ಕನ್ನಡದಲ್ಲಿ ಸಾಕಷ್ಟು ಧಾರಾವಾಹಿಗಳು ಈ ವರ್ಷ ಮುಗಿದಿವೆ, ಜೊತೆಗೆ ಪ್ರಾರಂಭವಾಗಿವೆ. ಕಲರ್ಸ್ ಕನ್ನಡ ವಾಹಿನಿಯಲ್ಲಂತೂ ಬಹಳಷ್ಟು ಧಾರಾವಾಹಿಗಳು ಮುಕ್ತಾಯವಾಗಿವೆ. ಈಗ ಇನ್ನೊಂದು ಮೆಗಾ ಧಾರಾವಾಹಿ ಮುಕ್ತಾಯವಾಗುತ್ತಿದೆ. ಡಿಸೆಂಬರ್ 2, 2013ರಂದು ಈ ಆರಂಭವಾಗಿತ್ತು. 1581 ಎಪಿಸೋಡ್‌ಗಳು ಇಲ್ಲಿಯವರೆಗೆ ಪ್ರಸಾರವಾಗಿವೆ. ಆದರೆ ಇದರ ಬಗ್ಗೆ ಕಲರ್ಸ್ ವಾಹಿನಿ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ.
ಆರು ವರ್ಷಗಳಿಂದ ಪ್ರಸಾರವಾಗುತ್ತಿದ್ದ ‘ಅಗ್ನಿಸಾಕ್ಷಿ’ ಧಾರಾವಾಹಿ ಮುಕ್ತಾಯವಾಗುತ್ತಿದೆ. ಡಿಸೆಂಬರ್ 30ರಿಂದ ಜನವರಿ 4ರವರೆಗೆ ಈ ಧಾರಾವಾಹಿಯ ಅಂತಿಮ ಹಂತ ಪ್ರಸಾರವಾಗಲಿದೆಯಂತೆ. ಆದರೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ವೈಷ್ಣವಿ ಗೌಡ ಮತ್ತು ವಿಜಯ್ ಸೂರ್ಯ, ರಾಜೇಶ್ ಧ್ರುವ, ಸುಕೃತಾ ನಾಗರಾಜು ಅವರಿಗೆ ತುಂಬಾನೇ ಖ್ಯಾತಿ ತಂದುಕೊಟ್ಟ ಧಾರಾವಾಹಿಯಿದು. ವಿಜಯ್ ಸೂರ್ಯ ಈ ಧಾರಾವಾಹಿಯಿಂದ ಕೆಲ ತಿಂಗಳುಗಳ ಹಿಂದೆಯೇ ಹೊರಗೆಬಿದ್ದು, ಮತ್ತೊಂದು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಆಗಲೇ ವೈಷ್ಣವಿ ಗೌಡ ಕೂಡ ಈ ಧಾರಾವಾಹಿಯಿಂದ ಹೊರಬೀಳುತ್ತಾರೆ ಎಂಬ ಗಾಸಿಪ್ ಹರಿದಾಡಿತ್ತು. “ಇಲ್ಲ, ನಾನು ಈ ಧಾರಾವಾಹಿಯಲ್ಲೇ ನಟಿಸುತ್ತೇನೆ” ಎಂದು ವೈಷ್ಣವಿ ಹೇಳಿಕೆ ಕೊಟ್ಟು ವದಂತಿಗಳಿಗೆ ಫುಲ್‌ಸ್ಟಾಪ್ ಇಟ್ಟಿದ್ದರು.
ವೈಷ್ಣವಿ ಮತ್ತು ವಿಜಯ್ ಸೂರ್ಯ ನಡುವೆ ಹರಿದಿತ್ತು ಗಾಸಿಪ್
ವೈಷ್ಣವಿ ಗೌಡ ಮತ್ತು ವಿಜಯ್ ಸೂರ್ಯ ಅವರ ತೆರೆ ಮೇಲಿನ ಕೆಮಿಸ್ಟ್ರಿ ನೋಡಿದ ಕೆಲ ಪ್ರೇಕ್ಷಕರು ಇವರಿಬ್ಬರು ಮದುವೆಯಾಗುತ್ತಾರೆ, ಮದುವೆಯಾದರೆ ಚೆಂದ ಎಂದು ಹಲವು ಬಾರಿ ಹೇಳಿದ್ದರು. ಆಗೆಲ್ಲ ವಿಜಯ್ ಮತ್ತು ವೈಷ್ಣವಿ ಇಬ್ಬರೂ ನಾವಿಬ್ಬರು ಒಳ್ಳೆಯ ಫ್ರೆಂಡ್ಸ್, ಆ ರೀತಿ ಏನೂ ಇಲ್ಲ ಎಂದು ಹೇಳಿದ್ದರು. ಯಾವಾಗ ವಿಜಯ್ ಸೂರ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟರೋ ಆಗ ಈ ಗೊಂದಲಕ್ಕೆ ತೆರೆ ಬಿದ್ದಿತು.
ವಿಜಯ್ ಸೂರ್ಯ ಧಾರಾವಾಹಿಯಿಂದ ಹೊರಬಿದ್ದಿದ್ದಕ್ಕೆ ಬೇಸರಮಾಡಿಕೊಂಡಿದ್ದ ಪ್ರೇಕ್ಷಕರು
ವಿಜಯ್ ಸೂರ್ಯ ಧಾರಾವಾಹಿಯಿಂದ ಹೊರಬಿದ್ದಮೇಲೆ ವೀಕ್ಷಕರು ಸ್ವಲ್ಪ ಬೇಸರ ಮಾಡಿಕೊಂಡಿದ್ದರು. ಆದರೆ ಈ ಬದಲಾವಣೆಯನ್ನು ಒಪ್ಪಿಕೊಳ್ಳಲೇಬೇಕಿತ್ತು ಅಥವಾ ಧಾರಾವಾಹಿಯನ್ನು ನೋಡುವುದು ಬಿಡಬೇಕಿತ್ತು. ಏನೇ ಆಗಲಿ, 6 ವರ್ಷಗಳ ಕಾಲ ‘ಅಗ್ನಿಸಾಕ್ಷಿ’ ಧಾರಾವಾಹಿ ಪ್ರೇಕ್ಷಕರನ್ನು ರಂಜಿಸಿದೆ, ತನ್ನದೇ ಆದ ವೀಕ್ಷಕ ಬಳಗವನ್ನು ಕೂಡ ಹೊಂದಿದೆ. ಆದರೆ ಈಗ ಈ ಧಾರಾವಾಹಿಗೆ ಅಂತ್ಯ ಹೇಳಬೇಕಿರುವುದು ಅನಿವಾರ್ಯವಾಗಿದೆ. ಈ ಧಾರಾವಾಹಿಯ ಬದಲು ಇನ್ನೊಂದು ಧಾರಾವಾಹಿ ಪ್ರಸಾರವಾಗಲಿದೆ.
Comments are closed.