‘ನಟ ಸಲ್ಮಾನ್ ಖಾನ್ ಅಭಿನಯದ ‘ದಬಾಂಗ್ 3’ ಚಿತ್ರದ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಡಿ.20ರಂದು ಅದ್ದೂರಿಯಾಗಿ ಹಿಂದಿ, ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ. ಇದರಲ್ಲಿ ಸಲ್ಮಾನ್-ಸುದೀಪ್ ನಡುವಿನ ದೃಶ್ಯಗಳು ಹೇಗಿರಲಿವೆ ಎಂಬುದಕ್ಕೆ ಈಗಾಗಲೇ ಟ್ರೇಲರ್‌ನಲ್ಲಿ ಸಾಕ್ಷಿ ಸಿಕ್ಕಿದೆ. ಈಗ ಮೇಕಿಂಗ್ ಸ್ಟಿಲ್ಸ್ ರಿಲೀಸ್ ಆಗಿದ್ದು, ಅಭಿಮಾನಿಗಳಿಗೆ ಇಷ್ಟವಾಗಿವೆ.
‘ದಬಾಂಗ್ 3’ ಚಿತ್ರದಲ್ಲಿ ಬಲ್ಲಿ ಸಿಂಗ್ ಎಂಬ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಂಡಿದ್ದು, ಸಖತ್ ರಗಡ್ ಆಗಿರಲಿದೆ ಎಂಬುದು ಟ್ರೇಲರ್‌ನಲ್ಲೇ ಗೊತ್ತಾಗಿದೆ. ಚುಲ್‌ಬುಲ್ ಪಾಂಡೆ ಸಲ್ಮಾನ್‌ಗೆ ಟಕ್ಕರ್ ಕೊಡುವಂತಹ ಖಡಕ್ ಪಾತ್ರ ಸುದೀಪ್ ಅವರದ್ದಾಗಿದೆ. ಈಗ ಅವರಿಬ್ಬರು ಸೆಟ್‌ನಲ್ಲಿ ಕಳೆದಂತಹ ಕ್ಷಣಗಳ ಮೇಕಿಂಗ್ ಸ್ಟಿಲ್ಸ್ ಇಲ್ಲಿವೆ.
ಪ್ರಭುದೇವ ನಿರ್ದೇಶನ ಮಾಡಿರುವ ಈ ಸಿನಿಮಾಗೆ ಸಲ್ಮಾನ್ ಖಾನ್ ಬಂಡವಾಳ ಹೂಡಿದ್ದಾರೆ. ಈಗಾಗಲೇ 4 ಭಾಷೆಗಳಲ್ಲಿ ಚಿತ್ರದ ಟ್ರೇಲರ್ ರಿಲೀಸ್ ಆಗಿ, ಜನರಿಗೆ ಇಷ್ಟವಾಗಿದೆ. ಅದರಲ್ಲೂ ಕನ್ನಡ ವರ್ಷನ್‌ಗೆ ಸ್ವತಃ ಸಲ್ಮಾನ್ ಕನ್ನಡದಲ್ಲೇ ಡಬ್ ಮಾಡಿದ್ದು ವಿಶೇಷ. ಕನ್ನಡದ ಡೈಲಾಗ್‌ಗಳನ್ನು ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ನಿರ್ದೇಶಕ ಗುರುದತ್ ಗಾಣಿಗ ಬರೆದಿದ್ದರೆ, ‘ರಂಗಿತರಂಗ’ ಖ್ಯಾತಿಯ ಅನೂಪ್ ಭಂಡಾರಿ ಹಾಡುಗಳಿಗೆ ಕನ್ನಡ ಸಾಹಿತ್ಯ ಬರೆದಿದ್ಧಾರೆ. ಸಾಜಿದ್-ವಾಜಿದ್ ಸಂಗೀತ ನೀಡಿದ್ದಾರೆ. ಸಲ್ಲುಗೆ ನಾಯಕಿಯರಾಗಿ ಸೋನಾಕ್ಷಿ ಸಿನ್ಹಾ, ಸಾಯಿ ಮಂಜ್ರೇಕರ್ ನಟಿಸಿದ್ದಾರೆ.
Comments are closed.