ಮನೋರಂಜನೆ

ಅಚ್ಚರಿ ತಂದ ‘ದಬಾಂಗ್ 3’ ಪ್ರಥಮ ದಿನದ ಗಳಿಕೆ!!

Pinterest LinkedIn Tumblr


ಸಲ್ಮಾನ್ ಖಾನ್ ಅಭಿನಯದ ‘ದಬಾಂಗ್ 3’ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇತ್ತು. ಯಾಕೆಂದರೆ, ‘ದಬಾಂಗ್‌’ನ ಈ ಹಿಂದಿನ ಎರಡು ಸರಣಿಗಳು ದೊಡ್ಡ ಹಿಟ್ ಎನಿಸಿಕೊಂಡಿದ್ದವು. ಅಲ್ಲದೆ, ಅಲ್ಲಿನ ಭರಪೂರ ಮನರಂಜನೆ ಈ ಸರಣಿಯಲ್ಲಿ ಇರಲಿದೆ ಎಂಬ ನಿರೀಕ್ಷೆ ಸಹಜ. ಆದರೂ, ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಇದು ಕಲೆಕ್ಷನ್‌ ಮೇಲೆ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ. ಇದೀಗ ‘ದಬಾಂಗ್ 3’ ಚಿತ್ರದ ಮೊದಲ ದಿನದ ಗಳಿಕೆಯ ಮಾಹಿತಿ ಸಿಕ್ಕಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ!!

ಫಸ್ಟ್ ಡೇ 24.50 ಕೋಟಿ ರೂ.!
ಸಲ್ಮಾನ್ ಖಾನ್ ನಟನೆಯ ಹಿಂದಿನ ಸಿನಿಮಾ ‘ಭಾರತ್‌’ ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋಲು ಕಂಡಿತ್ತು. ಹೀಗಿದ್ದರೂ, ಮೊದಲ ದಿನ ಆ ಸಿನಿಮಾ 42.30 ಕೋಟಿ ರೂ. ಗಳಿಸಿತ್ತು. ಆದರೆ, ‘ದಬಾಂಗ್ 3’ ಚಿತ್ರವು ಮೊದಲ ದಿನ ಗಳಿಸಿದ್ದು ಬರೀ 24.50 ಕೋಟಿ ರೂ. ಮಾತ್ರ. ಈ ಚಿತ್ರದಲ್ಲಿ ಸಲ್ಮಾನ್ ಖಾನ್‌ ಜತೆಗೆ ಸುದೀಪ್‌ ಕೂಡ ಇದ್ದರು. ಅಲ್ಲದೆ, ಹಿಂದಿ ಮಾತ್ರವಲ್ಲದೆ, ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ‘ದಬಾಂಗ್ 3’ ತೆರೆಕಂಡಿತ್ತು. ಆದರೂ, ಗಳಿಕೆ ದಾಖಲೆ ಬರೆದಿಲ್ಲ.

2ನೇ ಅತೀ ಕಡಿಮೆ ಗಳಿಕೆ
ಸಲ್ಮಾನ್ ಖಾನ್ ಅವರ ಕರಿಯರ್‌ನ ಈ ಹಿಂದಿನ ಐದು ವರ್ಷಗಳಲ್ಲಿ ಇದು 2ನೇ ಅತೀ ಕಡಿಮೆ ಗಳಿಕೆ ಆಗಿದೆ. 2014ರಲ್ಲಿ ತೆರೆಗೆ ಬಂದ ‘ಕಿಕ್‌’ 26.40 ಕೋ., 2015ರಲ್ಲಿ ಬಂದ ‘ಭಜರಂಗಿ ಭಾಯಿಜಾನ್‌’ 27.25 ಕೋ., ‘ಪ್ರೇಮ್ ರತನ್ ಧನ್‌ ಪಾಯೋ’ 40.35 ಕೋ., 2016ರಲ್ಲಿ ‘ಸುಲ್ತಾನ್‌’ 36.54 ಕೋ., 2017ರಲ್ಲಿ ‘ಟ್ಯೂಬ್‌ಲೈಟ್‌’ 21.15 ಕೋ., ‘ಟೈಗರ್ ಜಿಂದಾ ಹೈ’ 34.10 ಕೋ., 2018ರಲ್ಲಿ ‘ರೇಸ್‌ 3’ 29.17 ಕೋ., 2019ರಲ್ಲಿ ಬಂದ ‘ಭಾರತ್’ 42.30 ಕೋಟಿ ರೂ.ಗಳನ್ನು ಮೊದಲ ದಿನವೇ ಗಳಿಸಿದ್ದವು. ಇದರಲ್ಲಿ ‘ಟ್ಯೂಬ್‌ಲೈಟ್‌’ ಅತೀ ಕಡಿಮೆ ಗಳಿಕೆ ಆಗಿದ್ದು, ಅದು ಬಿಟ್ಟರೆ ‘ದಬಾಂಗ್ 3’ ಆ ಸ್ಥಾನದಲ್ಲಿ ಬಂದು ನಿಲ್ಲುತ್ತದೆ.

ಪ್ರತಿಭಟನೆ ಬಿಸಿ!
ಹಾಗೇ ನೋಡಿದರೆ, 24 ಕೋಟಿ ರೂ. ಗಳೇನು ಸಣ್ಣ ಮೊತ್ತವಲ್ಲ. ಅಲ್ಲದೆ, ಈ ಮೇಲ್ಕಂಡ ಬಹುತೇಕ ಸಲ್ಮಾನ್‌ ಸಿನಿಮಾಗಳು ತೆರೆಕಂಡಿರುವುದು ರಜಾ ದಿನಗಳಲ್ಲಿ. ಆಗ ಪ್ರೇಕ್ಷಕರ ಸಂಖ್ಯೆ ಕೊಂಚ ಹೆಚ್ಚೇ ಇರುತ್ತದೆ. ಆದರೆ, ದೇಶದಲ್ಲಿ ಈಗ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಶುರುವಾಗಿದೆ. ಕೆಲವೆಡೆ 144 ಜಾರಿಯಲ್ಲಿದೆ. ಯಾವುದೇ ರಜಾ ದಿನವೂ ಇಲ್ಲ. ಹೀಗಿದ್ದರೂ ‘ದಬಾಂಗ್ 3′ 24 ಕೋಟಿ ರೂ. ಗಳಿಸಿರುವುದು ದಾಖಲೆಯೇ ಸರಿ ಎಂಬ ಲೆಕ್ಕಚಾರದ ಮಾತುಗಳು ಕೇಳಿಬಂದಿವೆ.

ವಾಂಟೆಡ್‌’ ನಂತರ ಸಲ್ಮಾನ್‌ಗೆ ಪ್ರಭುದೇವ ನಿರ್ದೇಶಿಸಿರುವ ಎರಡನೇ ಸಿನಿಮಾ ಇದಾಗಿದ್ದು, ಸೋನಾಕ್ಷಿ ಸಿನ್ಹಾ, ಸಾಯಿ ಮಂಜ್ರೇಕರ್ ನಾಯಕಿಯರಾಗಿ ನಟಿಸಿದ್ದಾರೆ. ಬಾಲಿ ಸಿಂಗ್ ಎಂಬ ಖಡಕ್ ವಿಲನ್ ಪಾತ್ರಕ್ಕೆ ‘ಕಿಚ್ಚ’ ಸುದೀಪ್ ಬಣ್ಣ ಹಚ್ಚಿದ್ದಾರೆ. ಕನ್ನಡಕ್ಕೂ ಈ ಸಿನಿಮಾ ಆಗಿದೆ.

Comments are closed.