ಮುಂಬೈ: ದೇಶಾದ್ಯಂತ ವ್ಯಾಪಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಸುದೀರ್ಘ ಕಾಲದಿಂದ ನಡೆಯುತ್ತಿದ್ದ ಟಿವಿ ಶೋ “ಸಾವಧಾನ್ ಇಂಡಿಯಾ” ಅದರೊಂದಿಗಿನ ಸಂಬಂಧವನ್ನು ಕಡಿದುಕೊಂಡಿರುವುದಾಗಿ ನಟ ಸುಶಾಂತ್ ಸಿಂಗ್ ಮಂಗಳವಾರ ಪ್ರಕಟಿಸಿದ್ದಾರೆ.
2011 ರಿಂದ ಕಾರ್ಯಕ್ರಮದ ನಿರೂಪಕರಾಗಿರುವ ಸುಶಾಂತ್ ಸಿಂಗ್ ಟ್ವಿಟರ್‌ನಲ್ಲಿಈ ಬಗೆಗೆ ಮಾಹಿತಿ ಹಂಚಿಕೊಂಡಿದ್ದಾರೆ.ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸುವುದೇ ನನ್ನ ಈ ನಿರ್ಧಾರದ ಹಿಂದಿನ ಉದ್ದೇಶ ಎಂದೂ ಅವರು ಸುಳಿವು ಕೊಟ್ಟಿದ್ದಾರೆ. ಆದರೆ ಸುಶಾಂತ್ ನಾನು ಈ ಮೂಲಕ ಮೌಖಿಕ ಸ್ವಾತಂತ್ರಕ್ಕೆ “ಚಿಕ್ಕ ಕಾಣಿಕೆ”ಯೊಂದನ್ನು ಸಮರ್ಪಿಸುತ್ತಿದ್ದೇನೆ ಎಂದಿದ್ದಾರೆ.
ನಟನ ಟ್ವೀಟ್ ಅನ್ನು ನೋಡಿದ ಅಭಿಮಾನಿಗಳು ಸುಶಾಂತ್ “ಸತ್ಯವನ್ನು ಮಾತನಾಡಲು ಕೊಟ್ಟ ಬೆಲೆ” ಇದಾಗಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಉತ್ತರವಾಗಿ ನಟ “ಇದು ಅತ್ಯಂತ ಅಲ್ಪ ಕಾಣಿಕೆ, ಇಷ್ಟಾಗದೆ ಹೋದರೆ ನೀವು ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರುಗಳನ್ನು ಹೇಗೆ ಎದುರಿಸುತ್ತೀರಿ?” ಎಂದಿದ್ದಾರೆ.
ನಟ ಸುಶಾಂತ್ ರಾಜ್‌ಕುಮಾರ್ ಸಂತೋಶಿ ಅವರ 2002ರಲ್ಲಿ ತೆರೆಕಂಡಿದ್ದ ಚಿತ್ರ “ದಿ ಲೆಜೆಂಡ್ ಆಫ್ ಭಗತ್ ಸಿಂಗ್” ನಲ್ಲಿ ಸುಖದೇವ್ ಪಾತ್ರಧಾರಿಯಾಗಿದ್ದರು.
ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನೂ ನಟ ಖಂಡಿಸಿದ್ದಾರೆ. ಪೊಲೀಸರು ಕ್ಯಾಂಪಸ್‌ಗೆ ಪ್ರವೇಶಿಸಿ ಕಾಯ್ದೆಯ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸಿದ್ದ ವೇಳೆ ವಿವಿ ಕ್ಯಾಂಪಸ್ ಭಾನುವಾರ ಯುದ್ಧಭೂಮಿಯಾಗಿ ಮಾರ್ಪಟ್ಟಿತ್ತು.
“ಸಾವಧಾನ್ ಇಂಡಿಯಾ” ಪ್ರಸ್ತುತ ಸ್ಟಾರ್ ಭಾರತ್‌ನಲ್ಲಿ ಪ್ರಸಾರವಾಗುತ್ತಿದ್ದು, ಸುಶಾಂತ್ ನಿರ್ಗಮಿಸಿದ ಸುದ್ದಿಗೆ ನೆಟ್‌ವರ್ಕ್ ಇನ್ನೂ ಪ್ರತಿಕ್ರಯಿಸಿಲ್ಲ.
Comments are closed.