ಮನೋರಂಜನೆ

‘ಯಾನ’ ಸಿನಿಮಾವನ್ನು ಕೊಂಡಾಡಿದ ಮಾಧ್ಯಮಗಳು ! ವಿಮರ್ಶೆಯಲ್ಲಿ ‘ಯಾನ’ಕ್ಕೆ ಬಹುಮಾನ !

Pinterest LinkedIn Tumblr

ಬೆಂಗಳೂರು: ಬಹುನಿರೀಕ್ಷಿತ ‘ಯಾನ’ ಸಿನಿಮಾ ಶುಕ್ರವಾರ ರಾಜ್ಯದ 100 ಕ್ಕೂ ಹೆಚ್ಚು ಸಿನಿಮಾ ಮಂದಿರಗಳಲ್ಲಿ ತೆರೆ ಕಂಡಿದ್ದು, ಭರ್ಜರಿ ಯಶಸ್ಸಿನ ಪ್ರದರ್ಶನವನ್ನು ಕಾಣುತ್ತಿದೆ.

ಕರ್ನಾಟಕದ ಕನ್ನಡ, ಇಂಗ್ಲಿಷ್ ಮಾಧ್ಯಮಗಳು ‘ಯಾನ’ ನೋಡಿ ಬಹುಪರಾಕ್ ಎಂದಿವೆ. ಬಹುತೇಕ ಎಲ್ಲ ಪತ್ರಿಕೆ, ದೃಶ್ಯ ಮಾಧ್ಯಮಗಳು ‘ಯಾನ’ವನ್ನು ಮುಕ್ತಕಂಠದಿಂದ ಕೊಂಡಾಡಿದೆ.

ಇತ್ತೀಚಿನ ಕನ್ನಡ ಚಿತ್ರರಂಗದಲ್ಲಿ ‘ಯಾನ’ದಂಥ ಚಿತ್ರಗಳು ಪ್ರದರ್ಶನ ಕಂಡಿಲ್ಲ, ಯಾನದ ಕಥೆಯೇ ಎಲ್ಲಾ ವರ್ಗದವರ ಮನಸ್ಸನ್ನು ತಟ್ಟುವಂತಿದೆ. ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್‌ ತನ್ನ ಮಕ್ಕಳಾದ ವೈಸಿರಿ, ವೈನಿಧಿ, ವೈಭವಿಗಾಗಿ ಮಾಡಿದ ‘ಯಾನ’ ಸಕ್ಸಸ್ ಕಂಡಿದೆ ಎಂದು ಮಾಧ್ಯಮಗಳು ಗುಣಗಾನ ಮಾಡಿವೆ.

ಯಾವೆಲ್ಲ ಪತ್ರಿಕೆಗಳು ಏನೆಲ್ಲ ವಿಮರ್ಶೆ ಮಾಡಿವೆ ನೋಡಿ….

ವಿಜಯ ಕರ್ನಾಟಕ – ‘ಕಾಲೇಜು ಹುಡುಗಿಯರ ಸುಂದರ ಯಾನ’ ಪ್ರಜಾವಾಣಿ- ‘ಜೀವನದ ಪಾಠದ ಯಾನ’
ಉದಯವಾಣಿ- ‘ಬಿಂಕ-ಭಿನ್ನಾಣದ ಕಲರ್‌ಫ‌ುಲ್‌ ಯಾನ’
ವಿಜಯವಾಣಿ- ‘ಎಲ್ಲೆಲ್ಲೋ ಸಾಗಿದರೂ ಗುರಿ ಮುಟ್ಟುವ ಯಾನ’
ಹೊಸದಿಗಂತ- ‘ಮೂವರು ಹುಡುಗಿಯರ ಭಾವನಾತ್ಮಕ ಯಾನ’
ಕನ್ನಡಪ್ರಭ(ಕನ್ನಡ ಏಷ್ಯಾನೆಟ್ ನ್ಯೂಸ್)-ಪ್ರಸ್ತುತ ತಲೆಮಾರಿನ ಹುಡುಗ- ಹುಡುಗಿಯರ ಬದುಕು, ತವಕ, ತಲ್ಲಣಗಳನ್ನು ತೆರೆದಿಡುವ ಹೊಸ ಪ್ರಯಣ

