ಮನೋರಂಜನೆ

ಭಾರೀ ಟ್ರೋಲ್ ಆದ ಮೇಕಪ್ ಇಲ್ಲದ ಬಾಲಿವುಡ್ ನಟಿ ಕರೀನಾ ಕಪೂರ್ ಸೆಲ್ಫಿ

Pinterest LinkedIn Tumblr


ಬಾಲಿವುಡ್ ನಟಿ ಕರೀನಾ ಕಪೂರ್ ಸದಾ ತಮ್ಮ ಆಕರ್ಷಕ ಫೋಟೋಗಳಿಂದ ಸದಾ ಸುದ್ದಿಯಲ್ಲಿವ ಬೆಡಗಿ. ಸದ್ಯಕ್ಕೆ ಇರ್ಫಾನ್ ಖಾನ್ ಜತೆಗಿನ ‘ಅಂಗ್ರೇಜಿ ಮೀಡಿಯಂ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಲಂಡನ್‌ನಲ್ಲಿ ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ಸಂದರ್ಭದಲ್ಲಿ ತೆಗೆದುಕೊಂಡ ಸೆಲ್ಫಿಯನ್ನು ಫೋಟೋ ಒಂದನ್ನು ಕರೀನಾ ಹಂಚಿಕೊಂಡಿದ್ದಾರೆ.
ಇದಕ್ಕೆ ಸ್ಟನ್ನಿಂಗ್ ಎಂದು ಹೆಸರಿಟ್ಟಿದ್ದಾರೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಮಾತ್ರ ಈ ಫೋಟೋ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಈ ಫೋಟೋ ನೋಡಿದ ಟ್ರೋಲಿಗರು ವಯಸ್ಸಾದಂತಿದೆ, ಪೌಷ್ಠಿಕಾಂಶ ಕೊರತೆ ಇದ್ದಂತಿದೆ, ಅಯ್ಯೋ ಕರೀನಾಗೆ ಏನಾಯಿತು? ಎಂಬಂತಹ ಕಾಮೆಂಟ್ ಮಾಡಿದ್ದಾರೆ. ತುಂಬಾ ಡಲ್ ಆಗಿದ್ದಾರೆ, ವಯಸ್ಸಾದಂತಿದೆ ಎಂಬಂತಂಹ ಕಾಮೆಂಟ್ ಹಾಕಿದ್ದಾರೆ.

ಈ ಹಿಂದೆ ಬಿಕಿನಿ ತೊಟ್ಟಿದ್ದಕ್ಕೂ ಟ್ರೋಲ್ ಆಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕರೀನಾ, “ಇಷ್ಟಕ್ಕೂ ನನಗೆ ಬಿಕಿನಿ ಧರಿಸು ಎಂದು ಹೇಳಲು ಅವರು ಯಾರು (ಗಂಡನನ್ನು ಉದ್ದೇಶಿಸಿ)? ಸೈಫ್ ಜತೆಗಿನ ನನ್ನ ಅನುಬಂಧ, ನಾನು ಯಾವ ರೀತಿಯ ಬಟ್ಟೆಗಳನ್ನು ಧರಿಸಬೇಕು ಎಂಬುದನ್ನು ನಿರ್ಧರಿಸುವಷ್ಟಿಲ್ಲ. ಬಿಕಿನಿಯಾ ಯಾಕೆ ಧರಿಸುತ್ತೀಯ, ಇಂತಹ ಕೆಲಸ ಯಾಕೆ ಮಾಡುತ್ತೀಯ ಎಂದು ನನ್ನ ಗಂಡ ಎಂದೂ ನನ್ನನ್ನು ಕೇಳಿಲ್ಲ” ಎಂದಿದ್ದರು.

Comments are closed.