ಪೈಲ್ವಾನ್ ಸೌಂಡ್ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇಯಿದೆ. ಅದನ್ನ ಮತ್ತೊಂದು ಹಂತಕ್ಕೆ ಕೊಂಡೋಯ್ಯೋಕ್ಕೆ ಥೀಮ್ ಸಾಂಗ್ ಬಂದಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಮಾಸ್ ಟ್ಯೂನು, ಡಾ. ವಿ ನಾಗೇಂದ್ರ ಪ್ರಸಾದ್ ಗಟ್ಟಿ ಸಾಹಿತ್ಯದ ಹಾಡು ಸಖತ್ ಸೌಂಡ್ ಮಾಡ್ತಿದೆ.
ಅಭಿನಯ ಚಕ್ರವರ್ತಿ ಬಾದ್ ಶಾ ಕಿಚ್ಚ ಸುದೀಪ್ ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ ಆ್ಯಕ್ಷನ್ ಎಂಟ್ರಟ್ರೈನರ್ ಪೈಲ್ವಾನ್. ಚಿತ್ರದಲ್ಲಿ ಕಿಚ್ಚ ಕುಸ್ತಿ ಪಟು ಮತ್ತು ಬಾಕ್ಸರ್ ಆಗಿ ಎರಡು ಶೇಡ್ಗಳಿರೋ ಪಾತ್ರದಲ್ಲಿ ಮಿಂಚಿದ್ದಾರೆ. ಪಾತ್ರಕ್ಕಾಗಿ ಮೈ ಹುರಿಗೊಳಿಸಿ, ಖಡಕ್ ಲುಕ್ನಲ್ಲಿ ದರ್ಶನ ಕೊಟ್ಟಿದ್ದಾರೆ. ಪೈಲ್ವಾನ್ ಖದರ್ ಎಂಥಾದ್ದು ಅಂತ ‘ಬಂದ ನೋಡು ಪೈಲ್ವಾನ್’ ಥೀಮ್ ಸಾಂಗ್ ಸಾರಿ ಹೇಳ್ತಿದೆ.
ವ್ಯಾಸ ರಾಜ್ ವಾಯ್ಸ್ ಪೈಲ್ವಾನ್ ಥೀಮ್ ಬಿಟ್ಗೆ ಮತ್ತಷ್ಟು ಪವರ್ ತುಂಬಿದೆ. ಟೀಸರ್ ಜೊತೆಗೆ ಪೈಲ್ವಾನ್ ಕಿಚ್ಚನ ಜಬರ್ದಸ್ತ್ ಸ್ಟಿಲ್ಸ್ ಮಾಂಟೇಜ್ ಮಾಡಿ ಥೀಮ್ ಸಾಂಗ್ನ ಇನ್ನಷ್ಟು ಚೆಂದಗಾಣಿಸಿದ್ದಾರೆ. ಪೈಲ್ವಾನ್ ಪೌರುಷ ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ರಿಪೀಟ್ ಮೋಡ್ನಲ್ಲಿ ಸಾಂಗ್ನ ಕೇಳಿ ಎಂಜಾಯ್ ಮಾಡ್ತಿದ್ದಾರೆ. ರಿವೀಲ್ ಆದ ಕೆಲವೇ ಗಂಟೆಗಳಲ್ಲಿ ಸಾಂಗ್ ಲಕ್ಷ ಲಕ್ಷ ವೀವ್ಸ್ ಸಾಧಿಸಿದೆ.
ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲೂ ಪೈಲ್ವಾನ್ ಥೀಮ್ ಸಾಂಗ್ ರಿಲೀಸ್ ಆಗಿದೆ. ಆಯಾ ಭಾಷೆಯ ಖ್ಯಾತ ಚಿತ್ರ ಸಾಹಿತಿಗಳು ಬಂದ ನೋಡು ಪೈಲ್ವಾನ್ ಅಂತ ಖಡಕ್ ಪದಗಳನ್ನ ಬಳಸಿ, ಸಾಹಿತ್ಯ ಬರೆದಿದ್ಧಾರೆ. ಎಲ್ಲಾ ಭಾಷೆಗಳಲ್ಲೂ ಪೈಲ್ವಾನ್ ಥೀಮ್ ಸಾಂಗ್ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಕಿಚ್ಚನ ಹುಟ್ಟುಹಬ್ಬದ ಸಂಭ್ರಮದಲ್ಲಿ ಆಗಸ್ಟ್ ಕೊನೆ ವಾರದಲ್ಲಿ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಪೈಲ್ವಾನ್ ದರ್ಬಾರ್ ಸ್ಟಾರ್ಟ್ ಆಗಲಿದೆ.
Comments are closed.