ಮನೋರಂಜನೆ

ರಶ್ಮಿಕಾ ಮಂದಣ್ಣರ ಹಾಟ್​ ದೃಶ್ಯಗಳಿಂದ ಸುದ್ದಿ ಮಾಡುತ್ತಿರುವ ಡಿಯರ್ ಕಾಮ್ರೇಡ್​ 26 ರಂದು ತೆರೆಗೆ!

Pinterest LinkedIn Tumblr


ಒಂದು ಸಿನಿಮಾದಲ್ಲಿ ನಾಯಕ ನಾಯಕಿಯ ರೊಮ್ಯಾನ್ಸ್ ಹಿಟ್ ಆಯ್ತು ಅಂದ್ರೆ ಸಾಕು.. ಅವರ ಮುಂದಿನ ಸಿನಿಮಾದಲ್ಲೂ ಅಂತಹುದೇ ರೊಮ್ಯಾನ್ಸ್, ಹಗ್ಗು, ಲಿಪ್ ಲಾಕುಗಳಿಗೆ ಬರವಿರೋಲ್ಲ. ಗೀತಾ ಗೋವಿಂದ ಸಿನಿಮಾದಲ್ಲಿ ರಶ್ಮಿಕಾ – ವಿಜಯ್​ ಕಿಸ್​​ ವೈರಲ್​​ ಆಗಿದ್ರಿಂದ ಡಿಯರ್​ ಕಾಮ್ರೇಡ್​ ಸಿನಿಮಾದಲ್ಲೂ ಅದೇ ಇದೇ ಅನ್ನೋದು ಮೊದಲೇ ಗೊತ್ತಾಗಿತ್ತು.

ಯಾಕಂದ್ರೆ ಸೌತ್ ಇಂಡಿಯನ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಹಾಗೂ ಸೌತ್ ಇಂಡಿಯನ್ ಮೋಸ್ಟ್‌ ಸೆನ್ಸೇಷನಲ್ ಸ್ಟಾರ್ ನಟ ವಿಜಯ್ ದೇವರಕೊಂಡ ಜೋಡಿ ಡಿಯರ್ ಕಾಮ್ರೆಡ್​ ಸಿನಿಮಾದಲ್ಲಿ ನಟಿಸ್ತಿದೆ. ಈ ಸಿನಿಮಾದ ಟೀಸರ್​​ನಲ್ಲೇ ಈ ಜೋಡಿಯ ಲಿಪ್-ಲಾಕ್‌ ದೃಶ್ಯ ಇತ್ತು.ಇದೀಗ ಡಿಯರ್ ಕಾಮ್ರೇಡ್ ಚಿತ್ರದ ಟ್ರೇಲರ್​​ ಬಿಡುಗಡೆಯಾಗಿದೆ. ಈ ಹಿಂದೆ ಟೀಸರ್​ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ರಶ್ಮಿಕಾ – ವಿಜಯ್​​ ಇಲ್ಲು ಲಿಪ್‍ಲಾಕ್ ಸೀನ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ಟೀಸರ್ ನೋಡಿ ಹಲವು ಜನರು ಕಿಸ್ಸಿಂಗ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಕ್ಕೆ ರಶ್ಮಿಕಾ ಹಾಗೂ ವಿಜಯ್ ಅವರನ್ನು ಟ್ರೋಲ್ ಮಾಡಿದ್ದರು. ಹೀಗಿದ್ದರೂ ಸಹ ಟ್ರೈಲರ್‌ನಲ್ಲಿ ಈಗ ಇಬ್ಬರು ಮುತ್ತಿನ ಮಳೆಗೆರೆದಿದ್ದಾರೆ. ಒಟ್ಟು ಮೂರು ಕಿಸ್ಸಿಂಗ್ ದೃಶ್ಯಗಳಿವೆ.

ರಶ್ಮಿಕಾ -ವಿಜಯ್​ ಬ್ಯಾಕ್​ ಟು ಬ್ಯಾಕ್​ ಕಿಸ್ಸಿಂಗ್​ ದೃಶ್ಯಗಳಲ್ಲಿ ಕಾಣಿಸ್ತಿಕೊಳ್ತಿರೋದ್ರಿಂದ ಇವರಿಬ್ಬರ ಮಧ್ಯೆ ಏನೋ ನಡಿತಿದೆ ಅನ್ನೋ ಗುಸು ಗುಸು ಟಾಲಿವುಡ್​ನಿಂದ ಸ್ಯಾಂಡಲ್​ವುಡ್​ವರೆಗೆ ಓಡಾಡ್ತಿದೆ.

ವಿದ್ಯಾರ್ಥಿ ನಾಯಕನಾಗಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದರೆ, ರಾಜ್ಯ ಮಟ್ಟದ ಕ್ರಿಕೆಟ್ ಆಟಗಾರ್ತಿಯಾಗಿ ರಶ್ಮಿಕಾ ಮಿಂಚಿದ್ದಾರೆ. ಇವರಿಬ್ಬರ ನಡುವಿನ ಲವ್ ಸ್ಟೋರಿ ಟ್ರೇಲರ್ ನಲ್ಲಿ ಕ್ಯಾರಿಯಾಗಿದ್ದು, ವಿಜಯ್ ದೇವರಕೊಂಡ ಗತ್ತಿನಲ್ಲಿ ಅಬ್ಬರಿಸಿದ್ದಾರೆ. ಲವ್, ಆ್ಯಕ್ಷನ್, ಎಮೋಷನ್ ಮಾದರಿಯ ಎಲ್ಲ ಮಸಾಲೆ ಅಂಶಗಳೂ ಇದೆ.

ಈ ಚಿತ್ರದಲ್ಲಿ ವಿಜಯ್ ಮಾಸ್ ಹಾಗೂ ಲವ್ವರ್ ಬಾಯ್ ಪಾತ್ರದಲ್ಲಿ ಮಿಂಚಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಹಾಗೂ ರಶ್ಮಿಕಾ ಅವರ ಕ್ಯೂಟ್ ಲವ್ ಸ್ಟೋರಿಯನ್ನು ಡಿಯರ್ ಕಾಮ್ರೆಡ್ ಹೊಂದಿದೆ. ಇಬ್ಬರು ತಮ್ಮ ಪ್ರೀತಿಗಾಗಿ ಹೇಗೆ ಹೋರಾಡುತ್ತಾರೆ ಎಂಬುದು ಚಿತ್ರದ ಟ್ರೈಲರ್‌ನಲ್ಲಿ ತೋರಿಸಲಾಗಿದೆ.

ಭರತ್ ಕಾಮಾ ನಿದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ನವೀನ್ ಯೆರನೆನಿ, ವೈ. ರವಿಶಂಕರ್, ಮೋಹನ್ ಮತ್ತು ಯಶ್ ರಂಗಿನೇನಿ ಜಂಟಿಯಾಗಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಡಿಯರ್ ಕಾಮ್ರೇಡ್ ತೆಲುಗು ಸೇರಿದಂತೆ ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಇದೇ ಜುಲೈ 26ರಂದು ರಿಲೀಸ್ ಆಗುತ್ತಿದೆ.

Comments are closed.