ಬಾಲಿವುಡ್ ನಲ್ಲಿ ಹಳೆ ಸಾಂಗ್ ಗಳನ್ನು ರೀಮಿಕ್ಸ್ ಮಾಡಿ ಮತ್ತೆ ಹೊಸ ಸಿನಿಮಾಗಳಲ್ಲಿ ಬಳಸಿಕೊಳ್ಳುವುದು ಇದೀಗಾ ಟ್ರೆಂಡ್ ಆಗಿ ಹೋಗಿದೆ, ಕೆಲವು ದಿನಗಳ ಹಿಂದೆ ”ರಣ್ ಬೀರ್ ಕಪೂರ್’ ‘ಬಚ್ಚನ ಹೇ ಹಸಿನೋ’ ಸಾಂಗ್ ನನ್ನು ರೀಮಿಕ್ಸ್ ಮಾಡಲಾಗಿತ್ತು. ನಂತರ ‘ವರುಣ್ ಧವನ್ -ಅಲಿಯಾ ಭಟ್’ ಜೋಡಿಯ ‘ಬದ್ರಿ ಕೀ ದುಲ್ಹನೀಯ’ ಚಿತ್ರದಲ್ಲಿ ‘ಅಮೀತ ಬಚ್ಚನ್’ ರ ‘ತಮ್ಮ ತಮ್ಮ’ ಸಾಂಗ್ ನನ್ನು ಹಾಗೂ ‘ಒಕೆ ಜಾನು’ ಚಿತ್ರದಲ್ಲಿ ‘ರೋಜ’ ಚಿತ್ರದ ‘ಹಮ್ಮ ಹಮ್ಮ ಹಮ್ಮ’ ಸಾಂಗ್ ಅಷ್ಟಲ್ಲದೆ ಇತ್ತೀಚೆಗೆ ‘ಸ್ಟೂಡೆಂಟ್ ಆಫ್ ದಿ ಇಯರ್ 2’ ಚಿತ್ರದಲ್ಲಿ ‘ಹೇ ಜಾವಾನಿ ಹೇ ದಿವಾನಿ’ ಹೀಗೆ ಹಲವು ಹಳೆಯ ಚಿತ್ರದ ಹಾಡುಗಳನ್ನು ಬಾಲಿವುಡ್ ನಲ್ಲಿ ರೀಮಿಕ್ಸ್ ಮಾಡುವುದು ಕಾಮನ್ ಆಗಿ ಹೋಗಿದೆ. ಸದ್ಯ ಇದೀಗಾ ಬಾಲಿವುಡ್ ನ ಬಾಲಿವುಡ್‍ನ ಹಿಟ್ ನಂಬರ್ ಮಳೆ ಹಾಡು ಒಂದು ಸೇರ್ಪಡೆಯಾಗುತ್ತಿದೆ. ವಿಶೇಷವೆನೆಂದರೆ ಆ ಹಾಡಿನಲ್ಲಿ ನಟಿಸಿದ್ದ ನಾಯಕನೇ ಈಗಲೂ ಅದೇ ಮಳೆ ಹಾಡಿಗೆಹೆಜ್ಜೆ ಹಾಕಲಿದ್ದಾರೆ. ಆದರೆ ಅವರೊಂದಿಗೆ ಸೊಂಡ ಬಳುಕಿಸಿದ ನಟಿಯ ಬದಲಾಗಿ ಬೇರೆ ನಟಿ ಅಕ್ಷಯ್ ಗೆ ಸಾಥ್ ನೀಡಲಿದ್ದಾರೆ ಅಷ್ಟಕ್ಕೂ ಯಾವುದಪ್ಪಾ ಆ ಹಾಡು ಎನ್ನುತ್ತೀರಾ ಹಾಗಾದರೆ ಈ ಕೆಳಗಿನ ಸ್ಟೋರಿ ಓದಿ..
ಬಾಲಿವುಡ್ ನಲ್ಲಿ ರವೀನಾ ಹಾಗೂ ಅಕ್ಷಯ್ ಕುಮಾರ್ ಜೋಡಿಯ ಹಾಟ್ ಫೆವರೀಟ್ ಹಾಡು ಯಾವುದು ಎಂದು ಕೇಳುವ ಯೋಚಿಸುವ ಅಗತ್ಯವೇ ಇಲ್ಲ. ಏಕೆಂದರೆ ಇದು ಇವರಿಬ್ಬರ ಎವರ್ ಗ್ರೀನ್ ಸಾಂಗ್..
