ಮನೋರಂಜನೆ

“ಹಾವೂ ಸಾಯ್ಬಾರ್ದು..ಕೋಲೂ ಮುರೀಬಾರ್ದು’’ ಸುಪ್ರೀಂ ತೀರ್ಪಿಗೆ ನಟ ಪ್ರಕಾಶ್ ರೈ

Pinterest LinkedIn Tumblr


ಬೆಂಗಳೂರು: ಅನರ್ಹ ಶಾಸಕರ ಕುರಿತಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಹಲವರು ಸ್ವಾಗತಿಸಿದರೆ ಸಾಮಾಜಿಕ ಜಾಲತಾಣಗಲ್ಲಿ ಭಿನ್ನವಾದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಅದ್ರಲ್ಲೂ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ತೀರ್ಪನ್ನು ವಿಮರ್ಶಿಸಿದ್ದು ಹಾಲು ಸಾಯಬಾರದು ಕೋಲು ಮುರಿಯಬಾರದು ಎಂಬ ಅರ್ಥದಲ್ಲಿ ನ್ಯಾಯಾಲಯ ತೀರ್ಪು ನೀಡಿದೆ ಎಂದ್ದಾರೆ.

ಸುಪ್ರೀಂ ತೀರ್ಪು ಬೆನ್ನಲ್ಲೇ ಟ್ವೀಟ್ ಮಾಡಿದ ಪ್ರಕಾಶ್ ರಾಜ್ ಜನರು ಅನರ್ಹ ಶಾಸಕರಿಗೆ ತಕ್ಕ ಪಾಠ ಕಲಿಸಬೇಕು ಎಂದಿದ್ದಾರೆ. “ಹಾವೂ ಸಾಯ್ಬಾರ್ದು..ಕೋಲೂ ಮುರೀಬಾರ್ದು “ಎನ್ನುವ ತೀರ್ಪಿನ ಆಶೀರ್ವಾದ ಪಡಕೊಂಡು “ತ್ರಪ್ತ”ಶಾಸಕರು ..ಕೊಂಕಣ ಸುತ್ಕೊಂಡು ಮ್ಯಲಾರಕ್ ಬಂದವೆ ..ಓಳ್ಳೇದೆ ಆಯ್ತು ..ಸ್ವಾಭಿಮಾನಿ ಕನ್ನಡಿಗರೆ .. ಇವುಗಳು ..ಜನ್ಮ ಜನ್ಮಕ್ಕೂ ಮರೀದೆ ಇರೋ ತೀರ್ಪು ಕೊಡೋದು ಈಗ ನಮ್ಮ ಜವಾಬ್ದಾರಿ ಎಂದು #justAsking ಹ್ಯಾಶ್ ಟ್ಯಾಗ್ ಜೊತೆಗೆ ಟ್ವೀಟ್ ಮಾಡಿದ್ದಾರೆ.

ಪ್ರಕಾಶ್ ರಾಜ್ ಟ್ವೀಟ್‌ಗೆ ಹಲವರು ಕಾಮೆಂಟ್ ಮಾಡಿದ್ದಾರೆ. ಕೆಲವರು ರೈ ಅಭಿಪ್ರಾಯವನ್ನು ಬೆಂಬಲಿಸಿ ಕಾಮೆಂಟ್‌ಗಳನ್ನು ಹಾಕಿದರೆ ಮತ್ತೆ ಕೆಲವರು ವಿರೋಧಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅನರ್ಹ ಶಾಸಕರ ಬಗ್ಗೆ ಮಾತನಾಡುವ ಪ್ರಕಾಶ್ ರೈಯನ್ನು ಕೂಡಾ ಜನರು ಹೀನಾಯವಾಗಿ ಸೋಲಿಸಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

Comments are closed.