ಮನೋರಂಜನೆ

ಬಾಲಿವುಡ್ ನಿರ್ಮಾಪಕಿಯೊಬ್ಬರ ಮೇಲೆ ಹಲ್ಲೆ ಮಾಡಿದ ನಟಿ ಸಂಜನಾ

Pinterest LinkedIn Tumblr

ಬೆಂಗಳೂರು: ಗಂಡ-ಹೆಂಡತಿ ಚಿತ್ರದ ಮೂಲಕ ಹಲ್ ಚಲ್ ಸೃಷ್ಠಿಸಿದ್ದ ನಟಿ ಸಂಜನಾ ಗಲ್ರಾನಿ ಅವರು ಪಾರ್ಟಿ ಗುಂಗಲ್ಲಿ ಬಾಲಿವುಡ್ ನಿರ್ಮಾಪಕಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರಿನ ಖಾಸಗಿ ಪಬ್ ವೊಂದರಲ್ಲಿ ಡಿಸೆಂಬರ್ 24ರಂದು ಒಂದೇ ಟೇಬಲ್ ನಲ್ಲಿ ಸಂಜನಾ ಹಾಗೂ ನಿರ್ಮಾಪಕಿ ವಂದನಾ ಜೈನ್ ಪಾರ್ಟಿ ಮಾಡುತ್ತಿದ್ದರು. ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಮಾತಿನ ಚಕಮಿಕಿ ವಿಕೋಪಕ್ಕೆ ತಿರುಗಿದಾಗ ಸಂಜನಾ ಅವರು ವಿಸ್ಕಿ ಗ್ಲಾಸ್ ತೆಗೆದುಕೊಂಡು ವಂದನಾ ಮೂಗಿಗೆ ಹೊಡೆದಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆ ಬಳಿಕ ವಂದನಾ ಜೈನ್ ಅವರು ಕಬ್ಬನ್ ಪಾರ್ಕ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಮಾತನಾಡಿರುವ ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್ ಅವರು ಸಂಜನಾ ಅವರು ಗಲಾಟೆ ಮಾಡಿದ್ದಾರೆ ಎಂದು ದೂರು ಬಂದಿದೆ.

ವಂದನಾ ಜೈನ್ ಅವರು ದೂರು ನೀಡಿದ್ದು ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎನ್ ಸಿಆರ್ ದಾಖಲಾಗಿದ್ದು ದೂರುದಾರರು ಹೆಚ್ಚಿನ ತನಿಖೆಗೆ ನ್ಯಾಯಾಲಯದಲ್ಲಿ ಅನುಮತಿ ಪಡೆದರೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಖಾಸಗಿ ಪಬ್ ನಲ್ಲಿ ನಡೆದ ಗಲಾಟೆಯ ವಿಡಿಯೋ ನನ್ನ ಬಳಿ ಇದೆ ಎಂದು ಸಂಜನಾ ಹೇಳಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಈ ವಿಡಿಯೋವನ್ನು ವೈರಲ್ ಮಾಡಲ್ಲ. ನನಗೆ ಪ್ರಚಾರ ಬೇಡ ಎಂದು ಹೇಳಿದ್ದಾರೆ.

Comments are closed.