ಮನೋರಂಜನೆ

16ನೇ ವಯಸ್ಸಿನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಬಿಗ್ ಬಾಸ್ ಸ್ಪರ್ಧಿ ಕಿಶನ್ !

Pinterest LinkedIn Tumblr

ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿ ಕಿಶನ್ ವ್ಯಕ್ತಿಯೊಬ್ಬರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂಬ ರಹಸ್ಯವನ್ನು ಕಿರುತೆರೆ ನಟಿ ಪ್ರಿಯಾಂಕಾ ಬಿಚ್ಚಿಟ್ಟಿದ್ದಾರೆ.

ಕಿಶನ್ ವ್ಯಕ್ತಿಯಿಂದ 16ನೇ ವಯಸ್ಸಿನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರು. ಸೋಮವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಟಾಸ್ಕ್‍ವೊಂದನ್ನು ನೀಡಿದ್ದರು. ಈ ಟಾಸ್ಕ್‍ನಲ್ಲಿ ಜೋಡಿಗಳಗಾಗಿ ಸ್ಪರ್ಧಿಗಳು ಭಾಗವಹಿಸಿದ್ದರು. ಅಲ್ಲದೆ ಬಿಗ್ ಬಾಸ್ ತಮ್ಮ ಜೋಡಿಯ ವೈಯಕ್ತಿಕ ಜೀವನದ ಬಗ್ಗೆ ಮನೆ ಮಂದಿಗೆಲ್ಲಾ ತಿಳಿಸಬೇಕು ಎಂದು ಹೇಳಿದ್ದರು. ಆಗ ಕಿಶನ್‍ಗೆ ಜೋಡಿಯಾಗಿದ್ದ ಪ್ರಿಯಾಂಕಾ ಮನೆ ಮಂದಿ ಮುಂದೆ ರಹಸ್ಯ ಬಿಚ್ಚಿಟ್ಟಿದ್ದಾರೆ.

ಕಿಶನ್‍ಗೆ ಡ್ಯಾನ್ಸರ್ ಆಗಬೇಕು ಎಂಬ ಆಸೆ ಯಾವತ್ತೂ ಇರಲಿಲ್ಲ. ಆದರೆ ಅವರು ಡ್ಯಾನ್ಸರ್ ಆಗಬೇಕು ಎಂಬುದು ಅವರ ತಾಯಿಯ ಆಸೆ. ಕಿಶನ್ ಶಾಲೆಗೆ ಹೋಗುವ ಸಂದರ್ಭದಲ್ಲಿ ಅವರ ತಾಯಿ ನೀನು ಡ್ಯಾನ್ಸರ್ ಆಗಬೇಕು ಎಂದು ಬಾಂಬೆಗೆ ಕಳುಹಿಸಿದ್ದರು. ಹಾಗೆಯೇ ಕಿಶನ್ ತಮ್ಮ ತಾಯಿಗೋಸ್ಕರ ತಮ್ಮ ಎಲ್ಲ ಆಸೆಯನ್ನು ಬಿಟ್ಟು 16ನೇ ವಯಸ್ಸಿಗೆ ಬಾಂಬೆಗೆ ಹೋಗುತ್ತಾರೆ. ಆ ಸಮಯದಲ್ಲಿ ಯಾರೇ ಡ್ಯಾನ್ಸರ್, ಆ್ಯಕ್ಟರ್ ಆಗುತ್ತೇನೆ ಎಂದರೆ ಕಿಶನ್ ಅವರ ಜೊತೆ ಹೋಗುತ್ತಿದ್ದರು ಎಂದು ಪ್ರಿಯಾಂಕಾ ಹೇಳಿದರು.

ಹೀಗೆ ಒಬ್ಬ ವ್ಯಕ್ತಿ ನಿನ್ನನ್ನು ಡ್ಯಾನ್ಸರ್ ಮಾಡುತ್ತೇನೆ ಎಂದು ಕಿಶನ್‍ನನ್ನು ತಮ್ಮ ಜೊತೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಅವರು ಕಿಶನ್‍ಗೆ ಲೈಂಗಿಕ ಕಿರುಕುಳಕ್ಕೆ ನೀಡಿದ್ದರು. ಆದರೆ ಆ ವಯಸ್ಸಿನಲ್ಲಿ ಕಿಶನ್ ಗೆ ಅದನ್ನು ಹೇಗೆ ತಡೆಯಬೇಕು ಎಂಬುದು ಗೊತ್ತಿರಲಿಲ್ಲ. ಪ್ರತಿ ಬಾರಿ ಆ ವ್ಯಕ್ತಿಯ ಕಿರುಕುಳ ನೀಡುತ್ತಿದ್ದಾಗ ಕಿಶನ್ ತಪ್ಪಿಸಿಕೊಂಡಿದ್ದರು. ಕಳೆದ ವರ್ಷವೂ ಕಿಶನ್ ಗೆ ಹೀಗೆ ಆಗಿದ್ದು, ಅದನ್ನು ತಡೆದರು ಎಂದರು.

ಕಿಶನ್ ಈ ವಿಷಯವನ್ನು ತಮ್ಮ ಲಾಸ್ಟ್ ಗರ್ಲ್ ಫ್ರೆಂಡ್ ಜೊತೆ ಹಂಚಿಕೊಂಡಿದ್ದರು. ಕಿಶನ್ ತುಂಬಾ ಹುಡುಗಿಯರೊಂದಿಗೆ ಡೇಟ್ ಮಾಡಿದ್ದು, ಅದರಲ್ಲಿ ಇಬ್ಬರು ನಿನ್ನ ಬಳಿ ಏನು ಇದೆ ಎಂದು ಅವಮಾನ ಮಾಡಿದ್ದರು. ಕಿಶನ್ ಈ ಮನೆಗೆ ಬಂದ ಮೇಲೆ ಶೈನ್, ವಾಸುಕಿ ಹಾಗೂ ಚಂದನಾ ಜೊತೆ ಕ್ಲೋಸ್ ಆಗಿದ್ದರು. ಹೀಗಿದ್ದರೂ ಅವರು ಏಕಾಂಗಿ ಆಗಿಯೇ ಇರುತ್ತಾರೆ ಎಂದು ಪ್ರಿಯಾಂಕಾ ಮನೆ ಮಂದಿಗೆ ತಿಳಿಸಿದರು.

Comments are closed.