ಮನೋರಂಜನೆ

ಹುಡುಗಿಯರು ಉಡುಪು ಧರಿಸುವಾಗ ತೊಂದರೆ ಕೊಟ್ಟ ಶೈನ್ ಶೆಟ್ಟಿ?

Pinterest LinkedIn Tumblr


‘ಬಿಗ್ ಬಾಸ್ ಕನ್ನಡ ಸೀಸನ್‌ 7’ರಲ್ಲಿ ಸ್ಪರ್ಧಿಗಳು ಆಡಿದ ಕೆಲವು ಮಾತುಗಳು ಸಾಕಷ್ಟು ಸುದ್ದಿ ಮಾಡಿತ್ತು. ಶೈನ್ ಶೆಟ್ಟಿ ಮತ್ತು ಚೈತ್ರಾ ಕೋಟೂರ್ ಜೋಡಿಯಾಗಿ ಟಾಸ್ಕ್ ಮಾಡಬೇಕಿತ್ತು. ಈ ಸಮಯದಲ್ಲಿ ಇವರಿಬ್ಬರು ಪ್ರೇಮಿಗಳ ತರ, ಚೈತ್ರಾ ಪ್ರಗ್ನೆಂಟ್ ಆದ ರೀತಿಯಲ್ಲಿ ಡ್ರಾಮಾ ಮಾಡುತ್ತಿದ್ದರು. ಈ ತಮಾಷೆ ಎಲ್ಲರಿಗೂ ತಿಳಿದಿದ್ದ ವಿಚಾರವೇ. ಈಗ ಶೈನ್ ಶೆಟ್ಟಿ ವಿರುದ್ಧ ಭೂಮಿ ಶೆಟ್ಟಿ, ಚಂದನಾ ಆವಾಜ್ ಹಾಕಿದ್ದಾರೆ. ಆದರೆ ಇದು ಯಾವುದು ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಿಲ್ಲ. ಬದಲಾಗಿ ವೂಟ್‌ನ ಅನ್‌ಸೀನ್ ಕಥೆಗಳಲ್ಲಿ ನೋಡಬಹುದು.

ಶೈನ್ ಶೆಟ್ಟಿಗೆ ಆವಾಜ್ ಹಾಕಿದ ಭೂಮಿ, ಚಂದನಾ
ಟಾಸ್ಕ್ ಬಗ್ಗೆ ಹರೀಶ್ ರಾಜ್ ಮತ್ತು ಶೈನ್ ಶೆಟ್ಟಿ ಚರ್ಚೆ ಮಾಡುತ್ತಿದ್ದರು. ಆ ಸಮಯದಲ್ಲಿ ಡ್ರೆಸ್ ಚೇಂಜ್ ಮಾಡಿಕೊಂಡು ರೂಮ್‌ನಿಂದ ಹೊರಗಡೆ ಬಂದ ಚಂದನಾ ಮತ್ತು ಭೂಮಿ ಶೆಟ್ಟಿ ಅವರು ಶೈನ್ ಶೆಟ್ಟಿಗೆ ಆವಾಜ್ ಹಾಕಿದ್ದಾರೆ. “ಹೆಣ್ಣುಮಕ್ಕಳು ಡ್ರೆಸ್ ಚೇಂಜ್ ಮಾಡುವಾಗ ತೊಂದರೆ ಕೊಡುತ್ತೀಯಾ? ಮದುವೆಯಾಗಿದ್ದೀಯಾ, ಹೆಂಡತಿ ಪ್ರಗ್ನೆಂಟ್ ಇದ್ದಾಗಲೇ ಈ ರೀತಿ ಆಡುತ್ತಿದ್ದೀಯಾ? ಎಷ್ಟು ಧೈರ್ಯ ನಿಂಗೆ? ಏನು ಅಂದುಕೊಂಡಿದ್ದೀಯಾ ನಿನ್ನನ್ನು ನೀನು? ಸೈಡ್ ಕ್ರಾಪ್ ಬಾಚಿದ ತಕ್ಷಣ ಈ ರೀತಿ ಆಡ್ತೀಯಾ? ಮದುವೆ ಆಗಿ ತಂದೆ ಅಗ್ತಿರೋ ನಿನಗೆ ಸಣ್ಣ ಕಾಮನ್‌ ಸೆನ್ಸ್ ಕೂಡ ಇಲ್ವಾ?” ಎಂದು ಭೂಮಿ ಶೆಟ್ಟಿ ಮತ್ತು ಚಂದನಾ ಅವರು ಶೈನ್‌ ಕಿವಿ ಹಿಡಿದು, ಅವರ ಮುಖ ತಿರುಗಿಸಿದ್ದಾರೆ. ಆದರೆ ಚಂದನಾ ಮತ್ತು ಭೂಮಿ ಪಕ್ಕಾ ರೌಡಿಯಂತೆ, ಟಾಮ್ ಬಾಯ್‌ನಂತೆ ನಡೆದುಕೊಂಡಿದ್ದಾರೆ. ಇದೆಲ್ಲ ಕೇವಲ ತಮಾಷೆಯಷ್ಟೇ.

