ಚಂಢೀಗಡ: ಬಾಲಿವುಡ್ ನಟ ರಾಹುಲ್ ಬೋಸ್ ಆರ್ಡರ್ ಮಾಡಿದ್ದ 2 ಬಾಳೇಹಣ್ಣಿಗೆ 442 ರೂ. ಬಿಲ್ ಮಾಡಿದ್ದ ಪಂಚತಾರಾ ಹೊಟೆಲ್ ಗೆ 25 ಸಾವಿರ ರೂ ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.
ಪಂಚತಾರಾ ಹೋಟೆಲ್’ನಲ್ಲಿ ಎರಡು ಬಾಳೆಹಣ್ಣುಗಳಿಗೆ 442 ರೂ. ಬಿಲ್ ಮಾಡಿದ್ದಾರೆ ಎಂಬ ಬಾಲಿವುಡ್ ನಟ ರಾಹುಲ್ ಬೋಸ್ ಆರೋಪಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ಗ್ರಾಹಕ ರಕ್ಷಣಾ ಪ್ರಾಧಿಕಾರ ಜೆಡಬ್ಲ್ಯೂ ಮ್ಯಾರಿಯಟ್ ಗೆ 25 ಸಾವಿರ ರೂ ದಂಡ ವಿಧಿಸಿದೆ.
ರಾಹುಲ್ ಬೋಸ್ ವಿಡಿಯೋ ಆಧರಿಸಿ ಪಂಚತಾರಾ ಹೋಟೆಲ್’ಗೆ ಜಿಎಸ್’ಟಿ ತೆರಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಹಣ್ಣುಗಳು ಜಿಎಸ್’ಟಿ ತೆರಿಗೆಯಡಿ ಬರುವದಿಲ್ಲವಾದ್ದರಿಂದ ಹೋಟೆಲ್ ಅದ್ಹೆಗೆ ಎರಡು ಬಾಳೆಹಣ್ಣುಗಳಿಗೆ ಇಷ್ಟೊಂದು ತೆರಿಗೆ ವಿಧಿಸಿದೆ ಎಂಬ ಕುರಿತು ಪರಿಶೀಲನೆ ನಡೆಸಿತ್ತು. ತೆರಿಗೆ ಅಧಿಕಾರಿಗಳ ತಂಡ ಈಗಾಗಲೇ ಹೋಟೆಲ್’ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತೆರಿಗೆ ಬಾಳೆಹಣ್ಣಿಗಲ್ಲ ಬದಲಿಗೆ ಬಾಳೆಹಣ್ಣನ್ನು ಸರ್ವ್ ಮಾಡಿದ ಬೆಳ್ಳಿ ತಟ್ಟೆಗೆ ವಿಧಿಸಲಾಗಿದೆ ಎಂಬ ವಾದ ಕೇಳಿ ಬಂದಿತ್ತು.
ಇನ್ನು ಚಂಡಿಗಢದ ಉಪ ಆಯುಕ್ತ, ಅಬಕಾರಿ ತೆರಿಗೆ ಆಯುಕ್ತ ಮಂದೀಪ್ ಸಿಂಗ್ ಬರಾರ್ ಈ ವಿಷಯ ಕುರಿತಂತೆ ಮಾತನಾಡಿದ್ದು, ‘ರಾಹುಲ್ ಬೋಸ್ ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಹಾಗೂ ಬಿಲ್ ಆಧಾರದ ಮೇಲೆ ಆ ಪಂಚತಾರಾ ಹೋಟೆಲ್ ಮೇಲೆ ತನಿಖೆಗೆ ಆದೇಶಿಸಿದ್ದೇನೆ’ ಎಂದಿದ್ದರು. ಅಷ್ಟೆಅಲ್ಲ ಹೋಟೆಲ್ ತಾಜಾ ಹಣ್ಣಿನ ಮೇಲೆ ಜಿಎಸ್ಟಿ ಹೇಗೆ ಹಾಕಿದ್ದಾರೆ ಎಂದು ತನಿಖೆ ನಡೆಸಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಒಂದು ವೇಳೆ ಇದರಲ್ಲಿ ಹೋಟೆಲ್ನ ತಪ್ಪು ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದೂ ಹೇಳಿದ್ದರು.
ಇದೀಗ ಪ್ರಕರಣ ಸಂಬಂಧ ನಿರ್ಧಾರ ಕೈಗೊಂಡಿರುವ ಜಿಲ್ಲಾಡಳಿತ ಪಂಚತಾರಾ ಹೊಟೆಲ್ ಗೆ 25 ಸಾವಿರ ರೂ ದಂಡ ವಿಧಿಸಿದೆ.
Comments are closed.