ಮುಂಬೈ (ಆ. 23): ಪ್ರಸಿದ್ಧ ಚಿತ್ರ ನಟ ಅಕ್ಷಯ್ ಕುಮಾರ್ ವಿಶ್ವದ 4ನೇ ಶ್ರೀಮಂತ ಸಿನಿಮಾ ನಟರಾಗಿ ಹೊರಹೊಮ್ಮಿದ್ದಾರೆ. 2018ರ ಜೂ.1ರಿಂದ 2019ರ ಜೂ.1ರವರೆಗೆ 460 ಕೋಟಿ ರು. ಗಳಿಸಿರುವ ಅಕ್ಷಯ್, ಹಾಲಿವುಡ್‌ನ ಪ್ರಸಿದ್ಧ ನಟ ಜಾಕಿ ಚಾನ್‌ಗಿಂತ ಒಂದು ಸ್ಥಾನ ಮೇಲಿದ್ದಾರೆ.
ಅತಿ ಹೆಚ್ಚು ಸಂಭಾವನೆ ಪಡೆಯುವ ವಿಶ್ವದ ಸಿನಿಮಾ ನಟರ ಪಟ್ಟಿಯೊಂದನ್ನು ಫೋಬ್ಸ್‌ರ್ ಸಂಸ್ಥೆ ಸಿದ್ಧಪಡಿಸಿದ್ದು, ಅದರಲ್ಲಿ ಈ ಮಾಹಿತಿ ಇದೆ. ‘ದ ರಾಕ್’ ಖ್ಯಾತಿಯ ಹಾಲಿವುಡ್ ನಟ ಡ್ವೇಯ್‌್ನ ಜಾನ್ಸನ್ ಅವರು 640 ಕೋಟಿ ರು. ವಾರ್ಷಿಕ ಸಂಪಾದನೆಯೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ನಟರಾದ ಕ್ರಿಸ್ ಹೆಮ್ಸ್‌ವತ್‌ರ್ (550 ಕೋಟಿ ರು.), ರಾಬರ್ಟ್ ಡೌನಿ ಜೂನಿಯರ್ (474 ಕೋಟಿ ರು.) ನಂತರದ ಸ್ಥಾನಗಳನ್ನು ಪಡೆದಿದ್ದಾರೆ.
417 ಕೋಟಿ ರು. ಆದಾಯ ಹೊಂದಿರುವ ಜಾಕಿ ಚಾನ್ ಅವರು ಐದನೇ ಸ್ಥಾನದಲ್ಲಿದ್ದಾರೆ. ‘ಅವೆಂಜರ್ಸ್: ಎಂಡ್‌ಗೇಮ್’ ಖ್ಯಾತಿಯ ಕ್ರಿಸ್ ಎವಾನ್ಸ್ ಅವರು 8ನೇ ಸ್ಥಾನ ಪಡೆದುಕೊಂಡಿದ್ದಾರೆ. ಟಾಪ್ 10 ಪಟ್ಟಿಯಲ್ಲಿ ಅಕ್ಷಯ್ ಹೊರತುಪಡಿಸಿ ಶಾರುಖ್, ಸಲ್ಮಾನ್, ಅಮೀರ್ ಖಾನ್ ಸೇರಿ ಭಾರತದ ಯಾವುದೇ ನಟರೂ ಇಲ್ಲ.
ಅಕ್ಷಯ್ ಕುಮಾರ್ ಅವರು ಪ್ರತಿ ಸಿನಿಮಾದಲ್ಲಿನ ನಟನೆಗೆ 35ರಿಂದ 70 ಕೋಟಿ ರು. ಪಡೆಯುತ್ತಾರೆ. ಟಾಟಾ ಹಾಗೂ ಹಾರ್ಪಿಕ್ ಸೇರಿದಂತೆ 20ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ನೂರಾರು ಕೋಟಿ ರು. ದುಡಿಯುತ್ತಿದ್ದಾರೆ ಎಂದು ಫೋಬ್ಸ್‌ರ್ ಸಂಸ್ಥೆ ವರದಿ ಮಾಡಿದೆ.
Comments are closed.