ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅಭಿನಯದ ಹೈ ಬಜೆಟ್ ಚಿತ್ರ ಕುರುಕ್ಷೇತ್ರ ರಾಜ್ಯದಲ್ಲಿ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿರುವ ಹೊತ್ತಿನಲ್ಲಿ ಇದೀಗ ಗಲ್ಫ್ ದೇಶದಲ್ಲಿಯೂ ಮೋಡಿ ಮಾಡಲು ಸಿದ್ಧವಾಗಿದೆ.
ಬಾಲಿವುಡ್ ಮತ್ತು ಹಾಲಿವುಡ್ ಚಿತ್ರಗಳು ವಿಶ್ವದಾದ್ಯಂತ ತೆರೆಕಾಣೋದು ಸಾಮಾನ್ಯವಾದ ಸಂಗತಿ. ಆದರೇ ಇದೇ ಮೊದಲ ಬಾರಿಗೆ ಕನ್ನಡದ ಪೌರಾಣಿಕ ಚಿತ್ರವೊಂದು ವಿಶ್ವದೆಲ್ಲೆಡೆ ತೆರೆ ಕಾಣುತ್ತಿದೆ. ಸದ್ಯ ಯುಎಸ್, ಕೆನಡಾ ಸೇರಿದಂತೆ ವಿಶ್ವದ ಹಲವು ಕಡೆ ರಿಲೀಸ್ ಆಗಿದ್ದ ‘ಕುರುಕ್ಷೇತ್ರ’ ಈಗ ಗಲ್ಫ್ ದೇಶದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.
ಕುರುಕ್ಷೇತ್ರ ಚಿತ್ರ ದುಬೈ, ಅಬುದಾಬಿ, ಶಾರ್ಜಾ, ಅಜ್ಮಾನ್, ಅಲ್ ಐನ್, ಒಮಾನ್, ಬಹರೇನ್, ಫುಜೈರಾದಲ್ಲಿ ಒಟ್ಟು 21 ಚಿತ್ರಮಂದಿರಗಳಲ್ಲಿ ಕುರುಕ್ಷೇತ್ರ ಬಿಡುಗಡೆಯಾಗಲಿದ್ದು, ಜೊತೆಗೆ ಸೆಪ್ಟೆಂಬರ್ 5 ರಿಂದ 11ರ ವರೆಗೂ ಪ್ರತಿದಿನವೂ ಕುರುಕ್ಷೇತ್ರ ಚಿತ್ರ ಪ್ರದರ್ಶನ ಕಾಣಲಿದೆ. ಅಲ್ಲದೆ ಗಲ್ಫ್ ದೇಶದ ಪ್ರೇಕ್ಷಕರಿಗೆ ಈ ಪೌರಣಿಕ ಚಿತ್ರ ಹೊಸದಾಗಿದೆ .
ಅಲ್ಲದೆ ಕುರುಕ್ಷೇತ್ರ ಕನ್ನಡದ ಮೊದಲ ಪೌರಾಣಿಕ ಚಿತ್ರವಾಗಿದ್ದು, ಚಿತ್ರಕ್ಕೆ ನಾಗಣ್ಣ ಆಕ್ಷನ್ ಕಟ್ ಹೇಳಿದ್ದರು. ಇನ್ನೂ ಭಾರಿ ಮೊತ್ತದದಲ್ಲಿ ನಿರ್ಮಾಪಕ ಮುನಿರತ್ನ ಬಂಡವಾಳ ಹುಡಿದ್ದು, ನಟ ದರ್ಶನ್ ದುರ್ಯೋಧನನ ಪಾತ್ರದಲ್ಲಿ ಆರ್ಭಟಿಸಿದ್ದರೆ, ರವಿಚಂದ್ರನ್ ಕೃಷ್ಣ, ಅರ್ಜುನ್ ಸರ್ಜಾ ಕರ್ಣ, ಸೋನು ಸೂದ್ ಅರ್ಜುನ, ಸ್ನೇಹಾ ದ್ರೌಪದಿ, ಮೇಘನಾ ರಾಜ್ ಭಾನುಮತಿ ಹೀಗೆ ಹಲವಾರು ಕಲಾವಿದರು ತಮ್ಮ ಪಾತ್ರಗಳಿಗೆ ಜೀವ ತುಂಬಿಸಿದ್ದಾರೆ. ಈ ಹಿಂದೆ ಆಗಸ್ಟ್ 9 ರಂದು ದೇಶಾದ್ಯಂತ ಬಿಡುಗಡೆಯಾಗಿದ್ದ ಕುರುಕ್ಷೇತ್ರ ನೂರು ಕೋಟಿ ಗಳಿಸಿದೆ ಎಂದು ಸಹ ಹೇಳಲಾಗುತ್ತಿದೆ.
Comments are closed.