ಬೆಂಗಳೂರು: ಸ್ಯಾಂಡಲ್ವುಡ್ ನಟ ಉಪೇಂದ್ರ ಮತ್ತೊಮ್ಮೆ ರಾಜಕೀಯ ವಿಷಯವಾಗಿ ಸುದ್ದಿಯಲ್ಲಿದ್ದಾರೆ. ಪ್ರಜಾಕೀಯ ಪಕ್ಷದ ಮೂಲಕ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ರಿಯಲ್ ಸ್ಟಾರ್ ಪ್ರಸಕ್ತ ರಾಜಕೀಯ ವ್ಯವಸ್ಥೆ ಬಗ್ಗೆ ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ.
ನಿಜವಾದ ದೇಶಪ್ರೇಮಿ ಮೊದಲು ರಾಜಕೀಯದ ದೋಷಗಳನ್ನು ವಿರೋದಿಸುತ್ತಾನೆ. ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಾನೆ, ರಾಜಕೀಯದಲ್ಲಿ ತಪ್ಪುಗಳಿದೆ ಎಂದು ಗೊತ್ತಿದ್ದೂ ಅದನ್ನು ಸಮರ್ಥಿಸಿಕೊಳ್ಳುವವನು, ಒಂದೋ ಹಣಕ್ಕೆ ಮಾರಾಟವಾಗಿರುತ್ತಾನೆ ಇಲ್ಲಾ ಭಾವನಾತ್ಮಕ ಮೂರ್ಖನಾಗಿರುತ್ತಾನೆ ಎಂದು ಟ್ವೀಟ್ ಮಾಡಿದ್ದಾರೆ.
ಬರೀ ತಪ್ಪುಗಳಿಂದಲೇ ಕೂಡಿರುವ ರಾಜಕೀಯ ವ್ಯವಸ್ಥೆ. ಈ ಭ್ರಷ್ಟ ಅವ್ಯವಸ್ಥೆಯಿಂದ ಸಮಾಜದ ತಪ್ಪುಗಳನ್ನು ಸರಿಪಡಿಸುತ್ತೇವೆ ಎಂಬ ಭ್ರಮೆ, ಅದನ್ನು ಇಂದಿಗೂ ನಂಬುತ್ತಿರುವ ಯುವ ಸಮುದಾಯ ಎಂದು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ರಾಜಕೀಯ ವ್ಯವಸ್ಥೆಯಲ್ಲಿನ ಲೋಷದೋಷಗಳನ್ನು ಎತ್ತಿ ಹಿಡಿಯುತ್ತಿರುವ ಉಪೇಂದ್ರ ಇದೀಗ ಮತ್ತಷ್ಟು ಜಾಗೃತಿ ಮೂಡಿಸಲು ಟ್ವೀಟ್ ಮಾಡಿದ್ದಾರೆ. ಆದರೆ ಟ್ವೀಟ್ಗಳು ಪೌರತ್ವ ಕಾಯ್ದೆಯ ಪರವೊ-ವಿರೋಧವೊ ಎಂಬುದನ್ನು ನಿರ್ಧರಿಸುವುದು ನಿಮ್ಮ ವಿವೇಚನೆಗೆ ಬಿಟ್ಟದ್ದು.
Comments are closed.