ಜನಸೇನಾ ಪಾರ್ಟಿ ಮೂಲಕ ರಾಜಕೀಯಕ್ಕೆ ಎಂಟ್ರಿ ನೀಡಿದ್ದ ಪವನ್ ಕಲ್ಯಾಣ್, ಆಂಧ್ರ ಪ್ರದೇಶ-ತೆಲಂಗಾಣ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ್ದರು. ಆದರೆ, ಅಂದುಕೊಂಡಮಟ್ಟಕ್ಕೆ ರಾಜಕೀಯ ಕೈಹಿಡಿಯಲಿಲ್ಲ. ಇತ್ತ ಸಿನಿಮಾರಂಗದಿಂದಲೂ ಅವರು ಕೆಲ ಕಾಲ ದೂರವಾಗಿದ್ದರು. ಈಗ ಅವರು ಚಿತ್ರರಂಗಕ್ಕೆ ಮರಳುವ ಸೂಚನೆ ಸಿಕ್ಕಿದೆ. ಆದರೆ, ಸಂಭಾವನೆ ವಿಚಾರದಲ್ಲಿ ದೊಡ್ಡ ಬ್ರೇಕಿಂಗ್ ನ್ಯೂಸ್ ಅನ್ನೇ ಪವನ್ ಕಲ್ಯಾಣ್ ನೀಡಿದ್ಧಾರೆ!
‘ಅಜ್ಞಾತವಾಸಿ’ ನಂತರ ಅವರ ಯಾವ ಸಿನಿಮಾವೂ ಬಂದಿಲ್ಲ. ಬರೋಬ್ಬರಿ 2 ವರ್ಷಗಳಿಂದ ಅವರನ್ನು ತೆರೆಮೇಲೆ ಅಭಿಮಾನಿಗಳು ಮಿಸ್ ಮಾಡಿಕೊಂಡಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಡಿಸೆಂಬರ್‌ನಿಂದ ಹೊಸ ಸಿನಿಮಾಗೆ ಅವರು ಚಾಲನೆ ನೀಡಲಿದ್ದು, ಕ್ರಿಷ್ ಆ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ. ಅಂದಹಾಗೆ, ಈ ಸಿನಿಮಾದಲ್ಲಿ ನಟಿಸುವುದಕ್ಕಾಗಿ ಪವನ್ 50 ಕೋಟಿ ರೂ. ಸಂಭಾವನೆ ಕೇಳಿದ್ದಾರಂತೆ!! ಈ ಹಿಂದೆ ‘ಖುಷಿ’ ಚಿತ್ರವನ್ನು ನಿರ್ಮಾಣ ಮಾಡಿದ್ದ ಎ.ಎಂ. ರತ್ನಂ ಬಂಡವಾಳ ಹೂಡುತ್ತಿದ್ದಾರೆ.
ಅಷ್ಟಕ್ಕೂ ಇಷ್ಟೊಂದು ದೊಡ್ಡ ಮೊತ್ತವನ್ನು ಪವನ್ ಯಾಕೆ ಕೇಳಿದರು? ಅದಕ್ಕೂ ಕಾರಣವಿದೆ. ಎರಡು ವರ್ಷಗಳಿಂದ ಅವರು ಸಿನಿಮಾಗಳಿಂದ ದೂರ ಇದ್ದರು. ಅಲ್ಲದೆ, ಜನಸೇನಾ ಪಾರ್ಟಿ ನಡೆಸಲು ಹಣದ ಅವಶ್ಯಕತೆ ಇರುತ್ತದೆ. ಇದನ್ನೆಲ್ಲ ಮನಗಂಡು ಅವರು ಇಷ್ಟೊಂದು ದೊಡ್ಡ ಮೊತ್ತಕ್ಕೆ ಡಿಮಾಂಡ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ನಿರ್ಮಾಪಕರ ಕಡೆಯಿಂದ ಇದಕ್ಕೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ!
ಪವನ್ ಕಲ್ಯಾಣ್ ಭೇಟಿ ಮಾಡಿದ ಎಚ್ಡಿಕೆ
ನಟ ಮಹೇಶ್ ಬಾಬು ಕೂಡ ‘ಸರಿಲೇರು ನೀಕೆವ್ವರು’ ಚಿತ್ರಕ್ಕೂ 50 ಕೋಟಿ ರೂ. ಸಂಭಾವನೆಯನ್ನು ಕೇಳಿದ್ದರು ಎನ್ನಲಾಗಿದೆ. ಆದರೆ, ಅವರು ಕೂಡ ಸಿನಿಮಾದ ಪಾಲುದಾರರಾಗಿದ್ದು, ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕುಗಳು ಮತ್ತು ಡಿಜಿಟಲ್ ಹಕ್ಕುಗಳನ್ನು ಅವರಿಗೆ ನೀಡಲು ನಿರ್ಧರಿಸಲಾಗಿದೆಯಂತೆ. ಅದರಿಂದ ಬರುವ ಹಣವೇ 50 ಕೋಟಿ ರೂ. ದಾಟಲಿದೆ ಎನ್ನಲಾಗಿದೆ. ಇದೇ ಸೂತ್ರವನ್ನು ಪವನ್ ಕಲ್ಯಾಣ್ ವಿಷಯದಲ್ಲೂ ನಿರ್ಮಾಪಕರು ತೆಗೆದುಕೊಳ್ಳಲಿದ್ದಾರೆ ಎಂಬ ಮಾತಿದೆ.
Comments are closed.