ಮಳೆಯ ಹಾಡು ಎಂದ ಕೂಡಲೇ ನೆನಪಾಗೋದು ‘ಮೊಹ್ರಾ’ ಸಿನಿಮಾದ ‘ಟಿಪ್ ಟಿಪ್ ಬರ್ಸಾ ಪಾನಿ’ ಅವರಿಬ್ಬರ ಮಳೆ ಹಾಡು. ಇಂದಿಗೂ ಮಳೆಯ ಹಾಡು ಎಂದ ಕೂಡಲೇ ನೆನಪಾಗುವುದು ಹೃದಯಕ್ಕೆ ಕಿಚ್ಚು ಹಚ್ಚಿದ್ದರು. 1994ರ ಜುಲೈನಲ್ಲಿ ತೆರೆ ಕಂಡಿದ್ದ ‘ಮೊಹ್ರಾ’ ಸಿನಿಮಾದ ‘ಟಿಪ್ ಟಿಪ್ ಬರ್ಸಾ ಪಾನಿ’… ಹಾಡು. ಈ ಚಿತ್ರಕ್ಕೆ ವಿಜು ಶಾ ಸಂಗೀತ ನೀಡಿದ್ದರು. ಇನ್ನೂ ಈ ಹಾಡಲ್ಲಿ ನಟ ಅಕ್ಷಯ್ ಕುಮಾರ್ ಜತೆ ಸೊಂಟ ಬಳುಕಿಸಿರುವ ರವೀನಾ ಟಂಡನ್ ಪಡ್ಡೆಗಳ ನಿದ್ದೆಗೆಡಿಸಿದ್ದರು.
ಈ ಹಾಡಿನಲ್ಲಿ ತಿಳಿ ಹಳದಿ ಬಣ್ಣದ ಸೀರೆಯಲ್ಲಿ ರವೀನಾ ಟಂಡನ್ ಬಹಳ ಸೆಕ್ಸಿಯಾಗಿ ಕಾಣಿಸಿಕೊಂಡು ಅಕ್ಷಯ್ ಕುಮಾರ್ ಜೊತೆ ಕುಣಿದು ಕುಪ್ಪಳಿಸಿದ್ದರು. ಇವರಿಬ್ಬರ ಕೆಮಿಸ್ಟ್ರಿ ಅಂತೂ ನೋಡುಗರ ಎದೆಯಲ್ಲಿ ಬೆಂಕಿ ಹೊತ್ತಿಸಿತ್ತು. 25 ವರ್ಷಗಳು ಕಳೆದರೂ ಈ ಹಾಡು ಅಂದಿನ ಪೀಳಿಗೆಗೆ ಮಾತ್ರವಲ್ಲದೆ ಇಂದಿನ ಯುವ ಜನತೆಗೂ ಹಾಟ್ ಫೆವರೇಟ್ ಸಾಂಗ್.
ಈಗಲೂ ಯಾವುದೇ ಕಾರ್ಯಕ್ರಮಕ್ಕೆ ರವೀನಾ ಹೋದಾಗ ಈ ಹಾಡಿಗೆ ಕುಣಿಯುಂತೆ ಅಭಿಮಾನಿಗಳು ರವೀನಾರನ್ನು ಒತ್ತಾಯಿಸುತ್ತಾರೆ. ಅಷ್ಟರ ಮಟ್ಟಿಗೆ ಎಲ್ಲರ ಹೃದಯಕ್ಕೆ ಕಿಚ್ಚು ಹಚ್ಚುವಂತಿತ್ತು ಈ ಹಾಡು.
ಸದ್ಯ ಇದೀಗಾ ‘ಸೂರ್ಯವಂಶಿ’ ಚಿತ್ರದಲ್ಲಿ ಇದೇ ಟಿಪ್ ಟಿಪ್ ಹಾಡಿಗೆ ಹೊಸ ರೂಪ ನೀಡಲಾಗಿದ್ದು, ಚಿತ್ರಕ್ಕೆ ನಿರ್ದೇಶಕ ರೋಹಿತ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಲಿದ್ದು, ಸದ್ಯದಲ್ಲೇ ಬೆಳ್ಳಿ ತೆರೆ ಮೇಲೆ ಅಪ್ಪಳಿಸಲಿದೆ.
ಹಿಂದೆ ರವೀನಾ ಜೊತೆ ಹೆಜ್ಜೆ ಹಾಕಿದ್ದ ಖಿಲಾಡಿ ಅಕ್ಷಯ್ ಕುಮಾರ್ ಈ ಬಾರಿ ಕತ್ರಿನಾ ಜತೆ ರೊಮ್ಯಾನ್ಸ್ ಮಾಡಲಿದ್ದಾರೆ. ಈಗಾಗಲೇ ಈ ಹಾಡಿನ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರೀಕರಣದ ವೇಳೆ ತೆಗೆದ ಕೆಲ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜೊತೆಗೆ ಹಾಡಿನ ಚಿತ್ರೀಕರಣದ ವೇಳೆ ಕತ್ರಿನಾ ಜತೆ ಟವಲ್ನಲ್ಲಿರುವ ಚಿತ್ರವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದ್ದು ಈ ಫೋಟೊಗಳು ಸಹ ವೈರಲ್ ಆಗುತ್ತಿದೆ.
ಸದ್ಯ ಹೊಸ ರೂಪ ಪಡೆದು ಬರುತ್ತಿರುವ ಈ ಹಾಡಿಗೆ ನಿರ್ಮಾಪಕಿ ಹಾಗೂ ನಿರ್ದೇಶಕಿ ‘ಫರಾ ಖಾನ್’ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.
Comments are closed.