ಮನೋರಂಜನೆ

ಅಮಲಾ ಪೌಲ್ ರಂತೆ ನಗ್ನವಾಗಿ ನಟಿಸಲು ಓಕೆ ಎಂದ ಯುವನಟಿ!

Pinterest LinkedIn Tumblr


ಸೌತ್ ಇಂಡಸ್ಟ್ರಿ ಬ್ಯೂಟಿ, ಕನ್ನಡದ ಹೆಬ್ಬುಲಿ ಚಿತ್ರದಲ್ಲಿ ನಟಿಸಿದ್ದ ನಟಿ ಅಮಲಾ ಪೌಲ್ ಅಡೈ ಚಿತ್ರದಲ್ಲಿ ಬೆತ್ತಲಾಗುವ ಮೂಲಕ ಇಂಡಸ್ಟ್ರಿಯೇ ತನ್ನತ್ತಾ ತಿರುಗಿ ನೋಡುವಂತೆ ಮಾಡಿದ್ದರು. ಈಗ ಇದೇ ಹಾದಿಯಲ್ಲಿ ಮತ್ತೊಬ್ಬ ಯುವನಟಿ ಸಾಗಿದ್ದು, ಬೆತ್ತಲೆಯಾಗಿ ನಟಿಸಲು ಸಿದ್ದ ಎನ್ನುವ ಮೂಲಕ ಸಿನಿಪ್ರಿಯರಿಗೆ ಅಚ್ಚರಿ ಮೂಡಿಸಿದ್ದಾರೆ. ಅಷ್ಟಕ್ಕೂ ಯಾರಾ ನಟಿ ಅಂದ್ರಾ ಈ ಸ್ಟೋರಿ ನೋಡಿ..

ಹೌದು ಮಾಡೆಲ್ ಕ್ಷೇತ್ರದಿಂದ ವೃತ್ತಿ ಆರಂಭಿಸಿ ನಂತರ ಚಿತ್ರರಂಗ ಪ್ರವೇಶಿಸಿದ ತೆಲುಗು ನಟಿ ಬಿಂದು ಓಂ ಶಾಂತಿ, ಬಂಪರ್ ಆಫರ್ ಇನ್ನೂ ಹಲವು ಚಿತ್ರಗಳಲ್ಲಿ ನಟಿಸಿದರು. ಜೊತೆಗೆ ಬಿಗ್ ಬಾಸ್ ಮೊದಲನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದರು.

ಸದ್ಯ ಅಮಲಾ ಪೌಲ್ ಅವರ ಅಡೈ ಚಿತ್ರದಲ್ಲಿನ ನಟನೆಯನ್ನು ನೋಡಿದ ಬಳಿಕ ”ನಾನು ಇಂತಹ ಚಿತ್ರಗಳನ್ನು ಇಷ್ಟ ಪಡುತ್ತೇನೆ. ಒಳ್ಳೆಯ ಚಿತ್ರ ಕಥೆ ಸಿಕ್ಕಿ, ಚಿತ್ರ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಹೀರೋಯಿನ್ ಪಾತ್ರಕ್ಕೆ ಹೆಚ್ಚು ಮಹತ್ವ ದೊರೆತರೆ ನಾನು ನಗ್ನವಾಗಿ ನಟಿಸುತ್ತೇನೆ ಎಂದು ಹೇಳಿದ್ದಾರೆ.

ಮಹಿಳಾ ಪ್ರಧಾನ ಚಿತ್ರಗಳು ಹೆಚ್ಚು ಹೆಚ್ಚಾಗಿ ಬರಬೇಕು. ಕೇವಲ ಹೀರೋಗಳು ಮಾತ್ರ ಅಭಿನಯಿಸುವುದಿಲ್ಲ ಹೀರೋಯಿನ್ ಗಳು ಕೂಡ ನಟಿಸಬಲ್ಲರು. ಚಿತ್ರಗಳಲ್ಲಿ ನಟರಿಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತೀರಾ ಅಷ್ಟೇ ಪ್ರಾಮುಖ್ಯತೆ ನಟಿಯರಿಗೂ ಸಿಗಬೇಕು. ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಾಯಕಿಯ ಪಾತ್ರಕ್ಕೆ ಹೆಚ್ಚು ಮಹತ್ವವಿದ್ದರೆ ನಾನು ಸಹ ನಾನು ಸಹ ನಗ್ನವಾಗಿ ನಟಿಸಲು ಸಿದ್ಧ ಎಂದು ತಿಳಿಸಿದ್ದಾರೆ.

Comments are closed.