ಹೈದರಾಬಾದ್: ಟಾಲಿವುಡ್ ನಟಿ ಹನ್ಸಿಕಾ ಮೋಟ್ವಾನಿ ದೀಪಾವಳಿ ಹಬ್ಬಕ್ಕೆ ಬರೋಬ್ಬರಿ 11 ಕೋಟಿ ಮೌಲ್ಯದ ಕಾರನ್ನು ಗಿಫ್ಟ್ ಆಗಿ ಪಡೆದಿದ್ದಾರೆ.
ನಟಿ ಹನ್ಸಿಕಾ ಬಹುದಿನಗಳಿಂದ ರೋಲ್ಸ್ ರಾಯ್ಸ್ ಫ್ಯಾಂಟಮ್ 8 ಸೀರಿಸ್ ಕಾರನ್ನು ಖರೀದಿಸಬೇಕೆಂದು ಕನಸು ಕಂಡಿದ್ದರು. ಹೀಗಾಗಿ ಖ್ಯಾತ ಚರ್ಮರೋಗ ವೈದ್ಯೆಯಾಗಿರುವ ಹನ್ಸಿಕಾ ತಾಯಿ ಮೋನಾ ಮೋಟ್ವಾನಿ ತಮ್ಮ ಮಗಳಿಗೆ ಈ ಕಾರು ಗಿಫ್ಟ್ ನೀಡುವ ಮೂಲಕ ಅವರ ಆಸೆಯನ್ನು ನೆರವೇರಿಸಿದ್ದಾರೆ.
ತನ್ನ ತಾಯಿ ಉಡುಗೊರೆಯಾಗಿ ನೀಡಿದ ದುಬಾರಿ ಬೆಲೆಯ ಕಾರನ್ನು ನೋಡಿ ಹನ್ಸಿಕಾ ತುಂಬಾ ಖುಷಿ ಆಗಿದ್ದಾರೆ. ಮೋನಾ ಮೋಟ್ವಾನಿ ಅವರು ಖರೀದಿಸಿರುವ ರೋಲ್ಸ್ ರಾಯ್ಸ್ ಫ್ಯಾಂಟಮ್‍ನ ಬೆಲೆ ಸುಮಾರು 11 ಕೋಟಿ ಎಂದು ಹೇಳಲಾಗಿದೆ.
ಈ ರೋಲ್ಸ್ ರಾಯ್ಸ್ ಫ್ಯಾಂಟಮ್ 8 ಸೀರಿಸ್ ಕಾರು ಹಲವು ವಿಶೇಷತೆಗಳನ್ನು ಹೊಂದಿದೆ. ಬೆಲೆಗೆ ತಕ್ಕಂತೆ ತಂತ್ರಜ್ಞಾನ ಸೌಲಭ್ಯ ಪ್ರೇರಿತ ಫೀಚರ್ಸ್ ಗಳನ್ನು ಈ ಕಾರಿನಲ್ಲಿ ಜೋಡಣೆ ಮಾಡಲಾಗಿದೆ. ಕಾರಿನ ಪ್ರತಿ ಭಾಗವು ಕೂಡ ಹ್ಯಾಂಡ್ ಮೆಡ್ ಕೌಶಲ್ಯತೆಗಳೊಂದಿಗೆ ಸಿದ್ಧಗೊಂಡಿದೆ.
ಹನ್ಸಿಕಾ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದಲ್ಲೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು ಚಿತ್ರಗಳಲ್ಲಿ ಹನ್ಸಿಕಾ ಹೆಚ್ಚು ನಟಿಸಿದ್ದಾರೆ. ಅಲ್ಲದೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಟನೆಯ ‘ಬಿಂದಾಸ್’ ಚಿತ್ರದಲ್ಲಿ ಹನ್ಸಿಕಾ ನಾಯಕಿಯಾಗಿ ನಟಿಸಿದ್ದಾರೆ.
Comments are closed.