ಶೈನ್ ಶೆಟ್ಟಿಗೆ ಬೈಯ್ಯಬೇಡಿ ಎಂದ ಚೈತ್ರಾ ಕೋಟೂರ್
ಶೈನ್ ಶೆಟ್ಟಿಗೆ ಆವಾಜ್ ಹಾಕುವ ವೇಳೆ ಶೈನ್ ಸುಮ್ಮನೆ ಕುಳಿತಿದ್ದರು. ಅಲ್ಲೇ ಇದ್ದ ಚೈತ್ರಾ ಈ ವಾರ ಅವರಿಗೆ ಬಿಜಿನೆಸ್ ಇಲ್ಲ, ಡಲ್ ಆಗಿದ್ದಾರೆ, ಸುಮ್ಮನೆ ಇರಿ ಎಂದು ಆ ಇಬ್ಬರು ರೌಡಿಬೇಬಿಗಳಿಗೆ ವಿನಂತಿ ಮಾಡಿಕೊಂಡಿದ್ದಾರೆ. ನಾನು ಪ್ರಗ್ನೆಂಟ್, ನನ್ನ ಮಗುವಿನ ತಂದೆ ಶೈನ್ ಶೆಟ್ಟಿ, ಅವರಿಗೆ ತೊಂದರೆ ಕೊಡಬೇಡಿ, ನಾನು ಅವರನ್ನು ನೋಡ್ಕೋಬೇಕು, ಅವರಿಗೆ ಬೇಜಾರಾಗಿದೆ ಎಂದು ಚೈತ್ರಾ ಕೋಟೂರ್ ಅವರು ಭೂಮಿ, ಚಂದನಾರನ್ನು ಕೇಳಿಕೊಂಡಿದ್ದಾರೆ.

ರಿಯಾಲಿಟಿ ಶೋಗಳಿಂದ ಸೆಲೆಬ್ರಿಟಿಗಳ ನೈಜ ವ್ಯಕ್ತಿತ್ವ ಬಹಿರಂಗವಾಗತ್ತಾ?
ನಾನು ಮುಟ್ಟಿಲ್ಲ, ಮುಟ್ಟದೇನೆಯೇ ಪ್ರಗ್ನೆಂಟ್, ನನ್ನ ಮಗು ಎನ್ನುತ್ತಿದ್ದೀರಾ ಅಂತ ಶೈನ್ ಶೆಟ್ಟಿ ಹೇಳಿದಾಗ ಭೂಮಿ ಶೆಟ್ಟಿ ಅವರು ಮುಟ್ಟದೇನೆ ಈ ರೀತಿ, ಮುಟ್ಟಿದ್ರೆ ಏನು ಗತಿ? ಎಂದಿದ್ದಾರೆ. ಒಟ್ಟಾರೆಯಾಗಿ ಬಿಗ್ ಬಾಸ್ ಮನೆಯಲ್ಲಿ ಮನ ಬಂದಂತೆ ಏನೇನೋ ಮಾತನಾಡಿಕೊಳ್ಳುತ್ತಿದ್ದಾರೆ ಕೆಲವರು. ಕ್ಯಾಮರಾದಲ್ಲಿ ಜಾಸ್ತಿ ಕಾಣಿಸಿಕೊಳ್ಳಲು ಈ ರೀತಿ ಬಿಹೇವ್ ಮಾಡುತ್ತಿದ್ದಾರೆ ಕೆಲ ಮಂದಿ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಏನೇ ಇರಲಿ ಬಿಗ್ ಬಾಸ್ ರಿಯಾಲಿಟಿ ಶೋ ಆಗಿರುವ ಕಾರಣಕ್ಕೆ ಸೆಲೆಬ್ರಿಟಿಗಳ ನೈಜ ವ್ಯಕ್ತಿತ್ವ ಏನು ಅನ್ನುವುದು ಸ್ವಲ್ಪವಾದರೂ ತಿಳಿಯುತ್ತದೆ. ಆದರೆ 24 ಗಂಟೆಯಲ್ಲಿ ನಡೆಯುವ ದೃಶ್ಯವನ್ನು ಪ್ರೇಕ್ಷಕರು ನೋಡುವುದು ದಿನಕ್ಕೆ 1.5ಗಂಟೆ ಮಾತ್ರ. ಹೀಗಾಗಿ ಬಿಗ್ ಬಾಸ್ ಸ್ಪರ್ಧಿಗಳು ಹೀಗೆ ಎಂದು ಭಾವಿಸುವುದಕ್ಕಿಂತ ಮುಂಚೆ ನೂರು ಬಾರಿ ಯೋಚಿಸುವುದು ಒಳಿತು.

Comments are closed.