ಮನೋರಂಜನೆ

ಬಾಕ್ಸ್ ಆಫೀಸ್​ನಲ್ಲಿ ಧೂಳ್ ಎಬ್ಬಿಸುತ್ತಿರುವ ಅಕ್ಷಯ್ ಕುಮಾರ್ ನಟನೆಯ ಮಿಷನ್ ಮಂಗಲ್!!

Pinterest LinkedIn Tumblr


ಬಾಲಿವುಡ್​​​ ಬಾಕ್ಸ್​​​ ಆಫೀಸ್​ನಲ್ಲಿ ಮಿಷನ್ ಮಂಗಲ್ ಸಿನಿಮಾ ಸಖತ್ ಧೂಳೆಬ್ಬಿಸ್ತಿದೆ. ಇಸ್ರೋದ ಬಾಹ್ಯಾಕಾಶ ಸಂಶೋಧನೆಗಳನ್ನು ಕೇಂದ್ರೀಕರಿಸಿ ನಿರ್ಮಿಸಲಾಗಿರುವ ಈ ಸಿನಿಮಾ ತೆರೆ ಕಂಡ ಕೇವಲ ಒಂಭತ್ತೇ ದಿನಗಳಲ್ಲಿ 135.99 ಕೋಟಿ ಕಲೆಕ್ಷನ್ ಆಗಿದೆ.

ಇನ್ನು ಅಕ್ಷಯ್ ಕುಮಾರ್ ಅವರ ಎರಡನೇ ಅತಿ ಹೆಚ್ಚು ಗಳಿಕೆಯ ಸಿನಿಮಾ ಇದಾಗಿದೆ. ಕನ್ನಡದ ಹಿರಿಯ ನಟ ದತ್ತಣ್ಣ, ಬಾಲಿವುಡ್ ನಟಿಯರಾದ ವಿದ್ಯಾ ಬಾಲನ್, ಸೊನಾಕ್ಷಿ ಸಿನ್ಹಾ, ತಾಪ್ಸೀ ಪನ್ನು, ನಿತ್ಯಾ ಮೆನನ್ ಮುಂತಾದವರು ಬಾಹ್ಯಾಕಾಶ ವಿಜ್ಞಾನಿ, ಸಂಶೋಧಕರಾಗಿ ಅಭಿನಯಿಸಿರುವ ‘ಮಿಷನ್ ಮಂಗಲ್’ ಸಿನಿಮಾ ತೆರೆಕಂಡ ಎರಡೇ ದಿನಗಳಲ್ಲಿ ಉತ್ತಮ ಲಾಭ ಗಳಿಸಿದೆ.

ಆಗಸ್ಟ್​ 15ರಂದು ತೆರೆಕಂಡಿದ್ದ ಈ ಸಿನಿಮಾ ಮೊದಲ ದಿನವೇ 29.16 ಕೋಟಿ ರೂ. ಗಳಿಸಿತ್ತು. ಎರಡನೇ ದಿನ 17.28 ಕೋಟಿ ರೂ. ಇದೀಗಾ ಒಂಭತ್ತೇ ದಿನಗಳಲ್ಲಿ 135.99 ಕೋಟಿ ಗಳಿಸುವ ಮೂಲಕ ಯಶಸ್ಸಿನತ್ತ ಮುನ್ನುಗ್ಗುತ್ತಿದೆ.

ಎಸ್ ಶಂಕರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ‘ಸಾಮಾನ್ಯರು ಜೀವನದಲ್ಲಿ ಏನೋ ವಿಶೇಷವಾದುದನ್ನು ಸಾಧಿಸಿ ಹೇಗೆ ಅತ್ಯುನ್ನತ ಮಟ್ಟಕ್ಕೇರುತ್ತಾರೆ’ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರಕ್ಕೆ ಅಕ್ಷಯ್ ಕುಮಾರ್ ಮತ್ತು ಆರ್ ಬಲ್ಕಿ ನಿರ್ಮಾಣವಿದೆ.

Comments are closed.