ಬೆಂಗಳೂರು: ಎಷ್ಟೋ ಕಲಾವಿದರು ಒಂದೆರಡು ಸೀರಿಯಲ್ ಮತ್ತು ಸಿನಿಮಾಗಳಲ್ಲಿ ಅಭಿನಯಿಸಿ ನಂತರ ಅವಕಾಶಗಳಿಲ್ಲದೆ ಅಲೆದಾಡುತ್ತಿರುತ್ತಾರೆ. ಕೊನೆಗೆ ತಮ್ಮ ಜೀವನಕ್ಕಾಗಿ ಬೇರೆ ಕೆಲಸವನ್ನು ಮಾಡುತ್ತಿರುತ್ತಾರೆ. ಇದೀಗ ಇವರ ಸಾಲಿಗೆ ಕುಂದಾಪುರ ಮೂಲದ ಶೈನ್ ಶೆಟ್ಟಿ ಸೇರ್ಪಡೆಗೊಂಡಿದ್ದಾರೆ.
ಹೌದು. ಖಾಸಗಿ ಚಾನೆಲ್ ನಲ್ಲಿ ಪ್ರಸಾರವಾಗುವ ‘ಲಕ್ಷ್ಮಿ ಬಾರಮ್ಮ’ ಧಾರವಾಹಿಯಲ್ಲಿ ಶೈನ್ ಶೆಟ್ಟಿ ಅಭಿನಯಿಸಿದ್ದರು. ಸುಮಾರು 2 ವರ್ಷಗಳ ಸೀರಿಯಲ್ ನಲ್ಲಿ ನಟಿಸಿದ್ದರ ಪರಿಣಾಮ ಶೈನ್, ಚಂದು ಎಂದೇ ಪ್ರಖ್ಯಾತರಾಗಿದ್ದರು. ಧಾರಾವಾಹಿಯಲ್ಲಿ ಶೈನ್, ಚಂದನ್ ಆಗಿ ಕಾಣಿಸಿಕೊಂಡಿದ್ದರು. ನಂತರ ಸಿನಿಮಾದಲ್ಲಿ ಅಭಿನಯಿಸುವ ಆಸೆಯಿಂದ ಧಾರಾವಾಹಿಯಿಂದ ಹೊರಬಂದಿದ್ದರು. ಆದರೆ ಸಿನಿಮಾ ಕೈ ಹಿಡಿಯಲೇ ಇಲ್ಲ. ನಟಿಸಿಲು ಅವಕಾಶಗಳೇ ಒದಗಿ ಬಂದಿರಲಿಲ್ಲ.
ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗಲಿಲ್ಲ ಎಂದು ಕೊರಗಿಕೊಂಡು ಸುಮ್ಮನೆ ಕೂರದ ಶೈನ್, ರಸ್ತೆ ಬದಿಯಲ್ಲಿ ದೋಸೆ ಮಾರಾಟ ಮಾಡಿ ಜೀವನ ನಡೆಸಲು ಆರಂಭಿಸಿದ್ದರು. ಈ ಬಗ್ಗೆ ಸ್ವತಃ ಶೈನ್ ಶೆಟ್ಟಿಯವರೇ ಹೇಳಿಕೊಂಡಿದ್ದಾರೆ. “ಧಾರಾವಾಹಿ ಮಾಡಿದ್ದರಿಂದ ಅನೇಕರಿಗೆ ಪರಿಚಯವಿದ್ದೆ. ಆದರೆ ಸೀರಿಯಲ್‍ನಿಂದ ಹೊರ ಬಂದ ನಂತರ ನನಗೆ ಯಾವುದೇ ಅವಕಾಶವೂ ಸಿಗಲಿಲ್ಲ. ಆಗ ಧೈರ್ಯಮಾಡಿ ಬೆಂಗಳೂರಿನ ಬನಶಂಕರಿ ಬಳಿ ಫುಡ್ ಟ್ರಕ್ ಮಾಡಿ ದೋಸೆ ಮಾರಲು ಪ್ರಾರಂಭಿಸಿದೆ. ದೋಸೆ ಮಾಡುವ ಸಮಯದಲ್ಲಿ ಅನೇಕರು ಬಂದು ನೀವು ಸೀರಿಯಲ್ ನಲ್ಲಿ ನಟಿಸುತ್ತಿದ್ರಾ ಎಂದು ಕೇಳಿ ನಂತರ ಅದು ನೀವಲ್ಲ ಬಿಡಿ ಎಂದು ಸುಮ್ಮನಾಗುತ್ತಿದ್ದರು. ಇದರಿಂದ ನನಗೆ ಖುಷಿಯಾಗುತ್ತಿತ್ತು” ಎಂದು ಹೇಳಿದ್ದಾರೆ. ಸದ್ಯಕ್ಕೆ ಶೈನ್ ಶೆಟ್ಟಿ ಬಿಗ್‍ಬಾಸ್ ಮನೆಗೆ 17 ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.
Comments are closed.