ಭಕ್ತ ಗಣಕಂತು ಐ ಲವ್ ಯೂ ಸಕ್ಸಸ್ ಸಖತ್ ಖುಷಿ ತಂದು ಕೊಟ್ಟಿದೆ.

Comments are closed.