ಮನೋರಂಜನೆ

ಟಾಪ್‍ಲೆಸ್ ನಟಿಯನ್ನು ತಬ್ಬಿಕೊಂಡ ನಿರ್ದೇಶಕ ಪೂರಿ ಜಗನ್ನಾಥ್ ಪುತ್ರ

Pinterest LinkedIn Tumblr


ಹೈದರಾಬಾದ್: ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಅವರ ಪುತ್ರ ಆಕಾಶ್ ಪೂರಿ ನಟನೆಯ ‘ರೊಮ್ಯಾಂಟಿಕ್’ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಈ ಪೋಸ್ಟರ್ ನಲ್ಲಿ ಆಕಾಶ್ ಅವರು ಟಾಪ್‍ಲೆಸ್ ಆಗಿರುವ ನಟಿಯನ್ನು ತಬ್ಬಿಕೊಂಡಿದ್ದಾರೆ.

ರೊಮ್ಯಾಂಟಿಕ್ ಚಿತ್ರತಂಡ ಚಿತ್ರದ ಮೊದಲ ಪೋಸ್ಟರ್ ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದೆ. ಅಲ್ಲದೆ ಅದಕ್ಕೆ, “ರೊಮ್ಯಾನ್ಸ್ ಯಾವಾಗಲೂ ತೀವ್ರವಾಗಿರುತ್ತೆ. ರೊಮ್ಯಾಂಟಿಕ್ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ನಟ ಆಕಾಶ್ ಪೂರಿ ಹಾಗೂ ನಟಿ ಕೆತಿಕಾ ಶರ್ಮಾ ನಟಿಸುತ್ತಿದ್ದಾರೆ. ಪೂರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅನಿಲ್ ಪಡುರಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ” ಎಂದು ಟ್ವೀಟ್ ಮಾಡಿದೆ.

ಚಿತ್ರದ ಮೊದಲ ಪೋಸ್ಟರ್ ನೋಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ತಮ್ಮ ಟ್ವಿಟ್ಟರಿನಲ್ಲಿ, “ಈ ಚಿತ್ರ ಬ್ಲಾಕ್‍ಬಸ್ಟರ್ ಹಿಟ್ ಆಗಲಿದೆ. ಕಳೆದ ರಾತ್ರಿ ನಾನು ಒಂದು ಹಾಡನ್ನು ನೋಡಿದ್ದೇನೆ. ಆದರೆ ಅದು ಹೆಚ್ಚು ರೊಮ್ಯಾಂಟಿಕ್ ಹಾಡು ಆಗಿರಲಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

ಈ ಚಿತ್ರದ ಪೋಸ್ಟರ್ ನಲ್ಲಿ ನಟಿ ಕೆತಿಕಾ ಶರ್ಮಾ ಲುಕ್ ಅನ್ನು ಗೌಪ್ಯವಾಗಿ ಇಡಲಾಗಿದೆ. ಡಬ್‍ಸ್ಮಾಶ್‍ನಲ್ಲಿ ಸ್ಟಾರ್ ಆಗಿ ಇಂಟರ್ ನೆಟ್ ಸೆನ್ಸೆಷನ್ ಆಗಿದ್ದ ಕೆತಿಕಾ ರೊಮ್ಯಾಂಟಿಕ್ ಚಿತ್ರದ ಮೂಲಕ ಟಾಲಿವುಡ್‍ಗೆ ಎಂಟ್ರಿ ಕೊಡುತ್ತಿದ್ದಾರೆ. ಇತ್ತ ಆಕಾಶ್ ಪೂರಿ ‘ಮೆಹಬೂಬಾ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಚಿತ್ರದಲ್ಲಿ ಆಕಾಶ್ ಕಾಲೇಜು ವಿದ್ಯಾರ್ಥಿಯ ಪಾತ್ರ ಹಾಗೂ ಯೋಧನ ಪಾತ್ರದಲ್ಲಿ ನಟಿಸಿದ್ದರು.

Comments are closed.