ಮನೋರಂಜನೆ

‘ಹರೇ ರಾಮ ಹರೇ ಕೃಷ್ಣ’ ಹೆಸರಿನ ಮೇಲುಡುಗೆ ತೊಟ್ಟ ಬಾಲಿವುಡ್ ನಟಿ ವಾಣಿ ಕಪೂರ್

Pinterest LinkedIn Tumblr


ಮುಂಬೈ: ಬಾಲಿವುಡ್ ಬೇಫಿಕ್ರೆ ಬೆಡಗಿ ವಾಣಿ ಕಪೂರ್ ಧರಿಸಿರುವ ಮೇಲುಡುಗೆ ವಿವಾದಕ್ಕೆ ಕಾರಣವಾಗಿದೆ. ವಾಣಿ ತೊಟ್ಟಿರುವ ಟಾಪ್ ಮೇಲೆ ‘ಹರೇ ರಾಮ ಹರೇ ಕೃಷ್ಣ’ ಎಂಬ ಪದಗಳಿವೆ. ಈ ರೀತಿಯ ಡ್ರೆಸ್ ತೊಡುವುದು ಎಷ್ಟು ಸರಿ ಎಂದು ಜನರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರೀತಿ ಬಟ್ಟೆಗಳ ಮೇಲೆ ‘ಹರೇ ರಾಮ ಹರೇ ಕೃಷ್ಣ’ ಮುದ್ರಿಸಿರೋದು ತಪ್ಪು. ಇದರಿಂದ ಜನರ ಧಾರ್ಮಿಕ ನಂಬಿಕೆ ಮತ್ತು ಭಾವನೆಗಳಿಗೆ ನೋವು ಆಗಲಿದೆ. ಹಾಗಾಗಿ ಚಿತ್ರರಂಗದಿಂದ ವಾಣಿ ಕಪೂರ ಅವರನ್ನು ಬಹಿಷ್ಕರಿಸಬೇಕು. ಇಲ್ಲವೇ ನಟಿಯ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಜನರು ಒತ್ತಾಯಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ವಾಣಿ ಕಪೂರ ಇನ್‍ಸ್ಟಾಗ್ರಾಂನಿಂದ ಫೋಟೋ ಡಿಲಿಟ್ ಮಾಡಿಕೊಂಡಿದ್ದಾರೆ. ಫೋಟೋ ತೆಗೆದ ಬಳಿಕ ವಾಣಿ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ.

2013ರಲ್ಲಿ ತೆರೆಕಂಡ ಶುದ್ಧ ದೇಸಿ ರೊಮ್ಯಾನ್ಸ್ ಚಿತ್ರದ ಮೂಲಕ ವಾಣಿ ಕಪೂರ್ ಬಾಲಿವುಡ್ ಪಾದಾರ್ಪಣೆ ಮಾಡಿದರು. ರಣ್‍ವೀರ್ ಸಿಂಗ್ ಜೊತೆಗೆ ನಟಿಸಿದ್ದ ಬೇಫಿಕ್ರೆ ಚಿತ್ರದಲ್ಲಿ ವಾಣಿ ಕಪೂರ್ ತಮ್ಮ ಚುಂಬನದ ದೃಶ್ಯಗಳಿಂದಲೇ ಸುದ್ದಿಯಾಗಿದ್ದರು. ಇತ್ತೀಚೆಗೆ ತೆರೆಕಂಡು ಗಲ್ಲಾಪೆಟ್ಟಿಗೆ ದೋಚಿರುವ ‘ವಾರ್’ನಲ್ಲಿಯೂ ವಾಣಿ ಕಪೂರ್ ನಟಿಸಿದ್ದರು.

Comments are closed.