ಮನೋರಂಜನೆ

ನಾನು ಯಾರಿಗೂ ‘ಪ್ರತಿಸ್ಪರ್ಧಿ’ ಹೀರೊ ಅಲ್ಲವೇ ಅಲ್ಲ: ಕಿಚ್ಚ ಸುದೀಪ್ ಹೇಳಿದ್ದೇಕೆ..?

Pinterest LinkedIn Tumblr

ಸ್ಯಾಂಡಲ್ವುಡ್ ‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಹೃದಯ ತುಂಬಾ ವಿಶಾಲವಾದುದು ಎಂಬುದು ಅವರ ಅಭಿಮಾನಿಗಳು ಸೇರಿದಂತೆ ಎಲ್ಲಾ ಕನ್ನಡ ಸಿನಿಪ್ರೇಕ್ಷಕರಿಗೆ ಚೆನ್ನಾಗಿ ಗೊತ್ತಿದೆ. ಅಷ್ಟೇ ಅಲ್ಲ, ಸುದೀಪ್ ತಮ್ಮ ಮನದಾಳದ ಮಾತನ್ನು ಯಾವುದೇ ಅಂಜಿಕೆಯಿಲ್ಲದೇ ಬಹಿರಂಗವಾಗಿ ಹೇಳಿಕೊಳ್ಳುವ ವ್ಯಕ್ತಿ. ಇತ್ತೀಚೆಗೆ ‘ಪೈಲ್ವಾನ್’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಸುದೀಪ್ ಕೆಲವು ವೈಯಕ್ತಿಕ ಮಾತುಗಳನ್ನು ಹೇಳಿಕೊಂಡಿದ್ದಾರೆ.

ಪೈಲ್ವಾನ್ ಪ್ರೆಸ್‌ಮೀಟ್‌ನಲ್ಲಿ ಮಾತನಾಡಿದ ಕಿಚ್ಚ ಸುದೀಪ್ “ಹಾಲಿವುಡ್, ಬಾಲಿವುಡ್ ಸೇರಿದಂತೆ ಬಹುತೇಕ ಭಾಷೆಗಳಲ್ಲಿ ಬಾಕ್ಸಿಂಗ್ ಆಧಾರಿತ ಸಿನಿಮಾಗಳು ಬಂದಿವೆ. ಆದರೆ ಎಲ್ಲ ಸಿನಿಮಾದ ಕತೆ ಮಾತ್ರ ವಿಭಿನ್ನವಾಗಿದೆ. ಪೈಲ್ವಾನ್ ಸಿನಿಮಾಗೆ ಸಂಬಂಧಪಟ್ಟಂತೆ, ಈ ಚಿತ್ರದ ಕ್ಲೈಮ್ಯಾಕ್ಸ್ ತುಂಬಾನೇ ರೋಚಕತೆಯನ್ನ ಹೊಂದಿದೆ. ಹೀಗಾಗಿ ಪೈಲ್ವಾನ್ ಒಂದು ವಿಭಿನ್ನ ಕೆಟಗರಿಗೆ ಸೇರಿದ ಸಿನಿಮಾ. ಇಂದಿನ ಸಿನಿಮಾ ಉದ್ಯಮದಲ್ಲಿ ನಾವು ಸ್ಟಾರ್ ಪಟ್ಟಕ್ಕಾಗಿ ಕಾಂಪೀಟ್ ಮಾಡುವ ಬದಲು ಇಂದಿನ ಜನರ ಯೋಚನೆಗಳೊಂದಿಗೆ ಕಾಂಪೀಟೇಷನ್ ಮಾಡಬೇಕಾಗಿದೆ. ನಾವು ಆ ಹೀರೋ ಜೊತೆ ಈ ಹೀರೋ ಜೊತೆ ಕಾಂಪೀಟ್‌ ಮಾಡ್ತೀವಿ ಅನ್ನೋದೆಲ್ಲ ಸಿಲ್ಲಿ ಎನಿಸುವ ಸಂಗತಿಗಳು.

ಭವಿಷ್ಯದಲ್ಲಿ ನಮ್ಮ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಜನರೇಷನ್‌ ಆಲೋಚನೆಗೆ ತಕ್ಕಂತೆ ಸಿನಿಮಾ ನಿರ್ಮಾಣ ಮಾಡಬೇಕಿದೆ. ಯಾವುದೇ ಸಿನಿಮಾಗೂ ಪ್ರೇರಣೆ ಅನ್ನೋದು ತುಂಬಾನೇ ಮುಖ್ಯವಾಗುತ್ತೆ. ಅದು ಪೈಲ್ವಾನ್ ಅಂತಲ್ಲ, ಎಲ್ಲಾ ಸಿನಿಮಾಗೂ ಸಂಬಂಧಿಸಿದ್ದು. ನಾನು ಸೇರಿದಂತೆ ಹೆಚ್ಚಾಗಿ ಎಲ್ಲರೂ ಹಲವು ಭಾಷೆಯ ಸಿನಿಮಾಗಳಿಂದ ಪ್ರೇರಣೆಗೊಂಡಿರುತ್ತೇವೆ. ದಂಗಲ್, ಸುಲ್ತಾನ್ ಸಿನಿಮಾಗಿಂತ ಪೈಲ್ವಾನ್ ತುಂಬಾನೇ ವಿಭಿನ್ನವಾಗಿದೆ. ಎಲ್ಲವೂ ಕ್ರೀಡೆ ಆಧಾರಿತ ಸಿನಿಮಾಗಳೇ ಆದರೆ ಕಥೆ ಬೇರೆಯಾಗಿವೆ.

ನನಗೆ ಸಿನಿಮಾದಲ್ಲಿ ಡ್ಯಾನ್ಸ್ ಕಲಿಯೋಕೆ ಗಣೇಶ್ ಆಚಾರ್ಯ ತುಂಬಾನೇ ಪ್ರೇರಣೆಯಾಗಿದ್ದಾರೆ. ಒಳ್ಳೊಳ್ಳೆ ತಂತ್ರಜ್ಙರಿಂದ ಈ ಪೈಲ್ವಾನ್ ಸಿನಿಮಾ ನಿರ್ಮಾಣವಾಗಿದೆ. ಕೃಷ್ಣ ಅವರು ಪೈಲ್ವಾನ್ ಸಿನಿಮಾದ ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ಒಂದೊಳ್ಳೆ ಟೀಮ್ ಸೇರಿ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿ ಪೈಲ್ವಾನ್ ಎಂಬ ವಿಭಿನ್ನ ಸಿನಿಮಾ ಮಾಡಿ ಸಿನಿಮಾಪ್ರೇಕ್ಷಕರ ಮುಂದೆ ಸದ್ಯದಲ್ಲೇ ಬರಲಿದ್ದೇವೆ. ನಮ್ಮ ಸಿನಿಮಾ ಯಾವುದೇ ಸಿನಿಮಾಗೂ ಕಾಂಪಿಟೀಟರ್ ಅಲ್ಲ, ಅದೇ ರೀತಿ ನಾನೂ ಕೂಡ ಯಾವುದೇ ನಟರಿಗೆ ಪ್ರತಿಸ್ಪರ್ಧಿ ಅಲ್ಲ” ಎಂದು ಸುದೀಪ್ ಸ್ಪಷ್ಟವಾಗಿ ಹೇಳಿದ್ದಾರೆ.

Comments are closed.