ಉಳಿದಂತೆ ಇಂಗ್ಲಿಷ್ ಮಾಧ್ಯಮಗಳಾದ ಟೈಮ್ಸ್ ಆಫ್ ಇಂಡಿಯಾ, ಬೆಂಗಳೂರು ಮಿರರ್, ಇಂಡಿಯನ್ ಎಕ್ಸ್ಪ್ರೆಸ್ ಸೇರಿದಂತೆ ಬಹುತೇಕ ಮಾಧ್ಯಮಗಳು ‘ಯಾನ’ದ ಜೊತೆ ನಿಂತು, ಇಂದಿನ ಯುವ ಪೀಳಿಗೆ ಹಿರಿಯರೊಂದಿಗೆ ಕೂತು ನೋಡಬಹುದಾದ ಒಂದು ಅತ್ಯುತ್ತಮ ಸಿನೆಮಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.

ಸಿನೆಮಾವನ್ನು ACME ಮೂವೀಸ್ ಇಂಟರ್ನ್ಯಾಷನಲ್ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಹೆಸರಾಂತ ಉದ್ಯಮಿ, ನಿರ್ಮಾಪಕರಾಗಿರುವ ಹರೀಶ್‌ ಶೇರಿಗಾರ್‌ ಮತ್ತು ಶರ್ಮಿಳಾ ಶೇರಿಗಾರ್‌ ಹಾಗು ‘ಐ’ ಎಂಟರ್ಟೈನ್ಮೆಂಟ್’ನ ವಿಜಯಲಕ್ಷಿ ಸಿಂಗ್ ನಿರ್ಮಿಸಿದ್ದಾರೆ.

ಮೂವರು ಬೇರೆ ಬೇರೆ ಹಿನ್ನೆಲೆಯಿಂದ ಬಂದ ಹುಡುಗಿಯರು ತಮಗೆ ಎದುರಾಗುವ ಸವಾಲುಗಳನ್ನು ಹೇಗೆ ಸ್ವೀಕರಿಸಿ, ಹೊಸ ಜೀವನಕ್ಕೆ ತೆರೆದುಕೊಳ್ಳುತ್ತಾರೆ ಅನ್ನೋದು ಚಿತ್ರದ ಕಥೆಯ ಒಂದು ಎಳೆ.

ಇಲ್ಲಿ ಇಂದಿನ ಜನರೇಶನ್‌ ಹುಡುಗ-ಹುಡುಗಿಯರ ಮನಸ್ಥಿತಿ, ಪೋಷಕರಾದವರ ಪರಿಸ್ಥಿತಿ, ಕಥೆ-ವ್ಯಥೆ, ನೋವು-ನಲಿವು ಎಲ್ಲವೂ ಇದೆ. ಚಿತ್ರದಲ್ಲಿ ಅನಂತನಾಗ್‌, ಸುಹಾಸಿನಿ, ರಂಗಾಯಣ ರಘು ಮೊದಲಾದ ಅನುಭವಿ ಕಲಾವಿದರದ್ದು ಅಚ್ಚುಕಟ್ಟು ಅಭಿನಯ. ಸಾಧುಕೋಕಿಲ, ಚಿಕ್ಕಣ್ಣ, ಸಂಜು ಬಸಯ್ಯ ಮೊದಲಾದ ಕಾಮಿಡಿ ಪಾತ್ರಗಳು ಬಲು ಇಷ್ಟವಾಗುತ್ತೆ.

ಚಿತ್ರದ ಜೋಶ್ವ ಶ್ರೀಧರ್‌ ಸಂಗೀತ, ಹಿನ್ನೆಲೆ ಸಂಗೀತ, ಕರಮ್‌ ಚಾವ್ಲಾರ ಛಾಯಾಗ್ರಹಣವನ್ನು ಮಾಧ್ಯಮಗಳು ಮೆಚ್ಚಿದ್ದು, ಸಿನೆಮಾವನ್ನು ನೋಡಿ ಆಸ್ವಾದಿಸುವಂತೆ ಹೇಳಿದೆ.

Comments are closed.