ಮನೋರಂಜನೆ

ಬಾಲಿ ದ್ವೀಪದಲ್ಲಿ ಜಾಲಿ ಟ್ರಿಪ್ ಮಾಡುತ್ತಿರುವ ನಟಿ ಹರಿಪ್ರಿಯಾ!

Pinterest LinkedIn Tumblr

ಸ್ಯಾಂಡಲ್‌ವುಡ್‌ನ ಸುಂದರಿ, ನಟಿ ಹರಿಪ್ರಿಯಾ ಸಿನಿಮಾ ಕೆಲಸಕ್ಕೆ ರಜೆ ಹಾಕಿ ಜಾಲಿಯಾಗಿ ಬಾಲಿ ದ್ವೀಪದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ನಟಿ ಹರಿಪ್ರಿಯಾ ಇಂಡೋನೇಷಿಯಾ ಸೇರಿದಂತೆ ಹಲವು ವಿದೇಶಗಳನ್ನು ಸುತ್ತಿ ಬರಲು ಟೂರ್‌ಗೆ ಹೋಗಿರುವುದು ಬಹಳಷ್ಟು ಜನರಿಗೆ ಗೊತ್ತಿದೆ. ಸ್ವತಃ ನಟಿ ಹರಿಪ್ರಿಯಾ ಈ ಸಂಗತಿಯನ್ನು ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವ ಮೂಲಕ ಜಗಜ್ಜಾಹೀರು ಮಾಡಿದ್ದಾರೆ.

ಬಾಲಿ ದ್ವೀಪದಲ್ಲಿ ತಮ್ಮ ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಿರುವ ಹರಿಪ್ರಿಯಾ ಅವರು ಸಮಯ ಸಿಕ್ಕಾಗ ಅಲ್ಲಿನ ತಮ್ಮ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದನ್ನು ಮರೆಯುವುದಿಲ್ಲ. ಈ ಮೂಲಕ ಅವರು ಎಲ್ಲಿದ್ದರೂ ತಮ್ಮ ಅಭಿಮಾನಿಗಳ ಜತೆ ‘ಕನೆಕ್ಟ್’ ಆಗಿರುತ್ತಾರೆ ಎನ್ನಬಹುದು. ಇತ್ತೀಚೆಗೆ ರಮಣಿಯ ದ್ವೀಪವಾಗಿರುವ ‘ಬಾಲಿ’ಯನ್ನು ತಲುಪಿರುವ ಹರಿಪ್ರಿಯಾ, ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಪೋಸ್ಟ್ ಮಾಡಿರುವ ಹರಿಪ್ರಿಯಾ “ಇಲ್ಲಿನ ಪ್ರಕೃತಿ ಸೌಂದರ್ಯ ಬಹಳ ಸೊಗಸು. ಇಲ್ಲಿ ಫುಡ್ ಸಹ ಸಖತ್ ಟೇಸ್ಟಿಯಾಗಿದೆ. ಎಲ್ಲವನ್ನೂ ಜಾಯ್ ಮಾಡುತ್ತಿದ್ದೇನೆ. ನಾನು ನನ್ನ ಫ್ಯಾಮಿಲಿ ಜೊತೆ ಹೋಗಿರುವುದು ಇನ್ನೂ ಚೆನ್ನಾಗಿದೆ. ಆಗಾಗ ಹೀಗೆ ಟ್ರಿಪ್ ಹೋಗುವುದು ಮನಸ್ಸನ್ನು ಫ್ರೆಶ್ ಮಾಡುತ್ತದೆ. ಎಂಜಾಯಿಂಗ್ ಮಚ್..”‘ ಎಂದು ಪೋಸ್ಟ್ ಮಾಡಿದ್ದಾರೆ. ಸದ್ಯ ನಟಿ ಹರಿಪ್ರಿಯಾ ವೆಕೆಷನ್ ಮೂಡ್ ನಲ್ಲಿದ್ದು, ಸ್ವಲ್ಪ ಕಾಲ ಚಿತ್ರರಂಗದಿಂದ ವಿಶ್ರಾಂತಿ ತೆಗೆದುಕೊಂಡು ಜಾಲಿಟ್ರಿಪ್ ಗೆ ಹೊಗಿದ್ದಾರೆ.

ನಟಿ ಹರಿಪ್ರಿಯಾ ಅವರು ಈಗಾಗಲೇ 25 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಹರಿಪ್ರಿಯಾ ನಟನೆಯ ‘ಬೆಲ್ ಬಾಟಂ’ ಚಿತ್ರವು ಭಾರೀ ಸಕ್ಸಸ್ ದಾಖಲಿಸಿ 150 ದಿನಗಳ ಪ್ರದಶ್ನ ಕಂಡಿದೆ. ಹರಿಪ್ರಿಯಾರನ್ನು ಹುಡುಕಿಕೊಂಡು ‘ಬ್ಯಾಕ್ ಟು ಬ್ಯಾಕ್’ ಸಿನಿಮಾಗಳು ಬರುತ್ತಿವೆ. ಆದರೆ, ಹರಿಪ್ರಿಯಾ ಅಳೆದು ತೂಗಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರಂತೆ. ಕಾರಣ, ಅವರಿಗೆ ವಿಭಿನ್ನತೆ ಬೇಕಾಗಿದೆಯಂತೆ.

ಸದ್ಯಕ್ಕೆ ಹರಿಪ್ರಿಯಾ ನಟನೆಯ ‘ಕುರುಕ್ಷೇತ್ರ’ ಚಿತ್ರವು ಬಿಡುಗಡೆಯಾಗಲಿದೆ. ಆ ‘ಬಿಚ್ಚುಗತ್ತಿ’, ‘ಎಲ್ಲಿದ್ದೆ ಇಲ್ಲಿ ತನಕ’, ‘ಕನ್ನಡ್ ಗೊತ್ತಿಲ್ಲ’, ‘ಕಥಾಸಂಗಮ’ ಚಿತ್ರಗಳು ರಿಲೀಸ್‌ಗೆ ಕಾಯುತ್ತಿವೆ. ತಮ್ಮ ಮುಂದಿನ ಸಿನಿಮಾ ಜರ್ನಿ ಬಗ್ಗೆ ಹರಿಪ್ರಿಯಾ ಅವರು “ಒಂದೆರಡು ಹೊಸ ಸಿನಿಮಾಗಳ ಮಾತುಕತೆ ನಡೆಯುತ್ತಿದೆ. ತುಂಬಾ ಚೆನ್ನಾಗಿರುವ ಸ್ಕ್ರಿಪ್ಟ್‌ಗಳು ಬಂದಿವೆ. ಅವುಗಳ ಮಾತುಕತೆ ಫೈನಲ್ ಆದ ಬಳಿಕ ಆ ಬಗ್ಗೆ ಮಾಹಿತಿ ನೀಡಲಿದ್ದೇನೆ” ಎಂದಿದ್ದಾರೆ.

Comments are closed.