ಮನೋರಂಜನೆ

‘ಗೂಗಲ್‌ ಸರ್ಚ್‌’ನಲ್ಲಿ ಪ್ರಧಾನಿ ಮೋದಿ, ಸಲ್ಮಾನ್‌ ಖಾನ್‌, ಶಾರುಕ್‌ ಖಾನ್‌ ಅವರನ್ನೇ ಹಿಂದಿಕ್ಕಿದ ಈ ಹಾಟ್‌ ನಟಿ !

Pinterest LinkedIn Tumblr

ಮುಂಬೈ: ಈ ವರ್ಷ ಅತಿ ಹೆಚ್ಚು ಗೂಗಲ್‌ ಸರ್ಚ್‌ ನಡೆಸಿರುವ ಭಾರತದ ಸೆಲೆಬ್ರಿಟಿಗಳಲ್ಲಿ ಬಾಲಿವುಡ್‌ನ ಮಾದಕ ನಟಿ ಸನ್ನಿ ಲಿಯೋನ್‌ ಮೊದಲ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಲಿವುಡ್‌ ಸೂಪರ್‌ ಸ್ಟಾರ್‌ಗಳಾದ ಸಲ್ಮಾನ್‌ ಖಾನ್‌ ಮತ್ತು ಶಾರುಕ್‌ ಖಾನ್‌ ಅವರನ್ನು ಹಿಂದಿಕ್ಕಿದ್ದಾರೆ.

ಗೂಗಲ್‌ ಟ್ರೆಂಡ್ಸ್‌ ಅನಾಲಿಟಿಕ್ಸ್‌ ಪ್ರಕಾರ, ಸನ್ನಿಗೆ ಸಂಬಂಧಿಸಿದ ಹುಡುಕಾಟದಲ್ಲಿ ಆಕೆಗೆ ಸಂಬಂಧಿಸಿದ ವಿಡಿಯೋಗಳಿಗಾಗಿ ಜನರು ಹೆಚ್ಚು ಹುಡುಕಾಟ ನಡೆಸಿದ್ದಾರೆ. ಜತೆಗೆ ಸನ್ನಿ ಲಿಯೋನ್‌ ಕುರಿತಾದ ‘ಕರಣ್​ಜಿತ್​ ಕೌರ್​; ದಿ ಅನ್​ಟೋಲ್ಡ್​​​ ಸ್ಟೋರಿ ಆಫ್​ ಸನ್ನಿ ಲಿಯೋನ್​’ ಬಯೋಪಿಕ್ ಸರಣಿಗಾಗಿ ಜನರು ಹುಡುಕಾಡಿದ್ದಾರೆ.
ಇದಲ್ಲದೆ ಬಹಳಷ್ಟು ಸಂಖ್ಯೆಯ ಜನರು ಸನ್ನಿಯ ಮೂಲದ ಕುರಿತು ಹುಡುಕಾಡಿದ್ದು, ಈಶಾನ್ಯ ರಾಜ್ಯಗಳಾದ ಮಣಿಪುರ ಮತ್ತು ಅಸ್ಸಾಂನಿಂದ ಸನ್ನಿಗಾಗಿ ಹೆಚ್ಚಿನ ಸಂಖ್ಯೆಯ ಹುಡುಕಾಟಗಳು ನಡೆದಿವೆ.

ಕಳೆದ ವರ್ಷವೂ ಗೂಗಲ್​ ಟ್ರೆಂಡ್ಸ್​​ನಲ್ಲಿ ನಟಿ ಸನ್ನಿ ಲಿಯೋನ್​ ಮೊದಲ ಸ್ಥಾನದಲ್ಲಿದ್ದರು. ಈ ಬಾರಿಯೂ ಆ ಸ್ಥಾನ ಉಳಿಸಿಕೊಂಡಿರುವ ಅವರು, ಗೂಗಲ್‌ ಹುಡುಕಾಟದಲ್ಲಿ ಮೊದಲ ಸ್ಥಾನದಲ್ಲಿರುವ ಕುರಿತು ನನ್ನ ತಂಡ ನನ್ನ ಗಮನಕ್ಕೆ ತಂದಿದೆ ಮತ್ತು ನನಗಾಗಿಯೇ ನಿರಂತರವಾಗಿ ಇರುವ ನನ್ನ ಅಭಿಮಾನಿಗಳಿಗೆ ನಾನು ಇದನ್ನು ಅರ್ಪಿಸುತ್ತೇನೆ. ಇಂದೊಂದು ದೊಡ್ಡ ಭಾವನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಸದ್ಯ ಸನ್ನಿಲಿಯೋನ್‌ ‘ಕೋಕಾಕೋಲ’ ಸಿನಿಮಾದಲ್ಲಿ ನಟಿಸುತ್ತಿದ್ದು, ಅವರು ಭೋಜ್‌ಪುರಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

Comments are closed.