ಮನೋರಂಜನೆ

ಅಕ್ಟೊಬರ್ 13 ರಿಂದ ಆರಂಭವಾಗಲಿರುವ ಬಿಗ್ ಬಾಸ್ ಸೀಸನ್-7ನಲ್ಲಿನ ಸ್ಪರ್ಧಿಗಳ ಪಟ್ಟಿ ನೋಡಿ….

Pinterest LinkedIn Tumblr

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ನಡೆಸಿಕೊಡಲಿರುವ ಬಿಗ್ ಬಾಸ್ ಸೀಸನ್ -7 ಇದೇ 13ರಿಂದ ಪ್ರಾರಂಭವಾಗಲಿದ್ದು, ಈಗಾಗಲೇ ಪ್ರೋಮೊ ಬಿಡುಗಡೆಯಾಗಿದೆ.

ಬಿಗ್ ಮನೆಗೆ ತೆರಳಲಿರುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯೊಂದು ಹೊರಬಿದ್ದಿದೆ. ರಾಧಾ ರಮಣ ಧಾರಾವಾಹಿ ಖ್ಯಾತಿಯ ಶ್ವೇತಾ, ಸರಿಗಮಪ ಶೋ ಖ್ಯಾತಿಯ ಹನುಮಂತಪ್ಪ, ಮಜಾ ಟಾಕೀಸ್ ನ ಕುರಿ ಪ್ರತಾಪ್, ಉದಯೋನ್ಮುಖ ನಟಿ ನೇಹಾ ಪಾಟೀಲ್, ಶಿವರಾಜ್ ಕೆ ಆರ್ ಪೇಟೆ, ನಟಿ ಅಮೂಲ್ಯ, ಖಾಸಗಿ ವಾಹಿನಿಯೊಂದರ ನಿರೂಪಕ ಚಂದನ್ ಶರ್ಮಾ, ಖ್ಯಾತ ಪತ್ರಕರ್ತ ರವಿ ಬೆಳಗೆರೆ, ಶ್ರೀನಗರ ಕಿಟ್ಟಿ ಮೊದಲಾದವರು ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಬಿಗ್ ಮನೆಗೆ ಎಂಟ್ರಿ ಕೊಡುವ ಸ್ಪರ್ಧಿಗಳಲ್ಲಿ ಹನುಮಂತಪ್ಪನನ್ನು ನೋಡಲು ಆತನ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಉತ್ತಮ ಶಾರೀರ, ನೇರ ಮಾತು, ಮುಗ್ಧತೆಯಿಂದ ಸರಿಗಮಪ ರಿಯಾಲಿಟಿ ಶೋ ಪ್ರೇಕ್ಷಕರ ಮನಗೆದ್ದಿದ್ದ ಹನುಮಂತಪ್ಪ, ಬಿಗ್ ಬಾಸ್ ಮನೆ ಪ್ರವೇಶಿಸುವುದು ಖಚಿತ ಎನ್ನಲಾಗುತ್ತಿದೆ.

Comments are closed.