ಟಾಲಿವುಡ್ ನ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಅಂದ್ರೇನೆ ಹಾಗೇ ಏನೇ ಮಾಡಿದ್ರು ಸ್ಟೈಲೀಶ್ ಅಂಡ್ ಯೂನಿಕ್ ಆಗಿರುತ್ತೆ. ಚಿತ್ರಗಳ ಮೂಲಕ ಸುದ್ದಿಯಾಗುತ್ತಿದ್ದ ಅಲ್ಲು ಅರ್ಜುನ್ ಈ ಬಾರಿ ದುಬಾರಿ ಮೊತ್ತದ ಕ್ಯಾರಾವ್ಯಾನ್ ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ.
ದುಬಾರಿ ಮೊತ್ತದ ಲೇಟೆಸ್ಟ್ ಡಿಸೈನ್ ಹೊಂದಿರುವ ವ್ಯಾನಿಟಿ ವ್ಯಾನ್ವೊಂದನ್ನು ಅಲ್ಲು ಅರ್ಜುನ್ ಖರೀದಿಸಿದ್ದು, ಇದರ ಬೆಲೆ ಬರೋಬ್ಬರಿ 7 ಕೋಟಿ ರೂಪಾಯಿ. ಈ ವ್ಯಾನ್ಗೆ ಅಲ್ಲು ಅರ್ಜುನ್ FALCON ಎಂದು ಹೆಸರಿಟ್ಟಿದ್ದಾರೆ.
ಇದುವರೆಗಿನ ವ್ಯಾನ್ಗಳಲ್ಲಿ ಮೆತ್ತನೆ ಸೋಫಾ, ಮಿನಿ ಥಿಯೇಟರ್, ಈಸಿ ಚೇರ್ಗಳು, ಟಾಯ್ಲೆಟ್, ರೆಫ್ರಿಜರೇಟರ್ ಮಾಮೂಲಾಗಿತ್ತು. ಆದರೆ ಈ ವ್ಯಾನ್ನಲ್ಲಿ ಮಸಾಜ್ ಬೆಡ್, ಮ್ಯೂಸಿಕ್ ಸಿಸ್ಟಮ್ ಹಾಗೂ ಇನ್ನಿತರ ಐಷಾರಾಮಿ ವಸ್ತುಗಳಿವೆ. ತಮ್ಮ ಹೊಸ ವ್ಯಾನ್ನ ಕೆಲವೊಂದು ಪೋಟೋಗಳನ್ನು ಅಲ್ಲು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅಷ್ಟೇ ಅಲ್ಲ ಇಂತಹದೊಂದು ವಾಹನ ಖರೀದಿ ಅಭಿಮಾನಿಗಳ ಪ್ರೀತಿಯೇ ಕಾರಣ ಎಂದಿರುವ ಅಲ್ಲು, ಅಭಿಮಾನಿಗಳು ನನಗೆ ಸಾಕಷ್ಟು ಪ್ರೀತಿ ನೀಡಿದ್ದಾರೆ. ಇಂತಹ ದುಬಾರಿ ವಾಹನವನ್ನು ಖರೀದಿಸಿದ್ದು ನಿಮ್ಮ ಪ್ರೀತಿಯ ಫಲದಿಂದ. ನಿಮ್ಮೆಲ್ಲರಿಗೂ ಚಿರಕಾಲ ಕೃತಜ್ಞತೆ ಸಲ್ಲಿಸುತ್ತೇನೆ, ನಿಮ್ಮೆಲ್ಲರಿಗೂ ಧನ್ಯವಾದ ಎಂದು ತುಂಬುಹೃದಯದಿಂದ ಕೃತಜ್ಞತೆ ಸಲ್ಲಿಸಿದ್ದಾರೆ.
Comments are closed.