ಮನೋರಂಜನೆ

ವಿಜಯ್ ದೇವರಕೊಂಡರ ರೌಡಿ ನೋಟಕ್ಕೆ ಲೇಡಿ ಅಭಿಮಾನಿಗಳು ಫುಲ್ ಫಿದಾ

Pinterest LinkedIn Tumblr


ಟಾಲಿವುಡ್‌ನ ಸ್ಟಾರ್ ವಿಜಯ್‌ ದೇವರಕೊಂಡ ಸದ್ಯ ‘ವರ್ಲ್ಡ್‌ ಫೇಮಸ್ ಲವರ್’ ಸಿನಿಮಾ ಚಿತ್ರೀಕರಣದಲ್ಲಿ ಸಿಕ್ಕಾಪಟ್ಟೆ ಬ್ಯುಸಿ. ಈ ನಡುವೆ ಸ್ವಲ್ಪ ಸಮಯ ಹೊಂದಿಸಿಕೊಂಡು, ಫೋಟೋಶೂಟ್‌ನಲ್ಲಿ ಭಾಗಿಯಾಗಿದ್ದಾರೆ. ಖಡಕ್ ಲುಕ್‌ ಕೊಟ್ಟು ಪೋಸ್ ನೀಡಿರುವ ವಿಜಯ್ ಫೋಟೋಗೆ ಈಗಾಗ್ಲೇ ಲೈಕ್‌ಗಳ ಸುರಿಮಳೆ ಹರಿದು ಬರುತ್ತಿದ್ದು, ರೌಡಿ ನೋಟಕ್ಕೆ ಲೇಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ಇದರೊಂದಿಗೆ ಮತ್ತೊಂದು ಫೋಟೋ ಶೇರ್ ಮಾಡಿರುವ ವಿಜಯ್, ಕಿಲ್ಲರ್ ಲುಕ್ ನೀಡಿದ್ದಾರೆ. ಈ ಫೋಟೋ ಈಗಾಗ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಜಯ್ ಹೊಸ ಸ್ಟೈಲಿಗೆ ಅಭಿಮಾನಿಗಳು ಮಾರು ಹೋಗಿದ್ದಾರೆ.

ಅಂದ್ಹಾಗೇ 2011ರಲ್ಲಿ ‘ನುವ್ವಿಲ’ ಸಿನಿಮಾದ ಮೂಲಕ ಟಾಲಿವುಡ್‌ಗೆ ಪದಾರ್ಪಣೆ ಮಾಡಿದ ವಿಜಯ್, ಮುಂದೆ ‘ಪೆಳ್ಳಿ ಚೂಪುಲು’ ಚಿತ್ರದ ಮೂಲಕ ಹೆಸರು ಮಾಡಿದ್ರು. ಆದ್ರೆ ವಿಜಯ್‌ಗೆ ಹೆಚ್ಚು ನೇಮು ಫೇಮು ತಂದುಕೊಟ್ಟಿದ್ದು 2017ರಲ್ಲಿ ಬಿಡುಗಡೆಯಾದ ‘ಅರ್ಜುನ್ ರೆಡ್ಡಿ’. ಈ ಚಿತ್ರದಲ್ಲಿ ರಫ್ ಅಂಡ್ ಟಫ್ ಕ್ಯಾರೆಕ್ಟರ್‌ನಲ್ಲಿ ಜನಮನ ಗೆದ್ದು, ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ರು ವಿಜಯ್. ಅದ್ರಲ್ಲೂ ಪ್ರೀತಿಸುವವರ ಪಾಲಿಗೆ ರೋಲ್‌ಮಾಡೆಲ್ ಆಗಿ, ಲವ್ ಮಾಡಿದ್ರೆ ಅರ್ಜುನ್ ರೆಡ್ಡಿ ಥರ ಇರ್ಬೇಕು ಅನ್ನುವಷ್ಟರ ಮಟ್ಟಿಗೆ ಈ ಸಿನಿಮಾ ಟ್ರೆಂಡ್ ಕ್ರಿಯೇಟ್ ಮಾಡಿತ್ತು.

ಆ ನಂತರ ವಿಜಯ್ ಮತ್ತೆ ಸುದ್ದಿಯಾಗಿದ್ದು 2018ರಲ್ಲಿ ಬಿಡುಗಡೆಯಾದ ಬ್ಲಾಕ್‌ಬಸ್ಟರ್‌ ಹಿಟ್ ‘ಗೀತಾ ಗೋವಿಂದಂ’ ಚಿತ್ರದಿಂದ. ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಆದ ‘ಗೀತಾ ಗೋವಿಂದಂ’ ಬಾಕ್ಸ್‌ಆಫೀಸ್‌ನಲ್ಲಿ ದಾಖಲೆ ಬರೆಯಿತು. ಈ ಚಿತ್ರದಲ್ಲಿ ನಟಿಸಿದ್ದ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ನಡುವೆ ಕುಚ್ ಕುಚ್ ಇರ್ಬಹುದು ಅನ್ನೋ ಗಾಸಿಪ್ ಕೂಡ ಕೇಳಿ ಬಂತು. ಮುಂದೆ ಈ ಇಬ್ಬರು ‘ಡಿಯರ್ ಕಾಮ್ರೇಡ್‌’ನಲ್ಲೂ ಜೊತೆಯಾಗಿ ನಟಿಸಿದಾಗ ಈ ಗಾಳಿ ಸುದ್ದಿಗೆ ಮತ್ತೆ ರೆಕ್ಕೆ ಪುಕ್ಕಗಳು ಬಂದ್ವು. ಆದ್ರೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮಾತ್ರ “ನಾವು ಜಸ್ಟ್ ಫ್ರೆಂಡ್ಸ್” ಅಂತಾ ಉತ್ತರ ನೀಡಿ ಸುಮ್ಮನಾಗಿದ್ದಾರೆ..

ಇದೆಲ್ಲಾ ಏನೇ ಇರಲಿ,ಸದ್ಯ ವಿಜಯ್ ದೇವರಕೊಂಡ ‘ವರ್ಲ್ಡ್‌ ಫೇಮಸ್ ಲವರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕ್ರಾಂತಿ ಮಾಧವ್ ನಿರ್ದೇಶನದ ಈ ಸಿನಿಮಾದಲ್ಲಿ ವಿಜಯ್‌ ದೇವರಕೊಂಡ, ರಾಶಿ ಖನ್ನಾ, ಐಶ್ವರ್ಯ ರಾಜೇಶ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಇನ್ನು 2020ರಲ್ಲಿ ‘ವರ್ಲ್ಡ್‌ ಫೇಮಸ್ ಲವರ್’ ಬಿಡುಗಡೆಯಾಗಲಿದ್ದು, ವಿಜಯ್ ಮೋಡಿ ಮಾಡೋದಕ್ಕೆ ರೆಡಿಯಾಗಿದ್ದಾರೆ.

Comments are closed.