ಮುಂಬೈ: ಬಾಲಿವುಡ್ ಭಾಯ್ಜಾನ್ ಸಲ್ಮಾನ್ ಖಾನ್ ತಂದೆ ಆಗಲಿದ್ದಾರೆ ಅನ್ನೋ ಸುಳಿವನ್ನು ನಟಿ ರಾಣಿ ಮುಖರ್ಜಿ ನೀಡಿದ್ದಾರೆ.
ಖಾಸಗಿ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ನಡೆಸಿಕೊಡುವ ಕಾರ್ಯಕ್ರಮಕ್ಕೆ ರಾಣಿ ಮುಖರ್ಜಿ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ವೇದಿಕೆಯ ಮೇಲೆ ಆಗಮಿಸುತ್ತಿದ್ದಂತೆ ಮುನಿಸಿಕೊಂಡ ರಾಣಿ ಮುಖರ್ಜಿ ನನಗೆ ನೀಡಿದ ಮಾತನ್ನು ನೀವು ಪೂರ್ಣಗೊಳಿಸಿಲ್ಲ ಎಂದರು. ನಾನು ಯಾವ ಮಾತನ್ನು ಪೂರ್ಣಗೊಳಿಸಿಲ್ಲ ಎಂದು ಸಲ್ಮಾನ್ ಕೇಳಿದಾಗ, ಸ್ಕ್ರೀನ್ ಮೇಲೆ ವಿಡಿಯೋ ಪ್ಲೇ ಆಯ್ತು.
ಸೀಸನ್ 11ರ ಕಾರ್ಯಕ್ರಮದಲ್ಲಿಯೂ ರಾಣಿ ಮುಖರ್ಜಿ ಅದೇ ವೇದಿಕೆಗೆ ಅತಿಥಿಯಾಗಿ ಆಗಮಿಸಿದ್ದರು. ಅಂದು ರಾಣಿ ಮುಖರ್ಜಿ ಮದುವೆ ಆಗದಿದ್ದರೂ ಪರವಾಗಿಲ್ಲ. ಮಕ್ಕಳನ್ನಾದರು ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದರು. ರಾಣಿ ಮಾತಿಗೆ ತಲೆ ಆಡಿಸಿದ್ದ ಸಲ್ಮಾನ್ ಒಪ್ಪಿಗೆ ಸೂಚಿಸಿದ್ದರು. ಈಗ ರಾಣಿ ಮುಖರ್ಜಿ ಮತ್ತೆ ಅದೇ ಪ್ರಶ್ನೆಯನ್ನು ಕೇಳಿ ಸಲ್ಮಾನ್ ಖಾನ್ ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದರು.
ಇಷ್ಟು ಬೇಗ ಮಕ್ಕಳು ಬರಲ್ಲ ಎಂದು ಹೇಳಿ ಸಲ್ಮಾನ್ ಜಾರಿಕೊಂಡರು. ಇಷ್ಟಕ್ಕೆ ಸುಮ್ಮನಾಗದ ರಾಣಿ ಮುಖರ್ಜಿ ಹಾಗಾದ್ರೆ 18 ತಿಂಗಳಲ್ಲಿ ಬರಬಹುದಾ ಎಂದು ನಕ್ಕರು. ಕೊನೆಗೆ ರಾಣಿ ಮುಖರ್ಜಿ ಸುಳ್ಳು ಹೇಳಲ್ಲ ಎಂದು ನನಗೆ ಗೊತ್ತಿದೆ ಎಂದು ತಂದೆಯಾಗುವ ಸುಳಿವನ್ನು ಸಲ್ಮಾನ್ ಖಾನ್ ರಿವೀಲ್ ಮಾಡಿದರು.
Comments are closed.